ENGLISH   |   KANNADA

Blog



ದಿನಾಂಕ;09.04.2020 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:10.04.2020 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 126       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

4

ಹಲ್ಲೆ ಪ್ರಕರಣ      

02

ನರಸಿಂಹರಾಜ ಠಾಣೆ

ಫಿರ್ಯಾದಿ ಅಸೀಫ್ ಖಾನ್ ರವರು   ದಿ: 09-04-2020  ರಂದು 11.-00 ಗಂಟೆಯ ವೇಳೆಯಲ್ಲಿ  ಬಡೆಮಕಾನ್ , ಟಿಪ್ಪು ಸರ್ಕಲ್  ಬಳಿ      ಇರುವ  ಇಂಡಿಯನ್  ಸರ್ವಿಸ್ ಸ್ಟೆಷನ್ ಬಳಿ ಆರೋಪಿಗಳಾದ  ಅಫ್ಜಲ್ , ರೋಷನ್ ಮತ್ತು ಆಸೀಪ್ ರವರುಗಳು  ಕುಳಿತ್ತಿದ್ದು , ಪೊಲೀಸರು ರೌಂಡ್ಸ್  ಗೆ ಬಂದಾಗ  ಓಡಿ ಹೋಗುತ್ತಿದ್ದರು ,  ಇದಕ್ಕೆ  ಪಿರ್ಯಾದಿಯವರು  ನೀವುಗಳು ನಿಮ್ಮ ಮನೆಯ ಬಳಿ  ಹೋಗುವಂತೆ  ತಿಳಿಸಿರುತ್ತಾರೆ . ಇದಕ್ಕೆ   ಆರೋಪಿಗಳು ಕುಪಿತಗೊಂಡು  ಪಿರ್ಯಾದಿಗೆ   ಕೈಗಳಿಂದ ಮುಖಕ್ಕೆ  ಎದೆಗೆ ಹಲ್ಲೆ  ಮಾಡಿದ್ದು ,  ಇದೇ ವೇಳೆಗೆ  ರೋಷನ್  ಪಿರ್ಯದಿಯವರನ್ನು ಹಿಂಬದಿಯಿಂದ ಹಿಡಿದುಕೊಂಡಿರುತ್ತಾರೆ . ತಕ್ಷಣ   ಅಫ್ಜಲ್ ರವರು   ತನ್ನ ಬಳಿ ಇದ್ದ ಕಬ್ಬಿಣದ ವಸ್ತುವಿನಿಂದ ಹಣೆಯ ಭಾಗಕ್ಕೆ ಹಲ್ಲೆ  ಮಾಡಿ ರಕ್ತಗಾಯ ಮಾಡಿರುತ್ತಾರೆ ಈ ಬಗ್ಗೆ ಪಿರ್ಯಾದಿಯವರು ಕೆ ಆರ್ ಆಸ್ಪತ್ರೆಗೆ ಹೋಗಿ  ಸೂಕ್ತ ಚಿಕಿತ್ಸೆ ಪಡೆದುಕೊಂಡು ಠಾಣೆಗೆ  ಹಾಜರಾಗಿ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ  ಕೇಸಿನ ಸಾರಾಂಶವಾಗಿದೆ .

