ENGLISH   |   KANNADA

Blog



ದಿನಾಂಕ:13.02.2020 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:14.02.2020 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 168       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯಪ್ರಕರಣ

01

ಮಹಿಳಾ ಠಾಣೆ.

ಪಿರ್ಯಾದಿ ಅಭಿಜ್ಞ, #04, 25 ನೇ ಬ್ಲಾಕ್, 01 ನೇ ಹಂತ, ಜೆಎಸ್ಎಸ್ ನಗರ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿಯು ದಿನಾಂಕ:02.08.2017 ರಂದು ಆರೋಪಿ-1 ವಿಜಯರವರನ್ನು ಗುರುಹಿರಿಯರ ಸಮಕ್ಷಮ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ಆರೋಪಿ-1, ಆರೋಪಿ-2 ನಂದೀಶ್, ಆರೋಪಿ-3 ಅಭಿಲಾಷರವರುಗಳ ಬೇಡಿಕೆಯ ಮೇರೆಗೆ ಸಾಕಷ್ಟು ವರದಕ್ಷಿಣೆಯನ್ನು ಕೊಟ್ಟಿರುತ್ತಾರೆ. ಆರೋಪಿ-1 ರವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ರಜೆಯ ಸಮಯದಲ್ಲಿ ಮೈಸೂರಿಗೆ ಬರುತ್ತಿದ್ದು, ನಂತರದಲ್ಲಿ ಪಿರ್ಯಾದಿಗೆ ಆರೋಪಿ-1 ರವರು ಸಂಬಳದ ಹಣ ಕೊಡುವಂತೆ ಹಾಗೂ ತಂದೆಯ ಹೆಸರಿನಲ್ಲಿರುವ ಮನೆಯನ್ನು ಬರೆಯಿಸಿಕೊಂಡು ಬರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದು, ಆರೋಪಿ-4 ಚೆನ್ನಬಸಪ್ಪ, ಆರೋಪಿ-5 ಪ್ರೇಮಾ ರವರು ಸಹ ಸಂಬಳ ಕೊಡುವುದಿಲ್ಲವೆಂದು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದು, ದಿನಾಂಕ:15.07.2018 ರಂದು ಆರೋಪಿ-2, ಆರೋಪಿ-4, ಆರೋಪಿ-6 ಮಹದೇವಪ್ಪರವರು ಪಿರ್ಯಾದಿಯ ತಂದೆಯ ಮನೆಗೆ ಬಂದು ಬೈದು, ಬುದ್ದಿ ಕಲಿಸುತ್ತೇವೆಂದು ಪಿರ್ಯಾದಿಯ ತಂದೆಯವರಿಗೆ ಹೊಡೆಯಲು ಹೋಗಿರುತ್ತಾರೆ. ನಂತರದಲ್ಲಿ ಆರೋಪಿ-1 ರವರು ಹಣ ಹಾಗೂ ಮನೆಯನ್ನು ತನ್ನ ಹೆಸರಿಗೆ ಬರೆಯಿಸಿಕೊಂಡು ಬರದಿದ್ದರೆ ಡೈವೋರ್ಸ್ ಕೊಡುವುದಾಗಿ ಕೋರ್ಟ್ ನಿಂದ ನೋಟೀಸ್ ಕಳುಹಿಸಿದ್ದು, ಕೋರ್ಟ್ ಗೆ ಹೋಗಿ ವಾಪಸ್ಸು ಬರುತ್ತಿದ್ದ ಸಮಯದಲ್ಲಿ ಆರೋಪಿ-1, ಆರೋಪಿ-2, ಆರೋಪಿ-7 ಸುಂದರ್ ರಾಜ್ ರವರು  5 ಲಕ್ಷ ರೂಪಾಯಿ ಹಣ ಹಾಗೂ ಪ್ರತಿ ತಿಂಗಳ ಸಂಬಳ ಹಾಗೂ ಮನೆಯನ್ನು ಕೊಡುವುದಾದರೆ ಮಾತ್ರ ಕರೆದುಕೊಂಡು ಹೋಗುವುದಾಗಿ ಇಲ್ಲದಿದ್ದರೆ ಪಿರ್ಯಾದಿ ಹಾಗೂ ಅವರ ತಂದೆಯವರನ್ನು ಮುಗಿಸುವುದಾಗಿ  ಪ್ರಾಣ ಬೆದರಿಕೆ ಹಾಕಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಲು ನೀಡಿದ ದೂರು.

