ENGLISH   |   KANNADA

Blogದಿನಾಂಕ;11.07.2017 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:12.07.2017 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 345       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

01

ನಜರ್ ಬಾದ್ ಠಾಣೆ.

ದಿನಾಂಕ: 08/07/2017 ರಂದು ಸಂಜೆ 19-30 ಗಂಟೆಯಲ್ಲಿ ಪಿರ್ಯಾದಿ ಮಹೇಶ್ ರವರ ತಮ್ಮನ ಹೆಂಡತಿಯವರಾದ ಭಾವನ ಡಿ ಷರಫ್ ರವರು #182/ಸಿ, ಮಾನಸ ರಸ್ತೆ, ಇಟ್ಟಿಗೆ ಗೂಡು ಮನೆಯ ಮುಂಬಾಗ ಸರ್ವೀಸ್ ರಸ್ತೆಯಲ್ಲಿ ತಮ್ಮ ಮಗುವಿನೊಂದಿಗೆ ವಾಯುವಿಹಾರ ಮಾಡುತ್ತಿದ್ದಾಗ ಯಾರೋ 3 ಜನ ಅಪರಿಚಿತರು ಒಂದು ಪಿರ್ಯಾದಿ ನಾದಿನಿಯು ಮಾತನಾಡುತ್ತಿದ್ದ ಮೈಕ್ರೋ ಮ್ಯಾಕ್ಸ್ ಮೊಬೈಲ್ ಫೋನ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು  ನೀಡಿದ ದೂರು.

4

ಹಲ್ಲೆ ಪ್ರಕರಣ      

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

03

ಜಯಲಕ್ಷ್ಮೀಪುರಂ ಠಾಣೆ.

ಪಿರ್ಯಾದಿ ನಟರಾಜ್ ರವರ ಚಿಕ್ಕಮ್ಮ ಪ್ರೀತಿ ರವರು ಗೋಕುಲಂ 2 ನೇ ಹಂತದ 15 ನೇ ಕ್ರಾಸ್, 4 ನೇ ಮೇನ್, ಮನೆ ನಂ. 108/ಎ ರ ಮನೆಯ ಮುಂದೆ ದಿ. 10/07/2017 ರಂದು ರಾತ್ರಿ 10.00 ಗಂಟೆ ಸಮಯದಲ್ಲಿ ತಮ್ಮ ಬಾಬ್ತು ಪಲ್ಸರ್ ಬೈಕ್ ನಂಬರ್ ಕೆ.ಎ 54 ಜೆ 0878 ಅನ್ನು ನಿಲ್ಲಿಸಿ ದಿ.11/07/2017 ರಂದು ಬೆಳಿಗ್ಗೆ 06.00 ಗಂಟೆಗೆ ನೋಡಲಾಗಿ ಅವರು ನಿಲ್ಲಿಸಿದ್ದ ಜಾಗದಲ್ಲಿ ಬೈಕ್ ಇರಲಿಲ್ಲ ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರು.

ಕೆ ಆರ್ ಠಾಣೆ.

ಪಿರ್ಯಾದಿ ರವಿಚಂದ್ರ.ಎನ್. ರವರು ದಿನಾಂಕ:09/07/2017 ರಂದು ತರಕಾರಿ ತರಲು ಗನ್ ಹೌಸ್ ಸರ್ಕಲ್  ಹತ್ತಿರ ಹೀರೊ ಹೊಂಡಾ ಫ್ಯಾಷನ್ ನಂ-ಕೆಎ-09-ಇಎನ್-5689 ವಾಹನವನ್ನು ಬೆಳಗ್ಗೆ  ನಿಲ್ಲಿಸಿ ಮಾರ್ಕೇಟ್ ಗೆ ಹೋಗಿದ್ದು ನಂತರ ಬಂದು ನೋಡಲಾಗಿ ಸದರಿ ಬೈಕ್ ಕಾಣೆಯಾಗಿದ್ದು ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

ಕೆ ಆರ್ ಠಾಣೆ.

