ENGLISH   |   KANNADA

Blogದಿನಾಂಕ:12.02.2020 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:13.02.2020 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 202       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ವಿಜಯನಗರ ಠಾಣೆ.

ಪಿರ್ಯಾದಿ ದರ್ಶನ್‌.ಎಸ್‌. 15 ವರ್ಷ ರವರು ದಿ.11.02.2020 ರಂದು ಸಂಜೆ ಸುಮಾರು 06.30 ಗಂಟೆಯಲ್ಲಿ ಕೆ.ಹೆಚ್‌.ಬಿ.ಕಾಲೋನಿಯ ಸೇಂಟ್‌ ಜಾನ್ಸ್‌ ಸ್ಕೂಲ್‌ ಬಳಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಇಬ್ಬರು ಅಪರಿಚಿತರು ಸುಮಾರು 28 ರಿಂದ 30 ವರ್ಷದ ವ್ಯಕ್ತಿಗಳು ರಸ್ತೆ ಬಳಿಯಲ್ಲಿ ಬಿಳಿ ಬಣ್ಣದ ಕಾರ್‌ ನಿಲ್ಲಿಸಿಕೊಂಡು ಸಿಗರೇಟ್‌ ಸೇದುತ್ತಾ ನಿಂತುಕೊಂಡಿದ್ದು, ಅವರ ಬಳಿ ಹೋದಾಗ ಪಿರ್ಯಾದಿಯ ಮುಖಕ್ಕೆ ಸೀಗರೇಟ್‌ ಹೊಗೆಯನ್ನು ಬಿಟ್ಟರು ಪಿರ್ಯಾದಿಯು ಏಕೆ ಮುಖಕ್ಕೆ ಸಿಗರೇಟ್‌ ಹೊಗೆಯನ್ನು ಬಿಡುತ್ತಿದ್ದಿರಿ ಎಂದು ಕೇಳಿದ್ದು, ಆಗ ಅವರಲ್ಲಿ ಒಬ್ಬ ಅವಾಚ್ಯ ಶಬ್ದಗಳಿಂದ  ಬೈದು ರಸ್ತೆ ಬದಿಯಲ್ಲಿ ಬಿದ್ದಿದ್ದ ಮರದ ದೊಣ್ಣೆಯನ್ನು ತೆಗೆದುಕೊಂಡು ಎರಡು ಮುಂಗೈಗಳಿಗೆ ಹೊಡೆದು ಮೂಳೆಯು ಮುರಿದಿದ್ದು ನಂತರ ಪ್ರಲಕ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸದರಿ ಆರೋಪಿಗಳನ್ನು ಪತ್ತೆ ಮಾಡಿ ಕನೂನು ಕ್ರಮ ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

01

ವಿಜಯನಗರ ಠಾಣೆ.

ದಿನಾಂಕ;12/02/2020 ರಂದು ಮದ್ಯಾಹ್ನ 1530 ಗಂಟೆಯಲ್ಲಿ ಆರೋಫಿ ರವಿ & ಶಶಿಕುಮಾರ್ ರವರು ಹೂಟಗಳ್ಳಿ ಕೆ ಹೆಚ್ ಬಿ ಕಾಲೋನಿ ಜಂಕ್ಷನ್ ಬಳಿ ತಾವು ಕಳವು ಮಾಡಿದ್ದ ಟಿವಿಗಳೂ & ಕ್ಯಾಮೆರಾವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದು ಅನುಮಾನ ಬಂದು ಅವರುಗಳನ್ನು ವಿಚಾರಿಸಲಾಗಿ ಕಳ್ಳತನ ಮಾಡಿ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದು ಸದರಿ ಆರೋಪಿಗಳನ್ನು ಮಾಲು ಸಮೇತ ಠಾಣೆಗೆ ಹಾಜರ್ ಪಡಿಸು ಮುಂದಿನ ಕಾನೂನು ಕ್ರಮ ಜರುಗಿಸಲು ಪಿರ್ಯಾದಿ ರಾಮಸ್ವಾಮಿ ಹೆಚ್ ಸಿ-608, ಸಿಸಿಬಿ ಘಟಕ ರವರು ನೀಡಿದ ದೂರು

