ENGLISH   |   KANNADA

Blog



ದಿನಾಂಕ:24.02.2020 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:25.02.2020 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 78       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ಹೆಬ್ಬಾಳ ಠಾಣೆ

ದಿನಾಂಕ: 24/02/2020  ರಂದು  ಸುಮಾರು ರಾತ್ರಿ 8.00 ಗಂಟೆಯಲ್ಲಿ ಪಿರ್ಯಾದಿ ಗೀತಾ ರವರು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ತಮ್ಮ ಮನೆಗೆ ವಾಪಸ್ಸು ಹೆಬ್ಬಾಳ್‌‌ ೩ನೇ ಹಂತದ ಸುಬ್ರಮಣ್ಯನಗರದ 3ನೇ ಕ್ರಾಸ್‌‌‌  ರಾಮ್‌‌ದೇವ್‌‌ ಬಂಢಾರ್‌‌ ಅಂಗಡಿ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಬೈಕಿನಲ್ಲಿ ಇಬ್ಬರು ಆಸಾಮಿಗಳು ಪಿರ್ಯಾದಿ ಬಳಿ ಬಂದು ಪಿರ್ಯಾದಿ ಕತ್ತಿನಲ್ಲಿದ್ದ ಸುಮಾರು 1,50,000/-ರೂ ಮೌಲ್ಯದ ಸುಮಾರು 55 ಗ್ರಾಂ ತೂಕದ  ಆ್ಯಪಲ್‌‌ ಕಟ್ಟಿಂಗ್‌‌ ಡಿಸೈನ್‌‌ವುಳ್ಳ ಚಿನ್ನದ ಮಾಂಗಲ್ಯ ಸರವನ್ನು ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ಆಸಾಮಿ ಕಿತ್ತುಕೊಂಡು ಬೈಕಿನಲ್ಲಿ ರಭಸವಾಗಿ ಇಬ್ಬರು ಪರಾರಿಯಾಗಿರುತ್ತಾರೆಂದು ಇವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.

4

ಹಲ್ಲೆ ಪ್ರಕರಣ      

02

ವಿದ್ಯಾರಣ್ಯಪುರಂ ಠಾಣೆ

ಫಿರ್ಯಾದಿ ಆರ್ಮುಗಂ ರವರು ದಿನಾಂಕ 22-02-2020 ರಂದು ಸಂಜೆ 5-00 ಗಂಟೆ ಸಮಯದಲ್ಲಿ ವಿಶ್ವೇಶ್ವರನಗರ ಡಿ.ದೇವರಾಜ ಅರಸು ಕಾಲೋನಿಯ ದೇವಸ್ಥಾನದ ಬಳಿ ಇದ್ದಾಗ ಅದೇ ಏರಿಯಾದ ವಾಸಿ ರಾಮಕೃಷ್ಣ ಎಂಬುವನು ಸಂಗೀತಾ ಬಾರ್‌ಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಇದ್ದ ಮುತ್ತು ಎಂಬುವನು ಫಿರ್ಯಾದುದಾರರನ್ನು ನೋಡಿ ಏನೋ ಗುರಾಯಿಸ್ತೀಯಾ ಎಂದು ಜಗಳ ತೆಗೆದು ಜೊತೆಯಲ್ಲಿದ್ದ ಅವಿನಾಶ, ಶಂಕರನ ತಮ್ಮ ಹಾಗೂ ಜೊತೆಯಲ್ಲಿದ್ದ ಇಬ್ಬರು ಹುಡುಗರು ಹಿಡಿದು ಎಳೆದಾಡಿ, ಕೈಗಳಿಂದ ಮುಖ, ಎದೆಗೆ ಹೊಡೆದು ಕೆಳಕ್ಕೆ ಬೀಳಿಸಿಕೊಂಡು ತುಳಿದರು. ರಾಮಕೃಷ್ಣ ಬಿಡಿಸಿದಾಗ ಅವರುಗಳು ಕೊಲೆ ಬೆದರಿಕೆ ಹಾಕಿರುತ್ತಾರೆ ಬಾಟಲ್‌ನಿಂದ ಚುಚ್ಚಲು ಬಂದಿರುತ್ತಾರೆ. ನೋವು ತಡೆಯಲು ಆಗದೆ ಇದ್ದುದರಿಂದ ಜೆ.ಎಸ್‌.ಎಸ್.ಆಸ್ಪತ್ರೆಗೆ ಬಂದು ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಿ ಎಂದು ಜೆ.ಎಸ್‌.ಎಸ್.ಆಸ್ಪತ್ರೆಯಲ್ಲಿ ವೈದ್ಯರ ಸಮಕ್ಷಮ ನೀಡಿದ ಹೇಳಿಕೆ ದೂರಿನ ಮೇರೆಗೆ ಪ್ರ.ವ.ವರದಿ.

