ENGLISH   |   KANNADA

Blogದಿನಾಂಕ;06.04.2020 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:07.04.2020 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 90       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ

01

ನರಸಿಂಹರಾಜ ಠಾಣೆ

ಪಿರ್ಯಾದಿ ಸೌಮ್ಯ ರವರು  ರಾಜೇಂದ್ರನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಂಕ 04.04.2020 ರಂದು ಮಧ್ಯಾಹ್ನ 11.30 ರಿಂದ 12.00 ಗಂಟೆಯ ಜೊತೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವಾಗ ಆರೋಪಿತರಾದ  ಪ್ರತೀಪ್ ಚಂದ್ರ, ಸುನಿಲ್ ಕುಮಾರ್ ಮತ್ತು ಇತರರು ಸದರಿ ಆಸ್ಪತ್ರೆಗೆ ಬಂದು ಸಾರ್ವಜನಿಕ ಸೇವೆಯ ಕರ್ತವ್ಯದಲ್ಲಿದ್ದ ಪಿರ್ಯಾದಿಯವರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ನೀವು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲವೆಂದು ಆರೋಪಿಗಳು ವಾದಿಸಿದ್ದು, ಇದಕ್ಕೆ ಪಿರ್ಯಾದಿಯವರು ಕೊರೋನಾ ವೈರಸ್ನ ಸಮಸ್ಯೆ ಇರುವುದರಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗಿದೆ, ನಾವು ಎಲ್ಲಾ ರೋಗಿಗಳನ್ನು ಒಂದು ಮೀಟರ್ ದೂರದಿಂದಲೇ ಅವರ ಸಮಸ್ಯೆಗಳನ್ನು ಕೇಳಿ ಔಷಧ ನೀಡುತ್ತಿದ್ದೇವೆ, ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳನ್ನು ಮಾತ್ರ ಹತ್ತಿರದಿಂದ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದೇವೆ, ನಮ್ಮ ಚಿಕಿತ್ಸೆ ಸರಿಯಿಲ್ಲದಿದ್ದರೆ ಮೇಲಾಧಿಕಾರಿಗಳಿಗೆ ದೂರು ನೀಡಿ ಎಂದು ಹೇಳಿದಾಗ್ಯೂ ಸದರಿಯವರುಗಳು ನಾಳೆಯಿಂದ ಕರ್ತವ್ಯಕ್ಕೆ ಬಂದರೆ ನಿಮಗೆ ಒಂದು ಗತಿ ಕಾಣಿಸುತ್ತೇವೆ ಎಂದು ಬೆದರಿಕೆ ಹಾಕಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಮೇಲ್ಕಂಡ ಪ್ರತೀಪ್ ಚಂದ್ರ, ಸುನಿಲ್ ಕುಮಾರ್ ಹಾಗೂ ಇತರರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ  ಪ್ರ.ವ.ವರದಿ..