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

02

ಕೆ ಆರ್ ಸಂಚಾರ ಠಾಣೆ,

ದಿನಾಂಕ:12-02-2020 ರಂದು ಬೆಳಿಗ್ಗೆ 08-45 ಗಂಟೆ ಸಮಯದಲ್ಲಿ ಪಿರ್ಯಾದಿ ಕಿರಣ್ ಮತ್ತು ಆತನ ಸ್ನೇಹಿತರಾದ ಪವನ್‌‌ಕುಮಾರ್‌, ಬಾಬು ಪ್ರಸಾದ್‌, ಯೋಗೇಶಕುಮಾರ್‌‌ ರವರು ಮಹಾರಾಜ ಕಾಲೇಜ್‌‌ಗೆ ಹೋಗಲು ವಿಲೇಜ್‌ ಹಾಸ್ಟಲ್‌ನಿಂದ ನಡೆದುಕೊಂಡು ಮಾನಸಗಂಗೋತ್ರಿ, ಬೋಗಾದಿ-ಗದ್ದಿಗೆ ಮುಖ್ಯರಸ್ತೆಯಲ್ಲಿರುವ ಮೌಲ್ಯ ಭವನದ ಎದುರುಗಡೆ ಹೋಗಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದಾಗ ಬೋಗಾದಿ ಕಡೆಯಿಂದ ಸಿಟಿ ಕಡೆಗೆ KSRTC BUS NO. KA-09-F-5028 ವಾಹನವು ಬಂದು ನಿಂತಾಗ ಎಲ್ಲರೂ ಬಸ್‌‌ ಹತ್ತಿದರು ಅದರಂತೆ ಪಿರ್ಯಾದಿಯು ಬಸ್‌‌ಗೆ ಬಲಗಾಲನ್ನು ಹಾಕಿ ಮೇಲಕ್ಕೆ ಹತ್ತುತ್ತಿದ್ದಾಗ ಬಸ್‌ನ ನಿರ್ವಾಹಕ ಪ್ರಸನ್ನ ಪಿರ್ಯದಿಯು ಬಸ್ಸನ್ನು ಹತ್ತುವುದನ್ನು ಗಮನಿಸದೆ ಬೇಜವಬ್ದಾರಿತನ ತೋರಿರುವುದು ಹಾಗೂ ಬಸ್‌ ಚಾಲಕ ಪಿರ್ಯಾದಿಯು ಬಸ್ಸು ಹತ್ತುತ್ತಿದ್ದರರೂ ಸಹ ನಿರ್ಲಕ್ಷತೆಯಿಂದ ಬಸ್ಸನ್ನು ಮುಂದಕ್ಕೆ ಚಾಲನೆ ಮಾಡಿದಾಗ ಪಿರ್ಯಾದಿಯು ಬಸ್ಸಿನಿಂದ ಕೆಳಗೆ ಬಿದ್ದಾಗ ಬಸ್ಸಿನ ಎಡಭಾಗದ ಹಿಂದಿನ ಚಕ್ರಕ್ಕೆ ಕಾಲುಗಳು ಸಿಕ್ಕಿಕೊಂಡ ಪರಿಣಾಮ ಟೈರ್‌‌ನ ತುದಿ ಭಾಗ ಕಾಲುಗಳಿಗೆ ಉಜ್ಜಿಕೊಂಡು ಹೋಗಿದ್ದು, ಜೋರಾಗಿ ಕಿರುಚಿಕೊಂಡಾಗ ಬಸ್‌ ಚಾಲಕ ಬಸ್ಸನ್ನು ನಿಲ್ಲಿಸಿದ್ದು, ಬಸ್ಸಿನಲ್ಲಿದ್ದ ಪಿರ್ಯಾದಿ ಸ್ನೇಹಿತರು ಮತ್ತು ಜನರು ಪಿರ್ಯಾದಿಯನ್ನು ಪುಟ್‌ಪಾತ್‌ ಮೇಲೆ ಮಲಗಿಸಿ ಉಪಚರಿಸುತ್ತಿದ್ದಾಗ ಸ್ಥಳಕ್ಕೆ ಆಂಬ್ಯೂಲೆನ್ಸ್‌ ಬಂದಿದ್ದು, ಅದರಲ್ಲಿ ಪಿರ್ಯಾದಿಯನ್ನು ಅಲ್ಲಿನ ಸಾರ್ವಜನಿಕರು ಮತ್ತು ಸ್ನೇಹಿತರು ಡಿಆರ್‌ಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದ್ದು, ಚಿಕಿತ್ಸೆ ಮಾಡುತ್ತಿದ್ದ ಡಾಕ್ಟರ್‌ ಎರಡು ಕಾಲುಗಳಿಗೆ ಎಕ್ಸರೇ ಮಾಡಿ ಬಲಗಾಲಿಗೆ ಆಪರೇಷನ್‌ ಮಾಡಬೇಕು ಎಡಗಾಲಿಗೆ ಪ್ಸಾಸ್ಟಿಕ್ ಸರ್ಜರಿ ಮಾಡಬೇಕೆಂದು ತಿಳಿಸಿರುತ್ತಾರೆ. ಈ ಅಪಘಾತಕ್ಕೆ ಕಾರಣರಾದ KSRTC BUS NO. KA-09-F-5028 ಚಾಲಕ ಮತ್ತು ನಿರ್ವಾಹಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

ದೇವರಾಜ ಸಂಚಾರ ಠಾಣೆ.