ಪಿರ್ಯಾದಿ ಲಿಂಗಪ್ಪ ರವರು ದಿನಾಂಕ: 04/07/2017 ರಂದು, ತರಕಾರಿ ತರಲು ಗನ್ ಹೌಸ್ ಸರ್ಕಲ್ ನ ಅರಳಿ ಮರದ ಹತ್ತಿರ ಹೀರೊ ಹೊಂಡಾ ಫ್ಯಾಷನ್ ಪ್ರೋ.ನಂ- ಕೆಎ-09-ಇವಿ-5293 ಸಿಲ್ವರ್ ಮತ್ತು ಕಪ್ಪು ಮಿಶ್ರಿತ ವಾಹನವನ್ನು ನಿಲ್ಲಿಸಿ ಮಾರ್ಕೇಟ್ ಗೆ ಹೋಗಿದ್ದು ನಂತರ ನೋಡಲಾಗಿ ಸದರಿ ಬೈಕ್ ಕಾಣೆಯಾಗಿದ್ದು ಎಲ್ಲಾ ಕಡೆ ಹುಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

02

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ;08-07-2017 ರಂದು ಬೆಳಿಗ್ಗೆ 7-30 ಸಮಯದಲ್ಲಿ ಪಿರ್ಯಾದಿ ಮಹದೇವಸ್ವಾಮಿ ರವರ  ಹೆಂಡತಿ ಭಾಗ್ಯಮ್ಮ ಮತ್ತು ಸ್ಮೇಹಿತೆ ಶಾರದ ಎಂಬುವರು ಆತ್ತಹಳ್ಳಿ ಗ್ರಾಮಕ್ಕೆ ಹೋಗಲು ಬಸ್ ಗಾಗಿ  ಟೆರಿಷಿಯನ್ ಕಾಲೇಜ್ ಯರಗನಹಳ್ಳಿ ವೃತ್ತದಲ್ಲಿ ಕಾಯುತ್ತ ನಿಂತಿದ್ದ ಸಮಯದಲ್ಲಿ ಹಿಂದಿನಿಂದ ಅಂದರೆ ಡಾ.ರಾಜ್ ಕುಮಾರ್ ರಸ್ತೆ ಕಡೆಯಿಂದ ಮೋಟಾರ್ ಸೈಕಲ್ ನಂಬರ್ ಕೆಎ55ಡಬ್ಯೂ1610 ರ ಚಾಲಕ ಕುಮಾರ್ ಎಂಬುವರು ಆತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರ ಪತ್ನಿ ಹಾಗು ಅವರ ಸ್ನೇಹಿತೆ ಗೆ ಡಿಕ್ಕಿಮಾಡಿದ ಪರಿಣಾಮ ಪಿರ್ಯಾದುದಾರರ ಪತ್ನಿಗೆ ಮುಖದ ಭಾಗ ತರಚಿದ ಗಾಯವಾಗಿದ್ದು ಹಾಗು ತುಟಿಯ ಭಾಗ ನೀಳಿಕೊಂಡಿದ್ದು ಕೈ ಕಾಲುಗಳಿಗೆ  ಪೆಟ್ಟಾಗಿರುತ್ತದೆ ,ಹಾಗು ಶಾರದ ರವರಿಗೆ ಬಲಗಾಲು ಪೆಟ್ಟಾಗಿದ್ದು ನಂತರ ಡಿಕ್ಕಿಮಾಡಿದ ಮೋಟಾರ್ ಸೈಕಲ್ ಸವಾರ ಹಾಗು ಸಾರ್ವಜನಿಕರ ಸಹಾಯದಿಂದ ಶುಭೋದಯ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿದ್ದು ಡಿಕ್ಕಿಮಾಡಿದ ಮೋಟಾರ್ ಸೈಕಲ್ ಹಾಗು ಸವಾರನ ವಿರುದ್ದ ತಡವಾಗಿ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕೆಂದು ನೀಡಿದ ದೂರು.

ಎನ್ ಆರ್ ಸಂಚಾರ ಠಾಣೆ.