5

ಮನೆಕಳವುಪ್ರಕರಣ

01

ಮೇಟಗಳ್ಳಿ ಠಾಣೆ

ಪಿರ್ಯಾದುದಾರರಾದ ರಾಘವೇಂದ್ರ,.ದಿನಾಂಕ: 05/04/2020 ರಂದು ಮಧ್ಯಾಹ್ನ 12:00 ಗಂಟೆಯ ಸಮಯದಲ್ಲಿ ನಾನುಮತ್ತು ನನ್ನ ಪತ್ನಿ ಶಶಿಕಲಾ ಇಬ್ಬರೂ ಕೆ.ಆರ್. ಪೇಟೆ ಹತ್ತಿರವಿರುವ ಭಾರತಿಪುರದಲ್ಲಿದ್ದ ನನ್ನ ಮಗುವನ್ನು ನೋಡಲೆಂದು ಮನೆಗೆ ಬೀಗ ಹಾಕಿಕೊಂಡುಹೋಗಿದ್ದೆವು.  ನಮ್ಮ ತಾಯಿಯವರಾದ ಶ್ರೀಮತಿ ಲಕ್ಷ್ಮೀ ರವರು ನಮ್ಮ ಗ್ರಾಮದಲ್ಲಿಯೇ ಪ್ರತ್ಯೇಕವಾಗಿ ಹಳೆ ಮನೆಯಲ್ಲಿ ವಾಸವಾಗಿದ್ದು ನಾವು ಊರಿಗೆ ಹೋಗುವಾಗ ಅವರಿಗೆ ರಾತ್ರಿ ಮನೆಗೆ ಹೋಗಿ ಮಲಗಿಕೊಳ್ಳುವಂತೆ ಹೇಳಿದ್ದೆನು.  ಆದರೆ ನಮ್ಮ ಅಜ್ಜಿಯವರಿಗೆ  ಆರೋಗ್ಯ ಸರಿಯಿಲ್ಲದ ಕಾರಣ ಅವರು ರಾತ್ರಿ ಸಿದ್ದಲಿಂಗಪುರದಲ್ಲಿರುವ ನಮ್ಮ ಮನೆಗೆ ಹೋಗಿ ಮಲಗಿಕೊಳ್ಳಲು ಸಾಧ್ಯವಾಗಲಿಲ್ಲ.  ಈ ದಿನ ಬೆಳಿಗ್ಗೆ 10:00 ಗಂಟೆಗೆ ನಮ್ಮ ತಾಯಿ ಮನೆಯ ಹತ್ತಿರ ಹೋಗಿ ನೋಡಿದಾಗ ಮನೆಯ ಮುಂಬಾಗಿಲು ತೆರೆದಿದ್ದು ಬಾಗಿಲಿಗೆ ಅಳವಡಿಸಿದ್ದ ಡೋರ್ ಲಾಕ್ ಜಖಂ ಆಗಿರುವುದನ್ನು ನೋಡಿ ಗಾಬರಿಯಾಗಿ ನನಗೆ ಫೋನ್ ಮಾಡಿ ಮನೆ ಕಳ್ಳತನವಾಗಿರುವ ವಿಚಾರವನ್ನು ತಿಳಿಸಿದರು. ವಿಚಾರ ತಿಳಿದ ನಾನು ತಕ್ಷಣ ಊರಿಗೆ ಬಂದು ಮನೆಯ ಒಳಗೆ ಪ್ರವೇಶಿಸಿ ನೋಡಲಾಗಿ. ಮನೆಯ ಬೆಡ್ ರೂಂನ ಬೀರುವಿನಲ್ಲಿಟ್ಟಿದ ಬಟ್ಟೆಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಬೀರುವಿನ ಕಪಾಟು ಜಖಂ ಆಗಿದ್ದು, ಅದರ ಒಳಗೆ ಇಟ್ಟಿದ್ದ 1) ಒಂದು ಜೊತೆ ಕಿವಿಯ ಓಲೆ ಸುಮಾರು 4 ಗ್ರಾಂ 2) ಒಂದು ಚಿನ್ನದ ಉಂಗುರ ಸುಮಾರು 4 ಗ್ರಾಂ ಅಂದಾಜು 24000¸ ಮತ್ತು ನಗದು ಹಣ 20000 ರೋಗಳು  ಕಳ್ಳತನವಾಗಿತ್ತು. ಯಾರೋ ಕಳ್ಳರು ನಾವು ಮನೆಯಲ್ಲಿ ಇಲ್ಲದ ಸಮಯದಲ್ಲಿ ನಮ್ಮ ಮನೆಯ ಬಾಗಿಲ ಡೋರ್ ಲಾಕ್ ಮುರಿದು ಒಳಗೆ ಪ್ರವೇಶಿಸಿ ನಮ್ಮ ಮನೆಯಲ್ಲಿ ಕಳ್ಳತನ ಮಾಡಿದ್ದು, ಅವರನ್ನು ಪತ್ತೆಮಾಡಿ, ಕಳುವಾಗಿರುವ ಪದಾರ್ಥಗಳನ್ನು ಪತ್ತೆಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ಸಿದ್ಧಾರ್ಥನಗರ ಸಂಚಾರ ಠಾಣೆ