ವಿಜಯನಗರ ಠಾಣೆ

ದಿನಾಂಕ 09/04/2020 ರಂದು ಪಿರ್ಯಾದ  ಮಂಜುನಾಥ್ ರವರ ತಮ್ಮ ಹೇಮಂತ್ ಕುಮಾರ್ ರವರು ಸಂಕಲ್ಪ ಟ್ರೀ ಅಫಾರ್ಟ್ಮೆಂಟ್ ವಿಜಯನಗರದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿತರಾದ ಆರ್ಷಿತಾ ಶೆಟ್ಟಿ ಮತ್ತು ನಂದೀಶ್ ರವರು ನನ್ನ ತಮ್ಮ ಹೇಮಂತ್ ಕುಮಾರ್ ರವರಿಗೆ ಕರೆ ಮಾಡಿ ಬೆದರಿಕೆ ಹಾಕುವುದು, ಕಂಪನಿಯ ಬಳಿ ಮತ್ತು ನಮ್ಮ ಮನೆಯ ಬಳಿ ಬಂದು ಬೆದರಿಕೆ ಹಾಕುವುದು ಮಾಡುತ್ತಿದ್ದನು. ಎಲ್ಲಿಯಾದರೂ ಹೋಗಿ ಸಾಯಿ ಎಂದು ಬೈದು, ಆತನ ಸ್ನೇಹಿತರೊಂದಿಗೆ ಸೇರಿ ಮೇಲೆ ಹಲ್ಲೆ ಮಾಡಿದ್ದು, ದಿನಾಂಕ 26/03/2020 ರಂದು ನನ್ನ ದೊಡ್ಡಮ್ಮನ ಮಗ ಪ್ರತಾಪ್ ರವರು ನನಗೆ ಫೋನ್ ಮಾಡಿ ಹೇಮಂತ್ ಕುಮಾರ್ ರವರು ಆರ್.ಎಂ.ಪಿ. ಬಡಾವಣೆಯ ಸಂಕಲ್ಪ ಅಪಾರ್ಟ್ ಮೆಂಟ್ ಬಳಿ ಇದ್ದು, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿ ಕಳುಹಿಸಿದ್ದಾನೆ ಎಂದು ತಿಳಿಸಿ, ನಂತರ ನಾನು ವಿಡಿಯೋವನ್ನು ನೋಡಲಾಗಿ ನನ್ನ ಸಾವಿಗೆ ಇವರೆ ಕಾರಣ ಎಂದು ಇತ್ಯಾದಿಯಾಗಿ ಹೇಳಿರುವುದು ಕಂಡು ಬಂತು. ಆಗ ನಾನು ಕೂಡಲೇ ಸಂಕಲ್ಪ ಟ್ರೀ ಅಪಾರ್ಟ್ ಮೆಂಟ್  ಹೋಗಿ ನೋಡಲಾಗಿ ನನ್ನ ತಮ್ಮ ನೆಲದ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂತು. ನಂತರ ದಿನಾಂಕ 31/03/2020 ರಂದು ಹೆಚ್ಚಿನ ಚಿಕಿತ್ಸೆಗಾಗಿ ಜೆ.ಎಸ್.ಎಸ್. ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿದ್ದು, ಈ ದಿನ ದಿನಾಂಕ 09/04/2020 ರಂದು ಮಧ್ಯಾಹ್ನ ಸುಮಾರು 03-30 ಗಂಟೆಯಲ್ಲಿ ಚಿಕಿತ್ಸೆ ಪಲಕಾರಿಯಾಗದೇ ನನ್ನ ತಮ್ಮ ಹೇಮಂತ್ ಕುಮಾರ್ ರವರು ಮೃತಪಟ್ಟಿರುತ್ತಾನೆ.  ಆದ್ದರಿಂದ ಆರ್ಷಿತಾ ಶೆಟ್ಟಿ, ನಂದೀಶ್ ಮತ್ತು ಆತನ ಸ್ನೇಹಿತರ ಮೇಲೆ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ನೀಡಿದ ದೃಇನ ಮೇರೆಗೆ ಈ ಪ್ರ.ವ.ವರದಿ.

 