9

ರಸ್ತೆ ಅಪಘಾತ

04

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ;10-02-2020  ರಂದು  ಬೆಳಿಗ್ಗೆ 10:05 ಗಂಟೆ ಸಮಯದಲ್ಲಿ  ಪಿರ್ಯಾದಿ ಪುರುಷೋತ್ತಮ್ ರವರ  ಪತ್ನಿ ದಿವ್ಯಾ ಹಾಗೂ ಅವರ ತಮ್ಮ ಸಂತೋಷ್  ಅವರು ಆಟೋ ನಂ. ಕೆಎ-55-4434 ಇದರಲ್ಲಿ  ವಾಲ್ಮೀಕಿ ರಸ್ತೆ, ಮಹಾರಾಣಿ ಕಾಲೀಜು ಹತ್ತಿರ ವಿನಾಯಕನಗರಕ್ಕೆ ಹೋಗುತ್ತಿದ್ದಾಗ ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಲತಿರುವು ಮಾಡಿದಾಗ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾದ ಪರಿಣಾಮ ದಿವ್ಯಾ ಅವರ ಬಲಗೈ ಮೂಳೆ ಮುರಿದುಹೋಗಿ ಅವರನ್ನು ಸಾರ್ವಜನಿಕರ ಸಹಾಯದಿಂದ ಚಿಕಿತ್ಸೆಗಾಗಿ ಕಾಮಾಕ್ಷಿ ಆಸ್ಪತ್ರೆಗೆ ದಾಖಲಿಸಿದ್ದು,ಈ ಅಪಘಾತಕ್ಕೆ ಕಾರಣರಾದ ಆಟೋ ಚಾಲಕನ  ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು,

ವಿ ವಿ ಪುರಂ ಸಂಚಾರ ಠಾಣೆ.

ದಿ-12-02-2020  ರಂದು  ಮಧ್ಯಾಹ್ನ 02:15 ಗಂಟೆ ಸಮಯದಲ್ಲಿ  ಪಿರ್ಯಾದಿ ಶ್ರೀಕಾಂತ್ ರಾಜ್ ರವರ ತಂದೆ ಬಸವರಾಜು ಅವರು ತಮ್ಮ  ಮೋ,ಸೈ  ನಂ. ಕೆಎ-09-ವೈ-6321, ಇದರ ಹಿಂಭಾಗದಲ್ಲಿ ರಂಗಸ್ವಾಮಿ ಯವರನ್ನು ಕೂರಿಸಿಕೊಂಡು ಕಲಾಮಂದಿರ ರಸ್ತೆ ರಂಗಾಯಣ ಗೇಟ್ ಹತ್ತಿರ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಇದೇ ಸಮಯಕ್ಕೆ ಇವರ ಹಿಂಭಾಗದಿಂದ ಬಂದ ಅಂಬುಲೆನ್ಸ್ ನಂ. ಕೆಎ-09-ಬಿ-9041 ಚಾಲಕ  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಸವರಾಜು ಅವರ ವಾಹನಕ್ಕೆ ಡಿಕ್ಕಿ ಮಾಡಿ ನಂತರ ಸ್ವಲ್ಪ ಮುಂದೆ ಚಲಿಸಿ ಮತ್ತೊಂದು  ಮೋ,ಸೈ ನಂ. ಕೆಎ-09-ಕೆ-5968 ಗೂ ಡಿಕ್ಕಿ ಮಾಡಿದ ಪರಿಣಾಮ ಬಸವರಾಜು ಅವರ ತಲೆ,ಎಡ ಭುಜ ಹಾಗೂ ಬಲಕಿವಿಗೆ ಪೆಟ್ಟಾಗಿದ್ದು, ಹಿಂಭಾಗದ ಸವಾರ ರಂಗಸ್ವಾಮಿಯವರ ಎಡಭುಜ,ಎಡಕೈ,ಹಾಗೂ ತಲೆಗೆ ಪೆಟ್ಟಾಗಿದ್ದ  ಅವರನ್ನು ಸಾರ್ವಜನಿಕರ ಸಹಾಯದಿಂದ ಚಿಕಿತ್ಸೆಗಾಗಿ ಅಪೋಲೊ ಆಸ್ಪತ್ರೆಗೆ ದಾಖಲಿಸಿದ್ದು, ಈ ಅಪಘಾತಕ್ಕೆ ಕಾರಣರಾದ ಅಂಬುಲೆನ್ಸ್ ಚಾಲಕನ   ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

ಎನ್ ಆರ್ ಸಂಚಾರ ಠಾಣೆ.