ದಿನಾಂಕ:-06.04.2020 ರಂದು ಮದ್ಯಾಹ್ನ ಸುಮಾರು 15.30 ಗಂಟೆ ಸಮಯದಲ್ಲಿ ಪಿರ್ಯಾದಿ ಶಿವಣ್ಣ ರವರು ಕೆಎ-09  ಇಇ-7850 ನಂಬರಿನ ಬಜಾಜ್ ಸಿಟಿ-100 ಮೋಟಾರ್ ಸೈಕಲ್ ಅಲ್ಲಿ ಹಿಂಬದಿ ಸವಾರರನ್ನಾಗಿ ಸೌಭಾಗ್ಯ ರವರನ್ನು ಕೂರಿಸಿಕೊಂಡು ಟಿ. ಎನ್ ಪುg ಮುಖ್ಯ ರಸ್ತೆ ಚಿಕ್ಕಳ್ಳಿ ಕಡೆಯಿಂದ ಆಲನಹಳ್ಳಿ ಕಡೆಗಾದಂತೆ ರಿಂಗ್ ರಸ್ತೆ ಮತ್ತು ಟಿ.ಎನ್ ಪುg ರಸ್ತೆ ಕೂಡುವ ಜಂಕ್ಷನ್ ಅಲ್ಲಿ ಮೋಟಾರ್ ಸೈಕಲ್ ಅನ್ನು ಚಾಲನೆ ಮಾಡಿಕೊಂಡು ಬರುತ್ತಿರುವಾಗ ಅದೇ ಸಮಯದಲ್ಲಿ ರಿಂಗ್ ರಸ್ತೆ ಉತ್ತನಹಳ್ಳಿ ಜಂಕ್ಷನ್ ಕಡೆಯಿಂದ ದೇವೆಗೌಡ ವೃತ್ತದ ಕಡೆಗಾದಂತೆ ಆರ್,ಜೆ-05.ಜಿಬಿ-2877 ನಂಬರಿನ ಲಾರಿ ಚಾಲಕ ಲಾರಿಯನ್ನು ಬಹಳ ವೇಗವಾಗಿ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಮೊಟಾರ್ ಸೈಕಲ್ ಗೆ ಡಿಕ್ಕಿ ಮಾಡಿದ ಪರಿಣಾಮ   ಪಿರ್ಯಾದಿ  ಮತ್ತು ಸೌಭಾಗ್ಯ ರವರು ಮೋಟಾರ್ ಸೈಕಲ್ ಸಮೇತ ರಸ್ತೆ ಮೇಲೆ ಬಿದ್ದ ಪರಿಣಾಮ ಪಿರ್ಯಾದಿಗೆ ಹಣೆಗೆ, ಎರಡು ಕೈ, ಕಾಲು ಮತ್ತು ಸೊಂಟಕ್ಕೆ ಪೆಟ್ಟಾಗಿದ್ದು ಮತ್ತು ಸೌಭಾಗ್ಯ ರವರಿಗೆ ಮುಖಕ್ಕೆ, ಕೈಕಾಲುಗಳಿಗೆ ಮತ್ತು ತೆಲೆಗೆ ಪೆಟ್ಟಾಗಿದ್ದರನ್ನು ಚಿಕಿತ್ಸೆ ಸಲುವಾಗಿ ಸಾರ್ವಜನಿಕರು ನಿರ್ಮಲಾ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು, ನಂತರ ಪಿರ್ಯಾದಿ ನಿರ್ಮಲಾ ಆಸ್ಪತ್ರೆಯಲ್ಲಿ ಡಿಕ್ಕಿ ಮಾಡಿದ ಮೇಲ್ಕಂಡ ಲಾರಿ ಮತ್ತು ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಹೇಳಿಕೆ ದೂರಿನ ಮೇರೆಗೆ ಈ ಪ್ರ. ವ.ವರದಿ