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

 ಇತರೆ ಪ್ರಕರಣಗಳು

03

ಉದಯಗಿರಿ ಠಾಣೆ

ಪೂಣ್ಣಚ್ಚ ಎನ್.ಎಂ. ಪಿ.ಐ ಉದಯಗಿರಿ ಪೊಲೀಸ್ ಠಾಣೆ ರವರು ಮೈಸೂರು ನಗರ ವ್ಯಾಪ್ತಿಯಲ್ಲಿ ಮಾನ್ಯ ಪೊಲೀಸ್ ಆಯುಕ್ತರ ಆದೇಶದಂತೆ ಕೋವಿಡ್-19 ನಿಯಂತ್ರಣ ಸಂಬಂಧ ಸಾಂಕ್ರಾಮಿಕ ಸೋಂಕು ಹರಡದಂತೆ ತಡೆಯುವ ಸಂಬಂಧ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು ಮತ್ತು ಪ್ರತಿಯೊಬ್ಬ ನಾಗರೀಕರು ಕೊರೊನ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲನೆ ಮಾಡಬೇಕೆಂದು ಸೂಚಿಸಲಾಗಿತ್ತು. ಸದರಿ ಆದೇಶದ ಉಲ್ಲಂಘನೆ ಮಾಡುವವರ ಬಗ್ಗೆ ಪರಿಶೀಲನೆ ನಡೆಸಲು ಈ ದಿನ ಡ್ರೋಣ್ ಕ್ಯಾಮೆರಾ ಮುಖಾಂತರ ಮೈಸೂರು ನಗರ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಮಹದೇವಪುರ ಮುಖ್ಯ ರಸ್ತೆಯಲ್ಲಿ ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಹದೇವಪುರ ಮುಖ್ಯ ರಸ್ತೆ, ವೈ.ಎಸ್. ಟ್ರೇಡರ್ಸ್ ದಿನಸಿ ಅಂಗಡಿ ಬಳಿ 13-35 ಗಂಟೆ ಸಮಯದಲ್ಲಿ ಸುಮಾರು 8 ರಿಂದ 10 ಜನರು ಗುಂಪುಗೂಡಿದ್ದು, ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಕೊರೊನ ಸೋಂಕು ತಡೆಗಟ್ಟುವ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ, ಅಪಾಯಕಾರಿ ಸಾಂಕ್ರಾಮಿಕ ಕೊರೊನ ಸೋಂಕು ಹರಡದಂತೆ ವಿಧಿಸಿದ್ದ ನಿಷೇದಾಜ್ಞೆ ಆದೇಶದ ಬಗ್ಗೆ ತಿಳುವಳಿಕೆ ಇದ್ದರೂ ತೀವ್ರ ನಿರ್ಲಕ್ಷತನದಿಂದ ಉಲ್ಲಂಘನೆ ಮಾಡಿ ಗುಂಪುಗೂಡಿದ್ದು, ಸಾಮಾಜಿಕ ಅಂತರ ಇರುವಂತೆ ನೋಡಿಕೊಳ್ಳದೇ, ಕೋವಿಡ್-19 ನಿಯಂತ್ರಣ ಸಂಬಂಧ ಜಾರಿಯಲ್ಲಿರುವ ಆದೇಶದ ಉಲ್ಲಂಘನೆ ಮಾಡಿರುವುದರಿಂದ, ಠಾಣಾ ಮೊ.ನಂ.63/2020 ಕಲಂ 269, 270, 188 ಐ.ಪಿ.ಸಿ. ರೀತ್ಯಾ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುತ್ತೇನೆ. ಮೇಲ್ಕಂಡಂತೆ ಕಾನೂನು ಆದೇಶವನ್ನು ಉಲ್ಲಂಘನೆ ಮಾಡಿರುವವರ ಹೆಸರು ವಿಳಾಸ ತಿಳಿಯಬೇಕಾಗಿರುತ್ತದೆ.