ಸರಸ್ವತಿಪುರಂ ಠಾಣೆ

ಫಿರ್ಯಾದಿ ವೇಣುಗೋಪಾಲ್. ರವರು ದಿನಾಂಕ 23.02.2020 ರಂದು ರಾತ್ರಿ ಸುಮಾರು 08.30 ಗಂಟೆ ಸಮಯದಲ್ಲಿ ದೀಪಾ ಬಾರ್ ಬಳಿ ಇದ್ದ ನನ್ನ ಸ್ನೇಹಿತ ಚಂದ್ರು, ದೀಪಾಬಾರ್ ಮುಂದಿನ ಸರ್ವಿಸ್ ರಸ್ತೆಯಲ್ಲಿ ಸ್ಕೂಟರನ್ನು ಹಿಂದಕ್ಕೆ ತಿರುಗಿಸುವ ಸಮಯದಲ್ಲಿ ಅಲ್ಲೆ ಇದ್ದ ಆರೋಪಿ ಸಾಗರ್ ನನಗೆ ಯಾಕೆ ಟಚ್ ಮಾಡುತ್ತಿಯಾ, ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿ ಬಿಯರ್ ಬಾಟೆಲ್ ನಿಂದ ನನ್ನ ತಲೆಯ ಎಡಭಾಗಕ್ಕೆ ಹೊಡೆದನು ಆಗ ಬಾಟೆಲ್ ಚೂರಾಯಿತು. ಬಿಯರ್ ಬಾಟೆಲ್ ನ ಚೂರಿನಿಂದ ನನ್ನ ಮುಖದ ಬಲಭಾಗದ ಕಣ್ಣಿನಿಂದ ಗಲ್ಲದ ವರೆಗೆ ಕೂಯ್ದನು ಇದರಿಂದ ನನ್ನ ಮುಖ ಮತ್ತು ತಲೆಯಿಂದ ರಕ್ತ ಸ್ರಾವವಾಯಿತು ನಂತರ  ನಾನು ಕಾಮಾಕ್ಷಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಆದ್ದರಿಂದ ಆರೋಪಿಗಳ ವಿರುದ್ದ ಕ್ರಮಕ್ಕೆ ನೀಡಿದ ದೂರು. 