ದಿನಾಂಕ;12-02-2020 ರಂದು ಮದ್ಯಾಹ್ನ  ಸುಮಾರು 12-00 ಗಂಟೆ ಸಮಯದಲ್ಲಿ ಪಿರ್ಯಾದಿ ಸಿ.ವಿ ಸತೀಶ್ ಮೂರ್ತಿ  ರವರು ಬೆಂಗಳೂರು-ನೀಲಗಿರಿ ರಸ್ತೆ ಹಾರ್ಡಿಂಗ್ ವೃತ್ತದ ಹತ್ತಿರ ಸೋಮಶ್ವರ ದೇವಸ್ಥಾನದ ಕಡೆಯಿಂದ ಫುಟ್ ಬಾಲ್ ಗ್ರೌಂಡ್ ಕಡೆಗೆ ನಡೆದುಕೊಂಡು ರಸ್ತೆ ದಾಟುತ್ತಿದ್ದಾಗ, ಹಾರ್ಡಿಂಗ್ ವೃತ್ತದ ಕಡೆಯಿಂದ ಬಂದ ಮಾರುತಿ ಓಮಿನಿ ಕಾರ್ ನಂಬರ್  ಸಿ.ಕೆ.ಎನ್. 6005  ರ ಚಾಲಕ ಸೈಯಾದ್ ಅಕ್ಬರ್ ರವರು ಕಾರ್ ಅನ್ನು ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ರಸ್ತೆ ದಾಟುತ್ತಿದ್ದ ಪಿರ್ಯಾದಿಯವರಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿಯವರು ಕೆಳಗೆ ಬಿದ್ದು ಎಡಭಾಗದ ಕಾಲಿಗೆ ಪೆಟ್ಟಾಗಿದ್ದು, ಕಾರ್ ಚಾಲಕ ಸಾರ್ವಜನಿಕರ ಸಹಾಯದಿಂದ ಪಿರ್ಯಾದಿಯವರನ್ನು ಮೇಲಕ್ಕೆ ಎತ್ತಿ ಉಪಚರಿಸಿ ನಂತರ ಪಿರ್ಯಾದಿಯವರನ್ನು ಜೆ.ಎಸ್.ಎಸ್. ಅಸ್ವತ್ರಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಕೆ.ಅರ್. ಅಸ್ವತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಪಿರ್ಯಾದಿಯವರು ಕೆ.ಅರ್. ಅಸ್ವತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದು, ಈ ಅಪಘಾತಕ್ಕೆ ಕಾರಣವಾಧ ಸದರಿ ಕಾರ್ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.  

10

ವಂಚನೆ ಪ್ರಕರಣ 

01

ಕುವೆಂಪುನಗರ ಠಾಣೆ.

ಪಿರ್ಯಾದಿ ನಂದಪ್ರಕಾಶ್, ಆರ್ ಕೆ ನಗರ ರವರ ಮಗಳನ್ನು ದಟ್ಟಗಳ್ಳಿ ನಿವಾಸಿ ವಿಷ್ಣು ಎಂಬಾತ ಪರಿಚಯ ಮಾಡಿಕೊಂಡು ಈಕೆಯ ಸ್ನೇಹ ಸಂಪಾದಿಸಿ, ಸ್ನೇಹದ ಹೆಸರಿನಲ್ಲಿ ನಂಬಿಸಿ ಈಕೆಯಿಂದ ಸುಮಾರು 140 ಗ್ರಾಂ ಚಿನ್ನದ ಒಡವೆಗಳನ್ನು ನಂಬಿಸಿ ಪಡೆದು, ವಾಪಸ್ ಕೊಡದೆ ಮೋಸ ಮಾಡಿ, ಕೇಳಲು ಹೋದ ಪಿರ್ಯಾದಿ ಮಗಳಿಗೆ ಹಾಗೂ ಪಿರ್ಯಾದಿಗೆ ಧಮ್ಕಿ ಹಾಕಿ, ಕೆಟ್ಟ ಭಾಷೆಗಳಿಂದ ನಿಂದಿಸಿ ತಲೆಮರೆಸಿಕೊಂಡು ಓಡಾಡುತ್ತಿರುವ ವಿಷ್ಣು ಹಾಗೂ ಅವನ ತಾಯಿ ವಿಮಲ ರವರ ವಿರುದ್ದ ಕಾನೂನು ಕ್ರಮ ಜರುಗಿಸಿ, ಮಗಳಿಂದ ನಂಬಿಸಿ ಮೋಸದಿಂದ ಪಡೆದುಕೊಂಡಿರುವ ಚಿನ್ನದ ಒಡವೆಗಳನ್ನು ಕೊಡಿಸಿಕೊಡಬೇಕಾಗಿ ಕೋರಿ ನೀಡಿದ ದೂರು.  