ದಿನಾಂಕ.11/07/2017 ರಂದು ರಾತ್ರಿ 08.05 ಗಂಟೆಯಲ್ಲಿ ಸ್ಕೂಟರ್ ನಂ.ಕೆಎ-09 ಯು-8526 ರ ಸವಾರ ವೀರ ಸಿಂಹನ್ ರವರು ಸ್ಕೂಟರನ್ನು ಮೈಸೂರು-ಬೆಂಗಳೂರು ರಸ್ತೆಯಲ್ಲಿ ಕಳಸ್ತವಾಡಿ ಗ್ರಾಮದ ಕಡೆಯಿಂದ ಸಿದ್ದಲಿಂಗಪುರದ ಕಡೆಗೆ ವಿ.ಆರ್.ಎಲ್. ಕಛೇರಿಯ ಎದುರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾಯಿಯೊಂದಕ್ಕೆ ಡಿಕ್ಕಿ ಮಾಡಿ ಸ್ಕೂಟರ್ ಸಮೇತ ಸ್ವತಃ ಕೆಳಕ್ಕೆ ಬಿದ್ದು ತಲೆಗೆ, ಬಾಯಿಗೆ  ಮೈ ಕೈಗೆ ಪೆಟ್ಟಾಗಿ ರಕ್ತ ಸುರಿಯುತ್ತಿದ್ದವನನ್ನು ಪಿರ್ಯಾದಿ ಪುಟ್ಟಸ್ವಾಮಿ, ಹೆಚ್ ಸಿ-197 ರವರು ಸ್ಥಳಕ್ಕೆ ಬಂದ ಆಂಬ್ಯುಲೆನ್ಸ್ ವಾಹನದಲ್ಲಿ ಚಿಕಿತ್ಸೆಗೆ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿ ಮುಂದಿನ ಕ್ರಮಕ್ಕಾಗಿ ನೀಡಿದ ದೂರು.

10

ವಂಚನೆ ಪ್ರಕರಣ 

01

ಕೆ ಆರ್ ಠಾಣೆ.