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

01

ಲಕ್ಷ್ಮೀಪುರಂ ಠಾಣೆ

ದಿನಾಂಕ: 10-02-2020 ರಂದು ಸಂಜೆ 05:00 ಗಂಟೆಯಲ್ಲಿ ಫಿರ್ಯಾದಿ ಸುಪ್ರೀಯಾ  ರವರು ಸಿದ್ದಪ್ಪ ವೃತ್ತದಲ್ಲಿರುವ ತಮ್ಮ ಶ್ರಾವ್ಯ ಬ್ಯೂಟಿ ಪಾರ್ಲರ್ ನ ಒಳಗೆ ಟೇಬಲ್ ಮೇಲೆ ತಮ್ಮ ಒಂದು ಮೊಬೈಲ್ ಫೋನ್ ಹಾಗೂ ಸುಮಾರು 75 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಇಟ್ಟು ಸ್ನಾನ ಮಾಡಲು ಹೋಗಿ, ಸ್ನಾನ ಮುಗಿಸಿ ಕೊಂಡು ವಾಪಾಸ್ ಸಂಜೆ 05:15 ಗಂಟೆಗೆ ಬಂದು ನೋಡಲಾಗಿ ತಾವು ಇಟ್ಟಿದ್ದ ಮೊಬೈಲ್ ಹಾಗೂ ಚಿನ್ನದ ಒಡವೆಗಳು ಕಾಣೆಯಾಗಿದ್ದು, ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ತಮ್ಮ ಬ್ಯೂಟಿ ಪಾರ್ಲರ್ನಲ್ಲಿ 3 ಜನ ಮಹಿಳೆಯರು ಕೆಲಸ ಮಾಡುತ್ತಿದ್ದು ತಮಗೆ ಇವರ ಮೇಲೆ ಅನುಮಾನವಿರುತ್ತದೆ. ಆದ್ದರಿಂದ ಇವರನ್ನು ವಿಚಾರಣೆ ಮಾಡಿ ಕಳುವಾಗಿರುವ ತಮ್ಮ ಮೊಬೈಲ್ ಹಾಗೂ ಚಿನ್ನದ ಒಡವೆಗಳನ್ನು ಪತ್ತೆ ಮಾಡಿಕೊಡಬೇಕೆಂದು ಇವುಗಳ ಒಟ್ಟು ಮೌಲ್ಯ 2,10,000/- ರೂಪಾಯಿಗಳಾಗುತ್ತದೆ ಎಂದು ನೀಡಿದ ದೂರಿನ ಮೇರೆಗೆ. ಈ ಪ್ರ.ವ.ವರದಿ.

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

03

ನರಸಿಂಹರಾಜ ಸಂಚಾರ ಠಾಣೆ

ದಿ:22/02/2020 ರಂದು ರಾತ್ರಿ ಸುಮಾರು  09.45 ಗಂಟೆಯಲ್ಲಿ ಪಿರ್ಯಾದಿ ಸುರೇಶ್ ಕುಮಾರ್ ರವರ ತಂದೆ ಮಂಜುನಾಥರವರು ಸಿದ್ದಲಿಂಗಪುರ ಗ್ರಾಮದ ಹನುಮಂತು ಹೋಟೆಲ್ ಬಳಿ ಮೈಸೂರು ಬೆಂಗಳೂರು ರಸ್ತೆಯ ಎಡಭಾಗದ ಫುಟ್ಪಾತ್ ನಲ್ಲಿ ಮಾತನಾಡುತ್ತ ನಿಂತಿದ್ದಾಗ ಇದೇ ವೇಳೆಗೆ ಮೈಸೂರು ಬೆಂಗಳೂರು ರಸ್ತೆಯಲ್ಲಿ ಮೋಟಾರ್ ಸೈಕಲ್ ನಂಬರ್ KA-09HD-7252 ರ ಸವಾರ ಖಾಶಿಫ್ ಖಾನ್ ಮೋಟಾರ್ ಸೈಕಲನ್ನು ಶ್ರೀರಂಗಪಟ್ಟಣದ ಕಡೆಯಿಂದ ಮೈಸೂರು ನಗರದ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರತಂದೆ ಮಂಜುನಾಥರವರಿಗೆ ಢಿಕ್ಕಿ ಮಾಡಿದಾಗ ಕೆಳಕ್ಕೆ ಬಿದ್ದು  ತಲೆಗೆ ಮುಖಕ್ಕೆ, ಎಡಗೈಗೆ ಪೆಟ್ಟಾಗಿ ರಕ್ತ ಗಾಯವಾಗಿದ್ದವನನ್ನು ಪಿರ್ಯಾದಿಯವರು ಎತ್ತಿ ಉಪಚರಿಸಿ ಕಾರಿನಲ್ಲಿ ಪ್ರಜ್ವಲ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಪಿರ್ಯಾದಿಯವರು ಗಾಯಾಳುವಿಗೆ ಚಿಕಿತ್ಸೆ ಕೊಡಿಸುತ್ತಿದ್ದರಿಂದ ತಡವಾಗಿ ಠಾಣೆಗೆ ಹಾಜರಾಗಿ ಅಪಘಾತ ಮಾಡಿರುವ ಮೋಟಾರ್ ಸೈಕಲ್ ನಂಬರ್ KA-09HD-7252 ರ ಸವಾರ ಖಾಶಿಫ್ ಖಾನ್ ರವರ ವಿರುದ್ದ ಕಾನೂನು ಕ್ರಮ ಜರುಗಿಸಿ ಎಂದು ಪಿರ್ಯಾದಿಯವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರವ ವರದಿ.