10

ವಂಚನೆ ಪ್ರಕರಣ 

01

ಮಂಡಿ ಠಾಣೆ

ಫಿರ್ಯಾದಿ ವಿ. ನಾರಾಯಣಸ್ವಾಮಿ  ಪೊಲೀಸ್ ಇನ್ಸ್ಪೆಕ್ಟರ್  ಮಂಡಿ ಪೊಲೀಸ್ ಠಾಣೆ ರವರು ದಿನಾಂಕ:06.04.2020 ರಂದು ಸಂಜೆ 6.30 ಗಂಟೆ ಸಮಯದಲ್ಲಿನಿಷೇದಾಜ್ಞೆ ಪರಿಣಾಮಕಾರಿಯಾಗಿ ಜಾರಿ ಮಾಡುವ ಸಲುವಾಗಿ ನಾನು ಸಿಬ್ಬಂದಿಯಾದ ಸಿ.ಹೆಚ್.ಸಿ. 474 ಶ್ರೀ. ಹರೀಶ್ ಹೆಚ್.ಎಸ್ ರವರ ಜೊತೆಗೆ  ಠಾಣಾ ಸರಹದ್ದು ಚರ್ಚ್ ಸರ್ಕಲ್ ಬಳಿ ಅನಾವಶ್ಯಕವಾಗಿ ಓಡಾಡುವ ವಾಹನಗಳನ್ನು ಮತ್ತು ವ್ಯಕ್ತಿಗಳನ್ನು ಚೆಕ್ ಮಾಡುತ್ತಿದ್ದಾಗ, ಆಶೋಕ ರಸ್ತೆ ಸಿ.ಸಿ.ಬಿ. ಕಛೇರಿ ಕಡೆಯಿಂದ ಒಬ್ಬ ವ್ಯಕ್ತಿ ಪದೆ-ಪದೆ ದ್ವಿಚಕ್ರ ವಾಹನ ವನ್ನು ಓಡಿಸಿಕೊಂಡು ಹೋಗಿ ಬರುತ್ತಿರುವುದು ಮಾಡುತ್ತಿದ್ದು, ಸದರಿ ದ್ವಿಚಕ್ರವಾಹನವನ್ನು ರಾತ್ರಿ 6.45 ಗಂಟೆ ಸಮಯದಲ್ಲಿ ತಡೆದು ವಿಚಾರ ಮಾಡಲಾಗಿ  ತನ್ನ ಹೆಸರು ಆರೋಪಿತನಾದ ಇರ್ಪಾನ್ ಪಾಷ, ಮೈಸೂರು ಜಿಲ್ಲೆ ಎಂದು ತಿಳಿಸಿ, ಸದರಿ ಆಸಾಮಿ ಒಂದು ಗುರುತಿನ ಚೀಟಿಯನ್ನು ತೋರಿಸಿ, ತಾನು ಅಂತರಾಷ್ಟ್ರಿಯ ಮಾನವ ಹಕ್ಕುಗಳ ಪರಿಷತ್ತು ವೈಸ್ ಪ್ರಸಿಡೆಂಟ್ ಎಂತಲೂ, ಮತ್ತೊಮ್ಮೆ ಕೇಳಲಾಗಿ HUMAN RIGHTS INDIA FOUNDATION & LABOUR LIBERAL NAV NIRMAN SENE ಯ ವೈಸ್ ಪ್ರಸಿಡೆಂಟ್ ಎಂದು ಹಾಗೂ INDIAN HUMAN RIGHTS, NEWS TIMES MEDIA JOURNALIST ಎಂದು ತಿಳಿಸಿ ಐ.ಡಿ. ಕಾರ್ಡ್ಗಳನ್ನು ನೀಡಿರುತ್ತಾರೆ. ಸದರಿ ಐಡಿ ಕಾರ್ಡ್ ಗಳನ್ನು ಪಡೆದು ಪರಿಶೀಲಿಸಲಾಗಿ ಮೇಲಿನಂತೆ ಹೇಳಿರುವುದು ಕಂಡು ಬರುತ್ತದೆ. ನಂತರ ಹೆಸರು, ವಿಳಾಸ, ಮೊಬೈಲ್ ನಂಬರ್ ಮತ್ತು ಕಾರ್ಡ್ನಲ್ಲಿದ್ದ ಸಂಸ್ಥೆಗಳ ಬಗ್ಗೆ ಕೂಲಂಕುಷವಾಗಿ ವಿಚಾರ ಮಾಡಲಾಗಿ, ಮೊದಲಿಗೆ ಮೊಬೈಲ್ ನಂಬರ್ 7019306390 ಎಂದು ತಿಳಿಸಿ, ನಂತರ ಉಳಿದ ಎಲ್ಲಾ ಪ್ರಶ್ನೆಗಳಿಗೆ ಸಮಂಜಷವಾದ ಉತ್ತರ ನೀಡದೇ ತಬ್ಬಿಬ್ಬಾಗಿ ಆತನು ನೀಡಿದ್ದ ಐ.ಡಿ. ಕಾರ್ಡ್ ಗಳನ್ನು ಪೊಲೀಸರ ಬಳಿ ಬಿಟ್ಟು, ತಾನು ಬಂದಿದ್ದ ಬೈಕ್ನಲ್ಲಿ ಜೋರಾಗಿ ಓಡಿಸಿಕೊಂಡು ತಪ್ಪಿಸಿಕೊಂಡು ಹೋಗಿರುತ್ತಾನೆ. ಹಿಂಬಾಲಿಸಲಾಗಿ ಪತ್ತೆಯಾಗಿರುವುದಿಲ್ಲ. ಆತನ ದ್ವಿಚಕ್ರ ವಾಹನದ ಮುಂದೆ ಮತ್ತು ಹಿಂಭಾಗದ ನಂಬರ್ ನೋಡಲಾಗಿ ಅಸ್ಪಷ್ಟವಾಗಿರುವುದು ಕಂಡು ಬಂತು. ಕೋವಿಡ್-19 ಎಂಬ ಸಾಂಕ್ರಾಮಿಕ ರೋಗ ದಿನೆ ದಿನೆ ಮೈಸೂರು ಭಾಗದಲ್ಲಿ ಹೆಚ್ಚುತ್ತಿದ್ದು, ಈ ಸಾಂಕ್ರಾಮಿಕ ರೋಗ ಹರಡುವಿಕೆ ವಿಧಾನದ ಬಗ್ಗೆ ಈತನಿಗೆ ಅರಿವು ಮತ್ತು ಜ್ಞಾನ ಇದ್ದರು ಸಹ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯತೆಯಿಂದ ಸಾರ್ವಜನಿಕವಾಗಿ, ಅನಗತ್ಯವಾಗಿ ತಿರುಗಾಡುವುದರಿಂದ ಈತನಿಂದಲೇ ಸಾಂಕ್ರಾಮಿಕ ರೋಗ ಬೇರೆಯವರಿಗೆ ಹರಡುವ ಸಾಧ್ಯತೆ ಇರುತ್ತದೆ.