ದಿನಾಂಕ:11/07/2017 ರಂದು 19-00 ಗಂಟೆಯಲ್ಲಿ ಫಿರ್ಯಾದಿ ವೆಂಕಟಮ್ಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ನಮ್ಮ ತಂದೆ ತಾಯಿಗೆ 3 ಜನ ಮಕ್ಕಳು, ಮೊದಲನೆಯವಳು ನಾನು, 2ನೇಯವರು ತಮ್ಮ  ಜಿ.ನಾರಾಯಣ ಹಾಗೂ 3 ನೇಯವಳು ತಂಗಿ ಪುಟ್ಟಮ್ಮ. ನಮ್ಮ ತಾಯಿ ಚಿಕ್ಕತಾಯಮ್ಮ ರವರ ಹೆಸರಿಗೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ದಿ:19/12/1984 ರಂದು ಮೈಸೂರಿನ ನಜರ್ ಬಾದ್ ಮೊಹಲ್ಲಾ, ಕ್ಯಾತಮಾರನಹಳ್ಳಿ ಬಡಾವಣೆ, ನಿವೇಶನ ನಂ-15 ರಲ್ಲಿ ಪೂರ್ವ-ಪಶ್ಚಿಮ 40 ಅಡಿ, ಉತ್ತರ-ದಕ್ಷಿಣ 30 ಅಡಿ ಖಾಲಿ ನಿವೇಶನ ಮಂಜೂರಾಗಿದ್ದು, ಸದರಿ ರವರ ಹೆಸರಿನಲ್ಲಿ ಖಾತೆ ಕಂದಾಯವಿದ್ದು, ಅದರ ಎಲ್ಲಾ ಮೂಲ ದಾಖಲಾತಿಗಳು ಪಿರ್ಯಾದಿ  ಬಳಿ ಇದ್ದು, ನಮ್ಮ ತಂದೆ ಮತ್ತು ತಾಯಿಯವರ ನಿಧನದ ನಂತರ ಮೇಲೆ ತಿಳಿಸಿದ ನಾವು 3 ಜನ ಮಕ್ಕಳು ಸದರಿ ನಿವೇಶನದ ಸಮಾನ ಹಕ್ಕುದಾರರಾಗಿ ಸ್ವಾದೀನಾನುಭವದಲ್ಲಿರುತ್ತೇವೆ, ಹೀಗಿರುವಾಗ ಜೂನ್ 2017 ರಲ್ಲಿ ಸದರಿ ನಿವೇಶನವನ್ನು ವಿಭಾಗ ಮಾಡಿಕೊಳ್ಳುವ ಉದ್ದೇಶದಿಂದ ನನ್ನ ತಮ್ಮ ಮತ್ತು ತಂಗಿಯನ್ನು ಕೇಳಿದಾಗ ಸದರಿಯವರು ಉಡಾಫೆಯ ಉತ್ತರವನ್ನು ನೀಡಿರುತ್ತಾರೆ, ಈ ಸಂದರ್ಭದಲ್ಲಿ ನಾನು ಸದರಿ ನಿವೇಶನದ ವಸ್ತು ಸ್ಥಿತಿಯನ್ನು ತಿಳಿಯಲು ಮೈಸೂರು ಉತ್ತರ ಉಪ ನೋಂದಣಾಧಿಕಾರಿಗಳ ಕಛೇರಿಯಿಂದ ಧೃಡಿಕೃತ ನಕಲುಗಳನ್ನು ಪಡೆದಿದ್ದು, ಅದರಂತೆ ನನಗೆ ತಿಳಿದ ಬಂದ ವಿಚಾರವೇನೆಂದರೆ, ಸದರಿ ನಿವೇಶನವನ್ನು ನನ್ನ ತಮ್ಮ ಜಿ.ನಾರಾಯಣ ಹಾಗೂ ನನ್ನ ತಂಗಿ ಪುಟ್ಟಮ್ಮ ರವರುಗಳು ನನ್ನ ಬದಲು ಬೇರೆ ಯಾರನ್ನು ಕರೆದುಕೊಂಡು ದಿ:04/02/2010 ರಂದು ಮೈಸೂರಿನ ಉತ್ತರ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ರಿಲೀಸ್ ಡೀಡ್ ಯಾ ಹಕ್ಕು ಖುಲಾಸೆ ಪತ್ರವನ್ನು ಮಾಡಿಸಿ ಕೊಂಡಿರುತ್ತಾರೆ ಮತ್ತು ಸದರಿ ನಿವೇಶನಕ್ಕೆ ಸಂಬಂದಪಟ್ಟ ಮೂಲ ದಾಖಲಾತಿಗಳು ಕಳೆದು ಹೋಗಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿ ಮೂಡಾ ಕಛೇರಿಯಿಂದ ನಕಲಿ ದಾಖಲಾತಿಗಳನ್ನು ಪಡೆದುಕೊಂಡು ಅವುಗಳ ಆಧಾರದ ಮೇಲೆ ದಿ:09/11/2011 ರಂದು ಸದರಿ ನಿವೇಶನವನ್ನು ಕೆಂಪಯ್ಯ ಎಂಬುವವರಿಗೆ ಕ್ರಯ ಪತ್ರ ಮಾಡಿಸಿರುತ್ತಾರೆ ಮತ್ತು ಈ ಎಲ್ಲಾ ಕೃತ್ಯಕ್ಕೂ  ಕೆಂಪಯ್ಯರವರೇ ಆಸ್ತಿಯನ್ನು ಕಬಳಿಸುವ ದುರುದ್ದೇಶದಿಂದ ಮಾಡಿಸಿರುತ್ತಾರೆಂದು ತಿಳಿದು ಬಂದಿರುತ್ತದೆ. ಆದ್ದರಿಂದ ನನ್ನ ಬದಲಿಗೆ ಬೇರೋಬ್ಬರನ್ನು ಬಳಿಸಿಕೊಂಡು ನಮ್ಮ ಒಟ್ಟು ಕುಟುಂಬದ ಆಸ್ತಿ ನಕಲಿ ದಾಖಲಾತಿಯನ್ನು ಸೃಷ್ಠಿ ಮಾಡಿ ಹಾಗೂ ನನ್ನ ಅನುಪಸ್ಥಿತಿಯಲ್ಲಿ ನನಗೆ ಮೋಸ, ವಂಚನೆ ಹಾಗು ನಂಬಿಕೆ ದ್ರೋಹ ಮಾಡಿರುವ ಸದರಿ  ರವರುಗಳ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