ಉದಯಗಿರಿ ಠಾಣೆ

ಫಿರ್ಯಾದಿ ಜೈಕೀರ್ತಿ ಪಿ.ಎಸ್.ಐ ಕಾ&ಸು ಉದಯಗಿರಿ ಪೊಲೀಸ್ ಠಾಣೆ ರವರು ಮೈಸೂರು ನಗರ ವ್ಯಾಪ್ತಿಯಲ್ಲಿ ಮಾನ್ಯ ಪೊಲೀಸ್ ಆಯುಕ್ತರ ಆದೇಶದಂತೆ ಕೋವಿಡ್-19 ನಿಯಂತ್ರಣ ಸಂಬಂಧ ಜಾರಿಯಲ್ಲಿರುವ ಆದೇಶದ ರೀತ್ಯಾ ಐದಕ್ಕಿಂತ ಹೆಚ್ಚು ಜನರು ಗುಂಪುಗೂಡಬಾರದೆಂದು ಆದೇಶವಾಗಿರುತ್ತದೆ. ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡದಂತೆ ತಡೆಯುವ ಸಂಬಂಧ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು ಮತ್ತು ಪ್ರತಿಯೊಬ್ಬ ನಾಗರೀಕರು ಕೊರೊನ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲನೆ ಮಾಡಬೇಕೆಂದು ಸೂಚಿಸಲಾಗಿತ್ತು. ಸದರಿ ಆದೇಶದ ಉಲ್ಲಂಘನೆ ಮಾಡುವವರ ಬಗ್ಗೆ ಪರಿಶೀಲನೆ ನಡೆಸಲು ಈ ದಿನ ಡ್ರೋಣ್ ಕ್ಯಾಮೆರಾ ಮುಖಾಂತರ ಮೈಸೂರು ನಗರ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಮಹದೇವಪುರ ಮುಖ್ಯ ರಸ್ತೆಯಲ್ಲಿ ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಹದೇವಪುರ ಮುಖ್ಯ ರಸ್ತೆ, ದೀಪಕ್ ಪಾನ್ ಬ್ರೋಕರ್ಸ್ ಪಕ್ಕದಲ್ಲಿರುವ ಯಾ ಅಲ್ಲಾ ದಿನಸಿ ಅಂಗಡಿ ಬಳಿ 13-45 ಗಂಟೆ ಸಮಯದಲ್ಲಿ ಸುಮಾರು 8 ರಿಂದ 10 ಜನರು ಗುಂಪುಗೂಡಿದ್ದು, ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಕೊರೊನ ಸೋಂಕು ತಡೆಗಟ್ಟುವ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ, ಅಪಾಯಕಾರಿ ಸಾಂಕ್ರಾಮಿಕ ಕೊರೊನ ಸೋಂಕು ಹರಡದಂತೆ ವಿಧಿಸಿದ್ದ ನಿಷೇದಾಜ್ಞೆ ಆದೇಶದ  ಬಗ್ಗೆ ತಿಳುವಳಿಕೆ ಇದ್ದರೂ ತೀವ್ರ ನಿರ್ಲಕ್ಷತನದಿಂದ ಉಲ್ಲಂಘನೆ ಮಾಡಿ ಗುಂಪುಗೂಡಿದ್ದು, ಸಾಮಾಜಿಕ ಅಂತರ ಇರುವಂತೆ ನೋಡಿಕೊಳ್ಳದೇ, ಆದೇಶದ ಉಲ್ಲಂಘನೆ ಮಾಡಿರುವುದರಿಂದ ಠಾಣಾ ಮೊ.ನಂ.64/2020 ಕಲಂ 269, 270, 188 ಐ.ಪಿ.ಸಿ. ರೀತ್ಯಾ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುತ್ತೇನೆ. ಮೇಲ್ಕಂಡಂತೆ ಕಾನೂನು ಆದೇಶವನ್ನು ಉಲ್ಲಂಘನೆ ಮಾಡಿರುವವರ ಹೆಸರು ವಿಳಾಸ ತಿಳಿಯಬೇಕಾಗಿರುತ್ತದೆ.