11

ಮನುಷ್ಯ  ಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

01

ಉದಯಗಿರಿ ಠಾಣೆ.

ದಿನಾಂಕ;12/02/2020 ರಂದು ಸಿಸಿಬಿ ಘಟಕದ ಸಂಘಟಿತ ಅಪರಾಧ ಮತ್ತು ರೌಡಿ ಪ್ರತಿಭಂದಕ ದಳದ ಆರಕ್ಷಕ ನಿರೀಕ್ಷಕರಾದ ಎ. ಮಲ್ಲೇಶ್ ರವರಿಗೆ ಗೌಸಿಯಾನಗರದ ಎ ಬ್ಲಾಕ್, 2 ನೇ ಕ್ರಾಸ್ ನಲ್ಲಿರುವ 3/2 ರಲ್ಲಿ ಸಮೀರ್ ಎಂಬಾತನು ಕಾನೂನು ಬಾಹಿರವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದಾನೆಂದು ಭಾತ್ಮೀದಾರರಿಂದ ಬಂದ ಮಾಹಿತಿ ಮೇರೆಗೆ  ಸದರಿ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪಿರ್ಯಾದಿ ಮಧ್ಯಾಹ್ನ 1-45 ಗಂಟೆಗೆ ಸದರಿ ಸ್ಥಳಕ್ಕೆ ಬಂದು ನೋಡಲಾಗಿ ಆರೋಪಿ ಸಮೀರ್ ಎಂಬಾತನನ್ನು ವಶಕ್ಕೆ ಪಡೆದು ಆತನ ವಶದಲ್ಲಿದ್ದ 3 ಇಂಡೇನ್ ಕಂಪನಿಯ ಭರ್ತಿ ಇರುವ ಸಿಲಿಂಡರ್,ಖಾಲಿ ಇರುವ ಇಂಡೇನ್ ಮತ್ತು ಭಾರತ್ ಕಂಪನಿಯ 2 ಸಿಲಿಂಡರ್, ಎಲೆಕ್ಟ್ರಾನಿಕ್ ತೂಕದ ಯಂತ್ರ-01, ಹಸಿರು ಬಣ್ಣದ 1 ಹೆಚ್.ಪಿ ಸಾಮರ್ಥ್ಯ ಇರುವ  ಮೋಟಾರ್ ಹಾಗೂ ನಗದನ್ನು ಅಮಾನತ್ತು ಪಡಿಸಿಕೊಂಡು ಯಾವುದೇ ರಹದಾರಿ ಇಲ್ಲದೇ ಅಕ್ರಮವಾಗಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಅನ್ನು ಅನಧಿಕೃತವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದಲ್ಲದೇ, ರೀಫಿಲ್ಲಿಂಗ್ ಮಾಡುತ್ತಿದ್ದ ಸ್ಥಳವು ಜನ ವಸತಿ ಪ್ರದೇಶವಾಗಿದ್ದು, ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿದ್ದಲ್ಲಿ ಅಪಾರ ಪ್ರಾಣ ಮತ್ತು ಆಸ್ತಿ ಹಾನಿಯಾಗುವ ಸಂಭವ ಹೆಚ್ಚಾಗಿ ಇರುವುದಾಗಿ ಸದರಿ ಆಸಾಮಿಯ ವಿರುದ್ದ ಕಾನೂನು ಕ್ರಮಕ್ಕಾಗಿ ಕೊಟ್ಟ ದೂರು.

 

 

MYSURU CITY TRAFFIC VIOLATION CASES

DATE  :12-02-2020

SLNO

HEADS

                                    NO. OF CASES

DR

KR

NR

SN

VV

TOTAL

1

TOTAL NUMBER OF FTVRS

         418

         295

        189

           76

         165

      1,143

2

TOTAL NUMBER OF CRR'S

         631

         303

        284

         640

         551

      2,409

3

TOTAL FINE AMOUNT COLLECTED

 1,09,500

    54,600

   48,700

    96,600

    85,700

 3,95,100

4

POLICE NOTICE ISSUED

           -  

           -  

 

           -  

 

           -  

5

PARKING TAGS

           -  

  /

 

           -  

 

           -  

6

FATAL

           -  

 

 

           -  

 

           -  

7

NON FATAL

            1

            1

 

           -  

 

             2

8

INTERCEPTOR CASES

           -  

          85

        101

           -  

           82

         268

9

SUSPENSION OF D.L.

           -  

           -  

 

           -  

 

           -  

11

Sec 283 IPC CASES

           -  

           -  

 

           -  

 

           -  

12

Sec 353 IPC CASES

           -  

           -  

 

           -  

 

           -  

13

TOWING CASES

           -  

            4

            6

             5

             3

           18Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®