11

ಮನುಷ್ಯಕಾಣೆಯಾದ ಪ್ರಕರಣ

01

ಸರಸ್ವತಿಪುರಂ ಠಾಣೆ.

ಪಿರ್ಯಾದಿ ಜೆ.ಶಿವಕುಮಾರ್ ನಂ 81, 5ನೇ ಕ್ರಾಸ್, 3 ನೇ ಮೇನ್, ಜನತಾನಗರ, ಇವರ ಮಗಳು ಕೃತಿಕಾ, 17 ವರ್ಷ ಎಂಬುವಳು,ಆದಿ ಚುಂಚನಗಿರಿ ಪಿ.ಯು ಕಾಲೇಜಿನಲ್ಲಿ ಓದುತ್ತಿದ್ದು ,ಸುನಿಲ್ ಕುಮಾರ್ @ ಸಿದ್ದ @ ಬೀಡಿ @ ತೊಪ್ಪೆ,ಇವನು ಆಗಾಗ್ಗೆ ಕಾಲೇಜು ಬಳಿ ಕೃತಿಕಾಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದು, ಅನೇಕ ಬಾರಿ ಬುದ್ದಿವಾದ ಹೇಳಿದ್ದು ಕೇಳುತ್ತಿರಲಿಲ್ಲ. ದಿನಾಂಕ :09/07/2017 ರಂದು ಕೃತಿಕಾ ತನ್ನ ನೆಂಟರ ಮನೆಯಾದ ಹಳೆ ಬೂದನೂರು ಗ್ರಾಮಕ್ಕೆ ಹೋಗಿದು, ಈ ದಿನ ಬೆಳಿಗ್ಗೆ 7 ಗಂಟೆಗೆ ಅಲ್ಲಿಂದ ಹೊರಟು ಮದ್ಯಾಹ್ನ ಕಾಮಾಕ್ಷಿ ಆಸ್ಪತ್ರೆ ಬಳಿ ಬಸ್ ಇಳಿದಿದ್ದನ್ನು ಪರಿಚಯದವರು ನೋಡಿದ್ದಾರೆ, ನಂತರ ಸದರಿ ಸುನಿಲ್ ಕುಮಾರ್ ಕೃತಿಕಾಳನ್ನು ಅಪಹರಿಸಿಕೊಂಡು ಹೋಗಿದ್ದು ಪತ್ತೆ ಮಾಡಿಕೊಡಲು ನೀಡಿದ ದೂರು.

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

                            MYSURU CITY TRAFFIC VIOLATION CASES

 

                                            DATE  :11-07-2017

SLNO

             HEADS

                       NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

-

647

446

-

1,093

2

TOTAL NUMBER OF CRR'S

60

20

407

16

115

618

3

TOTAL FINE AMOUNT COLLECTED

6,600

2,500

43,300

2,500

12,700

67,600

4

POLICE NOTICE ISSUED

-

-

-

-

-

-

5

PARKING TAGS

-

5

-

-

-

5

6

FATAL

-

-

-

-

-

-

7

NON FATAL

-

1

-

1

1

3

8

INTERCEPTOR CASES

-

-

200

-

-

200

9

SUSPENSION OF D.L.

-

-

-

-

-

-

11

Sec 283 IPC CASES

-

-

-

-

-

-

12

Sec 353 IPC CASES

-

-

-

-

-

-

13

TOWING CASES

-

-

-

-

-

-Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com