ಸಿದ್ಧಾರ್ಥನಗರ ಸಂಚಾರ ಠಾಣೆ

ದಿನಾಂಕ:-20.02.2020 ರಂದು ಬೆಳಿಗ್ಗೆ ಸುಮಾರು 10.05 ಗಂಟೆ ಸಮಯದಲ್ಲಿ ಪಿರ್ಯಾದಿ ನಿಂಗಮಣಿ ರವರ ತಂದೆ ನಂಜುಂಡಪ್ಪ ರವರು ಟಿ ನರಸಿಪುರದಿಂದ ಖಾಸಗಿ ಬಸ್ ನಿಂದ ಎಸ್.ವಿ.ಪಿ ನಗರದ ಹತ್ತಿರ ಇಳಿದು ನಡೆದುಕೊಂಡು ಟಿ ಎನ್ ಪುರ ಮುಖ್ಯ ರಸ್ತೆ ರಾಜಶೇಖರ ಆಸ್ಪತ್ರೆ ಮುಂಭಾಗ ರಸ್ತೆ ದಾಟುತ್ತಿದ್ದ ವೇಳೆ ಟಿ.ಎನ್ ಪುರ ಮುಖ್ಯ ರಸ್ತೆ ಮೈಸೂರು ಸಿಟಿ ಕಡೆಯಿಂದ ಚಿಕ್ಕಳ್ಳಿ ಕಡೆಗಾದಂತೆ ಕೆಎ.04.ಜೆಡ್.1978 ನಂಬರಿನ ಕಾರ್ ಚಾಲಕ ನಾಗಭೂಷಣ ಆರಾದ್ಯ ರವರು ಬಹಳ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ನಂಜುಂಡಪ್ಪ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ನಂಜುಂಡಪ್ಪ ರವರು ರಸ್ತೆ ಮೇಲೆ ಬಿದ್ದು ಅವರ ತಲೆಗೆ ಮತ್ತು ಬಲಕಾಲಿಗೆ ಪೆಟ್ಟಾಗಿದ್ದವರನ್ನು ಚಿಕಿತ್ಸೆ ಸಲುವಾಗಿ ಡಿಕ್ಕಿ ಮಾಡಿದ ಕಾರ್ ಚಾಲಕ ತಮ್ಮ ಕಾರಿನಲ್ಲೇ ಚಿಕಿತ್ಸೆ ಬಗ್ಗೆ ಕಾವೇರಿ ಆಸ್ಪತ್ರೆ ತಂದು ಸೇರಿಸಿ ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಅಂಬುಲೇನ್ಸ್ ಒಂದರಲ್ಲಿ ಕೆ.ಆರ್ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ನಂತರ ಕಾರ್ ಚಾಲಕ ಆಸ್ಪತ್ರೆಯ ಖರ್ಚು ವೆಚ್ಚವನ್ನು ಭರಿಸುವುದಾಗಿ ಹೇಳಿ ಆಸ್ಪತ್ರೆಯ ಖರ್ಚು ಹೆಚ್ಚಾಗಿದ್ದರಿಂದ ಖರ್ಚನ್ನು ಭರಿಸಲು ¤ರಾಕರಿಸಿದ್ದರಿಂದ ಈ ದಿನ ತಡವಾಗಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ.ವ.ವರದಿ.