       ಆದ್ದರಿಂದ ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು ನಿಷೇದಾಜ್ಞೆ ಇದ್ದರು ಸಹ ಅದನ್ನು ಉಲ್ಲಂಘಿಸಿ ಈತನು ಯಾವುದೆ ಪತ್ರಕರ್ತನಲ್ಲದಿದ್ದರು ಮತ್ತು ಯಾವುದೇ ಸಂಸ್ಥೆಯ ಪ್ರತಿನಿಧಿ ಅಲ್ಲದಿದ್ದರು ಸಹ ಪತ್ರಕರ್ತ ಮತ್ತು ಸಂಸ್ಥೆಯ ಪ್ರತಿನಿಧಿ ಎಂದು ಗುರುತಿನ ಚೀಟಿಯನ್ನು ಇಟ್ಟುಕೊಂಡು ವಂಚನೆ ಮಾಡುವ ಉದ್ದೇಶದಿಂದ ಅವುಗಳನ್ನು ಉಪಯೋಗಿಸಿಕೊಂಡು ವಂಚನೆ ಮಾಡುತ್ತಿರುವುದು ಹಾಗೂ ಸಾಂಕ್ರಾಮಿಕ ರೋಗ ಹರಡುವಿಕೆ ಬಗ್ಗೆ ನಿರ್ಲಕ್ಷ್ಯತೆಯನ್ನು ವಹಿಸಿರುವುದು ಕಂಡು ಬಂದ ಮೇರೆಗೆ ಮುಂದಿನ ಕ್ರಮಕ್ಕಾಗಿ 7.45 ಗಂಟೆಗೆ ಈ ಬಗ್ಗೆ ವರದಿ ತಯಾರಿಸಿಕೊಂಡು ಠಾಣಾ ಮೊ.ಸಂ. 44/2020 ಕಲಂ 188, 269, 420, 419 ಐ.ಪಿ.ಸಿ. ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ. 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