ಕೃಷ್ಣರಾಜ ಠಾಣೆ

ಫಿರ್ಯಾದಿ ಎಲ್.ಶ್ರೀನಿವಾಸ್ ಕೃಷ್ಣರಾಜ ಪೊಲೀಸ್ ಠಾಣೆ ರವರು ದಿ: 09/04/2020 ರಂದು ಮದ್ಯಾಹ್ನ 3-30 ಗಂಟೆಯಲ್ಲಿ ಬಾತ್ಮೀದಾರರಿಂದ ಬಂದ ಮಾಹಿತಿ ಏನೆಂದರೆ, ಕೆ.ಆರ್.ಮೊಹಲ್ಲಾದ ನಾಲಾಬೀದಿಯ 2ನೇ ಕ್ರಾಸ್ನಲ್ಲಿರುವ ಮನೆ ನಂ-625ರಲ್ಲಿ ಸುಮಾರು 7-8 ಜನರು ಸಾರ್ವಜನಿಕರಿಗೆ ಮಾರಕವಾಗಿರುವ ಕೊರೊನ ಸಾಂಕ್ರಾಮಿಕ ರೋಗವನ್ನು ಹರಡುವಂತೆ ಒಟ್ಟಿಗೆ ಕುಳಿತುಕೊಂಡು ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ, ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ನಡೆಸುವ ಸಲುವಾಗಿಸಿಬ್ಬ0ದಿಯನ್ನು ಜೊತೆಯಲ್ಲಿ ಕರೆದು ಕೊಂಡು ಮನೆ ನಂ-625ರ ಸದರಿ ಮನೆಯ ಬಾಗಿಲು ಮುಚ್ಚಿದ್ದು, ಅದರ ಕಿಟಕಿ ತೆರೆದಿದ್ದು, ಅದರ ಬಳಿ ಮರೆಯಾಗಿ ನಿಂತು ನೋಡಲಾಗಿ, ನೆಲಕ್ಕೆ ಒಂದು ಕಡ್ಡಿ ಚಾಪೆ ಹಾಸಿಕೊಂಡು ಸುಮಾರು 7-8 ಜನರು ವೃತ್ತಾಕಾರಾವಾಗಿ ಒಟ್ಟಿಗೆ ಕುಳಿತುಕೊಂಡು ಇಸ್ಪೀಟ್ ಜೂಜಾಟವನ್ನು ಆಡುತ್ತಿರುವುದು ಕಂಡು ಅಕಾಡದಲ್ಲಿದ್ದ ಹಣವನ್ನು ಎಣಿಕೆ ಮಾಡಲಾಗಿ ಒಟ್ಟು 17,400-00ರೂ ನಗದು ಹಣ ವಿದ್ದು, ಅದನ್ನು ಹಾಗೂ 52 ಇಸ್ಪೀಟ್ ಎಲೆಗಳು ಮತ್ತು ಕುಳಿತುಕೊಳ್ಳಲು ಹಾಸಿ ಕೊಂಡಿದ್ದ ಒಂದು ಕಡ್ಡಿಚಾಪೆಯನ್ನು ಮುಂದಿನ ಕ್ರಮದ ಬಗ್ಗೆ ಸ್ಥಳದಲ್ಲಿ ಪಂಚಾಯ್ತುದಾರರ ಸಮಕ್ಷಮದಲ್ಲಿ ಸಂಜೆ 5-00 ಗಂಟೆಯಿಂದ 6-00 ಗಂಟೆಯವರೆಗೆ ಮಹಜರ್ ಕ್ರಮ ಜರುಗಿಸಿ ಅಮಾನತ್ತು ಪಡಿಸಿ ಕೊಂಡಿರುತ್ತೆ. ಸಾರ್ವಜನಿಕವಾಗಿ ಗುಂಪು ಕಟ್ಟಿಕೊಂಡು ಸಾಂಕ್ರಾಮಿಕ ರೋಗ ಹರಡುವಂತೆ ಕಾನೂನು ಬಾಹಿರವಾಗಿ, ಬೇಜವಾಬ್ದಾರಿ ತನದಿಂದ ಒಟ್ಟಾಗಿ ಗುಂಪು ಕಟ್ಟಿಕೊಂಡು ಕುಳಿತುಕೊಂಡು, ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಕೊಂಡು ಅಂದರ್ ಬಾಯರ್ ಎಂಬ ಇಸ್ಪೀಟ್ ಜೂಜಾಟವನ್ನು ಅಡಿದ ಅರೋಪಿತರುಗಳ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳುವಸಲುವಾಗಿ ಸ್ವವರದಿಯನ್ನು ತಯಾರಿಸಿ ಸಂಜೆ 7-00 ಗಂಟೆಗೆ ಠಾಣಾ ಮೊ.ನಂ. 48/2020 ಕಲಂ 188, 269, 270 ಐಪಿಸಿ ಮತ್ತು 79, 80 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

 

                  MYSURU CITY TRAFFIC VIOLATION CASES

                                  DATE  :09-04-2020

SLNO

          HEADS

      NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

-

-

-

-

-

2

TOTAL NUMBER OF CRR'S

-

-

-

-

-

-

3

TOTAL FINE AMOUNT COLLECTED

-

-

-

-

-

-

4

POLICE NOTICE ISSUED

-

-

-

-

-

-

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

-

-

-

-

-

8

INTERCEPTOR CASES

-

-

-

-

-

-

9

SUSPENSION OF D.L.

-

-

-

-

-

-

10

Sec 283 IPC CASES

-

-

-

-

-

-

11

Sec 353 IPC CASES

-

-

-

-

-

-

12

TOWING CASES

-

-

-

-

-

-

 



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com

Website Designed and Developed by Global Buzz®