ದೇವರಾಜ ಸಂಚಾರ ಠಾಣೆ

ದಿನಾಂಕ 24.02.2020 ರಂದು ಮದ್ಯಾಹ್ನ ಸುಮಾರು 3:30 ಗಂಟೆ ಸಮಯದಲ್ಲಿ ಪಿರ್ಯಾದಿ ಲೋಕೇಶ್ ಹೆಚ್.ಸಿ.610 ದೇವರಾಜ ಸಂಚಾರ ಪೊಲೀಸ್ ಠಾಣೆರವರು  ಸರ್ಕಾರಿ ಅತಿಥಿ ಗೃಹದ ಟ್ರಾಫಿಕ್ ಸಿಗ್ನಲ್ ಬಳಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿರುವಾಗ್ಗೆ ಸಾರ್ವಜನಿಕರೊಬ್ಬರು ಪಿರ್ಯಾದಿಯವರ ಬಳಿ ಬಂದು ಸೇಂಟ್ ಫಿಲೋಮಿನ ಸ್ಕೂಲ್ ಹತ್ತಿರ ಅಪಘಾತವಾಗಿರುವುದಾಗಿ ತಿಳಿಸಿದ ಮೇರೆಗೆ ಪಿರ್ಯಾದಿಯವರು ಸ್ಥಳಕ್ಕೆ ಹೋಗಿ ನೋಡಲಾಗಿ ಅಪಘಾತ ಸ್ಥಳದಲ್ಲಿ ಬಸ್ಸು ನಿಂತಿದ್ದು ಮತ್ತು ತಳ್ಳುವ ಗಾಡಿ ಮೊಗಚಿಕೊಂಡಿದ್ದು ಸ್ಥಳದಲ್ಲಿದ್ದ ಸಾರ್ವಜನಿಕರನ್ನು ಪಿರ್ಯಾದಿಯವರು ವಿಚಾರ ಮಾಡಲಾಗಿ ಸಂಜಯ್ ಕುಮಾರ್ ಎಂಬುವರು ತಳ್ಳುವ ಗಾಡಿಯನ್ನು ತಳ್ಳಿಕೊಂಡು ಬೆಂಗಳೂರು ನೀಲಗಿರಿ ರಸ್ತೆ ಪೂರ್ವಭಾಗದ ರಸ್ತೆಯಲ್ಲಿ ಎಫ್.ಟಿ.ಎಸ್ ವೃತ್ತದ ಕಡೆಗೆ ಹೋಗುತ್ತಿದ್ದಾಗ ಎಫ್.ಟಿ.ಎಸ್.ವೃತ್ತದಿಂದ ಬಂದ ಬಸ್ ನಂಬರ್ ಕೆಎಲ್15ಎ1418 ರ ಚಾಲಕನಾದ ಸುನಿಲ್ ಎ.ಟಿ.ರವರು ಬಸ್ಸನ್ನು ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಸಂಜಯ್ ಕುಮಾರ್ ರವರಿಗೆ ಡಿಕ್ಕಿಮಾಡಿದ ಪರಿಣಾಮ ಅವರು ಕೆಳಗೆ ಬಿದ್ದು ಮುಖಕ್ಕೆ ತಲೆಗೆ ತುಟಿಗೆ ಏಟಾಗಿದ್ದವರನ್ನು ಬಸ್ ಚಾಲಕನೇ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ಪಿರ್ಯಾದಿಯವರಿಗೆ ತಿಳಿಸಿದ್ದು ಈ ಅಪಘಾತಕ್ಕೆ ಬಸ್ ಚಾಲಕನ ವೇಗ ಮತ್ತು ನಿರ್ಲಕ್ಷತೆ ಚಾಲನೆ ಕಾರಣವಾಗಿ ತಿಳಿದು ಬಂದಿರುವುದರಿಂದ ಆತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯವರು ನೀಡಿದ

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

11

ಮನುಷ್ಯ  ಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

                          MYSURU CITY TRAFFIC VIOLATION CASES

                                           DATE  :24-02-2020

SLNO

                                               HEADS

                                     NO. OF CASES

DR

KR

NR

SN

VV

TOTAL

1

TOTAL NUMBER OF FTVRS

174

400

116

73

307

1,070

2

TOTAL NUMBER OF CRR'S

460

273

548

438

364

2,083

3

TOTAL FINE AMOUNT COLLECTED

99,900

54,600

79,500

64,100

85,600

3,83,700

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

1

-

1

1

-

3

8

INTERCEPTOR CASES

-

109

105

-

-

214

9

SUSPENSION OF D.L.

-

-

-

-

-

-

11

Sec 283 IPC CASES

-

-

-

-

-

-

12

Sec 353 IPC CASES

-

-

-

-

-

-

13

TOWING CASES

7

13

2

5

8

35



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®