01

ನಜರ್ ಬಾದ್ ಠಾಣೆ

ದಿನಾಂಕ-06/04/2020 ರಂದು  ಫಿರ್ಯಾದಿ ಚನ್ನಬಸಪ್ಪ, ಸಿಹೆಚ್ ಸಿ 180, ನಜರ್ ಬಾದ್ ಪೊಲೀಸ್ ಠಾಣೆ, ರವರು ಸಿದ್ದಾರ್ಥನಗರದ ಕಡೆ ಸಂಜೆ 05-15 ಗಂಟೆ ಸಮಯದಲ್ಲಿ ಗಸ್ತುಮಾಡುತ್ತಿರುವಾಗ  ಭಾತ್ಮೀದಾರರಿಂದ ಬಂದ ಮಾಹಿತಿ ಏನೆಂದರೆ ರಾಘವೇಂದ್ರನಗರದ ಕಾವೇರಿ ಮುಖ್ಯರಸ್ತೆಯಲ್ಲಿ ಕೆ.ಎ 02, ಎಂ.ಡಿ. 9438 ಕೆಂಪುಬಣ್ಣದ ಮಾರುತಿ ಸ್ವೀಫ್ಟ್ ಕಾರಿನಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಅಕ್ರಮವಾಗಿ ಮಧ್ಯಪಾನವನ್ನು ಇಟ್ಟುಕೊಂಡು ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ನಾನು ಸದರಿ ಮಾಹಿತಿಯನ್ನು ಖಚಿತಪಡಿಸಿಕೊಂಡಿರುತ್ತೇನೆ. ಅದ್ದರಿಂದ ಅಕ್ರಮವಾಗಿ ಕೆ.ಎ 02, ಎಂ.ಡಿ. 9438 ಮಾರುತಿ ಸ್ವೀಫ್ಟ್ ಕಾರಿನಲ್ಲಿ ಮಧ್ಯವನ್ನು ಮಾರಾಟ ಮಾಡುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

                              MYSURU CITY TRAFFIC VIOLATION CASES

                                                    DATE  :06-04-2020

SLNO

                      HEADS

                          NO. OF CASES

DR

KR

NR

SN

VV

TOTAL

1

TOTAL NUMBER OF FTVRS

-       

-       

-       

-       

-       

-

2

TOTAL NUMBER OF CRR'S

-       

-       

-       

-       

-       

-

3

TOTAL FINE AMOUNT COLLECTED

-       

-       

-       

-       

-       

-

4

POLICE NOTICE ISSUED

-       

-       

-       

-       

-       

-

5

PARKING TAGS

-       

-       

-       

-       

-       

-

6

FATAL

-       

-       

-       

-       

-       

-

7

NON FATAL

-       

-       

-       

-       

-       

-

8

INTERCEPTOR CASES

-       

-       

-       

-       

-       

-

9

SUSPENSION OF D.L.

-       

-       

-       

-       

-       

-

10

Sec 283 IPC CASES

-       

-       

-       

-       

-       

-

11

Sec 353 IPC CASES

-       

-       

-       

-       

-       

-

12

TOWING CASES

-       

-       

-       

-       

-       

-Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®