ದಿನಾಂಕ;10.02.2020 ರಂದು ಬೆಳಿಗ್ಗೆ ಸುಮಾರು 10.30 ಗಂಟೆಯಲ್ಲಿ ಪಿರ್ಯಾದಿ ನಿಂಗಶೆಟ್ಟಿ ರವರು ರಾಜೀವ್‌ ನಗರ ಮುಖ್ಯ ರಸ್ತೆಯಲ್ಲಿ ಬಾದಾಮಿ ಆಟೋಸ್ಟ್ಯಾಂಡ್‌ ಬಳಿ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇದೇ ವೇಳೆಗೆ ಪಿರ್ಯಾದುದಾರರ ಹಿಂಭಾಗದಿಂದ ಸ್ಕೂಟರ್ ನಂಬರ್ KA55X4661ರ ಸವಾರ ಸ್ಕೂಟರ್ ಅನ್ನು ಅತಿವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರ ಹಿಂಭಾಗಕ್ಕೆ ಡಿಕ್ಕಿ ಮಾಡಿದಾಗ ಪಿರ್ಯಾದುದಾರರು ಕೆಳಕ್ಕೆ ಬಿದ್ದು ತಲೆಗೆ, ಕೈಕಾಲುಗಳಿಗೆ ಗಾಯವಾಗಿದ್ದವರನ್ನು ಸ್ಥಳದಲ್ಲಿದ್ದ ಶಿವಣ್ಣ ಎಂಬುವರು ಸಾರ್ವಜನಿಕರ ಸಹಾಯದಿಂದ ಕೆ.ಆರ್.ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು, ಅಪಘಾತದ ನಂತರ ಸ್ಕೂಟರ್ ಸವಾರ ಸ್ಕೂಟರ್ ಸಮೇತ ಪರಾರಿಯಾಗಿದ್ದು, ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಸ್ಕೂಟರ್ ಸವಾರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.

ಸಿದ್ದಾರ್ಥನಗರ ಸಂಚಾರ ಠಾಣೆ.

ದಿ-13.02.2020 ರಂದು ಮಧ್ಯಾಹ್ನ ಸುಮಾರು 12.30 ಗಂಟೆಯಲ್ಲಿ ಪಿರ್ಯಾದಿ ಸ್ನೇಹಿತ ಕುಮಾರ್ ರವರು ಕೆಎ.55.ಕ್ಯೂ.2015 ನಂಬರಿನ ಮೋಟಾರ್ ಸೈಕಲ್ ಹಿಂದೆ ಪಿರ್ಯಾದಿ ಗಿರೀಶ್ ರವರನ್ನು ಕೂರಿಸಿಕೊಂಡು ಟಿ.ಎನ್ ಪುರ ರಸ್ತೆಯಲ್ಲಿ ಚಿಕ್ಕಳ್ಳಿ ಕಡೆಯಿಂದ ಬಂದು ರಾಜಶೇಖರ್ ಆಸ್ಪತ್ರೆಯ ಹತ್ತಿರ ಇರುವ ಕೆನರಾ ಬ್ಯಾಂಕ್ ಮುಂದೆ ಬರುತ್ತಿದ್ದ ವೇಳೆ ಸಿಟಿ ಕಡೆಯಿಂದ ಕೆಎ.55.ಡಬ್ಲ್ಯೂ.4964 ನಂಬರಿನ ಮೋಟಾರ್ ಸೈಕಲ್ ಅನ್ನು ಅದರ ಸವಾರ ತುಂಬಾ ವೇಗವಾಗಿ & ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಯಾವುದೇ ಸೂಚನೆ ನೀಡದೇ ಪಿರ್ಯಾದಿ ಕುಳಿತ್ತಿದ್ದ  ಮೋಟಾರ್ ಸೈಕಲ್ ಗೆ ಡಿಕ್ಕಿ ಮಾಡಿದ ಪರಿಣಾಮ ಎರಡೂ ಮೋಟಾರ್ ಸೈಕಲ್ ಸವಾರರು ವಾಹನಗಳ ಸಮೇತ ರಸ್ತೆಯ ಮೇಲೆ ಬಿದ್ದು ಪಿರ್ಯಾದಿಗೆ ಬಲಕಾಲಿಗೆ & ಸವಾರ ಕುಮಾರನಿಗೆ ಬಲಕಾಲು ಪಾದಕ್ಕೆ ಪೆಟ್ಟಾಗಿದ್ದವರನ್ನು ಚಿಕಿತ್ಸೆಗೆ ಕೆ.ಆರ್ ಆಸ್ಪತ್ರೆಗೆ ಕರೆ ತಂದಿದ್ದು ಹಾಗೂ ಡಿಕ್ಕಿ ಮಾಡಿದ ಮೋಟಾರ್ ಸೈಕಲ್ ಸವಾರನಿಗೂ ಸಹ ಮುಖಕ್ಕೆ & ಕೈಕಾಲುಗಳಿಗೆ ಪೆಟ್ಟಾಗಿರುತ್ತದೆ. ಆನಂತರ ಫಿರ್ಯಾದಿ ಈ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಮೋಟಾರ್ ಸೈಕಲ್ & ಸವಾರನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೆ.ಆರ್ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ದೂರು.      

10

ವಂಚನೆ ಪ್ರಕರಣ 

02

ಉದಯಗಿರಿ ಠಾಣೆ.

ಪಿರ್ಯಾದಿ ರುಕ್ಮಿಣಮ್ಮ ಕೋಂ ಲೇ|| ಸಿದ್ದಚಾರಿ ರವರ ಹೆಸರಿನಲ್ಲಿ ನಕಲಿ ರುಕ್ಮಿಣಿಯಮ್ಮ ಎಂಬುವವರು ಮೈಸೂರು ತಾಲ್ಲೂಕು, ವರುಣಾ ಹೋಬಳಿ, ಲಲಿತಾದ್ರಿಪುರ ಗ್ರಾಮ ಸರ್ವೆ ನಂ. 100 ರಲ್ಲಿ 12 ಗುಂಟೆ ಸರ್ವೆ ನಂ. 102/2 ರಲ್ಲಿ 00.09 ಗುಂಟೆ ಹಾಗೂ ಸರ್ವೆ ನಂ.99/7 ರಲ್ಲಿ 00.06 ಗುಂಟೆ ಸ್ವತ್ತಿನ ಸಂಬಂಧ ದಿನಾಂಕ;25/01/2019 ಮತ್ತು ದಿನಾಂಕ 25/01/2019 ರಂದು ಉಪನೋಂದಣಿ ಕಛೇರಿ, ಮೈಸೂರು ಪೂರ್ವ, ಮೈಸೂರು ಇಲ್ಲಿ ದಸ್ತಾವೇಜು ಸಂಖ್ಯೆ 10913/18-1910908/18-19, 10811/18-19 ರಂತೆ ನೋಂದಾಯಿಸಿದ ದಸ್ತಾವೇಜುಗಳಲ್ಲಿ ಮಾರಾಟಗಾರರಾದ ರುಕ್ಮಿಣಿಯಮ್ಮ ಕೋಂ ಲೇ|| ಸಿದ್ದಚಾರಿ ಎಂದು ಹೇಳಿ Impersonate ಮಾಡಿರುವುದಾಗಿ ವರದಿ ಮಾಡಿರುವುದಾಗಿ ಈ ಸಂಬಂದ ಕೆ.ಆರ್‌ ರಾಘವರಾಜು, ಸಿದ್ದರಾಜು ಬಿ ಹಾಗೂ ಮತ್ತಿತರರ ವಿರುದ್ದ ಕಾನೂನು ಕ್ರಮಕ್ಕಾಗಿ ಬಿ ಜಿ ಮಂಜು, ಉಪನೊಂದಣಾಧಿಕಾರಿಗಳು (ಪೂರ್ವ) ರವರು ನೀಡಿದ ದೂರು.

ಲಕ್ಷ್ಮೀಪುರಂ ಠಾಣೆ.

ಫಿರ್ಯಾದಿ ಆನಂದ ಪವನ್, #1263, 01 ನೇ ಮೈನ್, 02 ನೇ ಕ್ರಾಸ್, ಕೆ ಎಂ ಪುರ  ರವರಿಗೆ 2019 ನೇ ಜನವರಿಯಲ್ಲಿ ದಿವ್ಯ ಅನಂತ ಶೆಟ್ಟಿ ಹಾಗೂ ನೀರಜ್ ಶಿವಣ್ಣ ರವರುಗಳು ತಮ್ಮ ಪಾಲುದಾರಿಕೆ ಕಂಪನಿ ಷೇರು ಮಾರುಕಟ್ಟೆಯ ವ್ಯವಹಾರಕ್ಕೆ ಸಂಬಂಧಿಸಿದಂತೆ ತಮ್ಮ ಡಿಮ್ಯಾಂಡ್ ಅಕೌಂಟನ್ನು ಆದಾಯ ತೆರಿಗೆ ಇಲಾಖೆ ಯವರು ಮುಟ್ಟುಗೋಲು ಹಾಕಿಕೊಂಡು ರೂ 1,39,47,000/-ಗಳನ್ನು ತೆರಿಗಾಗಿ ಪಾವತಿಸಬೆಕೆಂದು ಇಲಾಖೆಯ ಮುದ್ರೆ ಹಾಗೂ ಸಹ ಇರುವ ನೋಟಿಸನ್ನು ತೋರಿಸಿ ಕೂಡಲೇ ತೆರಿಗೆಯನ್ನು ಪಾವತಿಸಬೇಕೆಂದು ಇಲ್ಲವಾದಲ್ಲಿ ಆದಾಯ ತೆರಿಗೆ ಇಲಾಖೆಯು ಮುಟ್ಟುಗೋಲು ಹಾಕಿಕೊಳ್ಳುತ್ತದೆ ಎಂದು ಆರೋಪಿಗಳು ಪಿರ್ಯಾದಿಯಿಂದ  ಮನೆಯಿಂದ ದಿನಾಂಕ 11-12-2019 ರಂದು 45 ಲಕ್ಷ ರೂಗಳನ್ನು ನಗದು ರೂಪದಲ್ಲಿ ಪಡೆದು ನಂತರ 18,50000/-ರೂ ಗಳನ್ನು ಆರ್ ಟಿ ಜಿ ಎಸ್ ಮುಖಾಂತರ ಹಾಗೂ ದಿನಾಂಕ 16-02-2019 ರಿಂದ 01-03-2020 ರವರಗೆ 8,50,000/-ರೂ ಗಳನ್ನು ನೀರಜ್ ಶಿವಣ್ಣ ರವರು ಅಗ್ರಿಮೆಂಟ್ ಹಾಗೂ ಅನ್ ಡಿಮ್ಯಾಂಡ್ ಪ್ರನೋಟ್ ಹಾಗೂ ಚೆಕ್ ನೀಡಿ ವಾಪಸ್ ನೀಡದೆ ಸತಾಯಿಸಿದ್ದು, ಹಾಗೂ ಆರೋಪಿಗಳು ನೀಡಿದ್ದ ಚೆಕ್ ಬೌನ್ಸ್ ಆಗಿದ್ದು ಆದ್ದರಿಂದ ಆರೋಪಿಗಳು ಹಣ ವಾಪಸ್ ನೀಡದೆ ಮೋಸ ಮಾಡಿರುತ್ತಾರೆಂದು ನೀಡಿದ ದೂರು.

11

ಮನುಷ್ಯ  ಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

MYSURU CITY TRAFFIC VIOLATION CASES

DATE  :13-02-2020

SLNO

HEADS

                                    NO. OF CASES

DR

KR

NR

SN

VV

TOTAL

1

TOTAL NUMBER OF FTVRS

204

70

53

22

85

434

2

TOTAL NUMBER OF CRR'S

543

76

59

61

47

786

3

TOTAL FINE AMOUNT COLLECTED

94,600

16,500

9,800

11,900

13,500

1,46,300

4

POLICE NOTICE ISSUED

-

-

 

-

 

-

5

PARKING TAGS

-

/

 

-

 

-

6

FATAL

-

 

 

-

 

-

7

NON FATAL

-

1

 

-

 

1

8

INTERCEPTOR CASES

-

-

106

-

 

106

9

SUSPENSION OF D.L.

-

-

 

-

 

-

11

Sec 283 IPC CASES

-

-

 

-

 

-

12

Sec 353 IPC CASES

-

-

 

-

 

-

13

TOWING CASES

-

-

 

3

 

3



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®