ENGLISH   |   KANNADA

Blogದಿನಾಂಕ;12.07.2017 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:13.07.2017 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 347       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

02

ವಿದ್ಯಾರಣ್ಯ ಪುರಂ ಠಾಣೆ.

ಪಿರ್ಯಾದಿ ಶ್ರೀಮತಿ ನಂದಿನಿ.ಬಿ, ರವರು  ತನ್ನ ತಂದೆಯ ಮನೆ ವಾಸವಾಗಿದ್ದು ದಿನಾಂಕ 10-07-2017 ರಂದು ರಾತ್ರಿ ಸುಮಾರು 8-00 ಗಂಟೆಯಲ್ಲಿ ಪಿರ್ಯಾದಿಯ ಗಂಡ ವಾಸವಾಗಿರುವ ಮುನೇಶ್ವರ ನಗರದ ಮನೆಯ ಹತ್ತಿರ ಹೋದಾಗ ಪಿರ್ಯಾದಿ ಗಂಡ ಜ್ಞಾನೇಶ್‌, ಅತ್ತಿಗೆ ಮಂಜುಳ ಮತ್ತು ಅತ್ತಿಗೆ ಮಗಳಾದ ಧನುಶ್ರೀ ಮೂರು ಜನರು ಒಟ್ಟಾಗಿ ಬಂದು ದೊಣ್ಣೆಯಿಂದ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

ವಿದ್ಯಾರಣ್ಯ ಪುರಂ ಠಾಣೆ.

 ಪಿರ್ಯಾದಿ ಬಸವಂತಸಿಂಗ್‌ ರವರು ದಿನಾಂಕ 11-07-2017 ರಂದು 18-00 ಗಂಟೆಯಲ್ಲಿ ಎನ್‌.ಹೆಚ್‌.ಪಾಳ್ಯ ಪೆಟ್ರೋಲ್‌ ಬಂಕ್‌ನಲ್ಲಿ ದ್ವಿಚಕ್ರವಾಹನಕ್ಕೆ ಪೆಟ್ರೋಲ್‌ ಹಾಕಿಸಿಕೊಳ್ಳಲು ನಿಂತಿದ್ದಾಗ ದ್ವಿ ಚಕ್ರವಾಹನದಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಪಿರ್ಯಾದುದಾರರ ದ್ವಿಚಕ್ರವಾಹನಕ್ಕೆ ಗುದ್ದಿದ್ದು, ಪಿರ್ಯಾದುದಾರರು ಪ್ರಶ್ನಿಸಲಾಗಿ  ಏಕಾಏಕಿ ಕೈಯಿಂದ ಮುಖಕ್ಕೆ ಮತ್ತು ಖಾಲಿ ಬಕೆಟ್‌ನಿಂದ ಎಡತೋಳಿನ ಕೆಳಭಾಗ ಹೊಡೆದು ಗಾಯಗೊಳಿಸಿದ್ದು, ನಂತರ ಪಿರ್ಯಾದುದಾರರು ವಾತ್ಸಲ್ಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು ಸದರಿ ಆರೋಪಿಗಳನ್ನು ಪತ್ತೆ ಮಾಡಿ ಕ್ರಮ ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

01

ಉದಯಗಿರಿ ಠಾಣೆ.

ದಿನಾಂಕ:12-07-2017 ರಂದು ಪಿರ್ಯಾದಿ ರಾಜು ಪಿಎಸ್‌‌ಐ (ಅಪರಾಧ) ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ರಾಜೀವನಗರ, 2ನೇ ಹಂತದ ನಾರಾಯಣ ಆಸ್ಪತ್ರೆ ಹತ್ತಿರ ಬೆಳಿಗ್ಗೆ 11-50 ಗಂಟೆಗೆ ಹೋದಾಗ ರಿಂಗ್‌‌ ರಸ್ತೆ ಮತ್ತು ಅಬ್ದುಲ್‌ ರೆಹಮಾನ್‌ ರಸ್ತೆ ಜಂಕ್ಷನ್‌ ಬಳಿ ಇಬ್ಬರು ಆಸಾಮಿಗಳು ನಿಂತಿದ್ದು, ರಸ್ತೆಯಲ್ಲಿ ತಿರುಗಾಡುವ ಸಾರ್ವಜನಿಕರಿಗೆ ತಮ್ಮಲ್ಲಿದ್ದ ಬ್ಯಾಗ್‌ಗಳಲ್ಲಿದ್ದ ಏನನ್ನೋ ತೋರಿಸಿ ಮಾತನಾಡಿಸಲು ಪ್ರಯತ್ನಿಸುತ್ತಾ ಅನುಮಾನಸ್ಪದವಾಗಿ ನಿಂತಿದ್ದು, ನಾವುಗಳು ಹತ್ತಿರ ಹೋಗುತ್ತಿದ್ದಂತೆ ಪರಾರಿಯಾಗಲು ಪ್ರಯತ್ನಿಸಿದ್ದವರನ್ನು ಮಧ್ಯಾಹ್ನ 12-00 ಗಂಟೆಗೆ ಹಿಡಿದು ವಿಚಾರಮಾಡಲಾಗಿ 1) ಮೊಹಮ್ಮದ್‌ ಶೋಹೇಬ್‌ ಹಾಗೂ 2) ಮೊಹಮ್ಮದ್‌ ಕಾಶೀಫ್‌ ಷರೀಫ್‌ @ ಕಾಶಿಫ್‌‌ ಎಂದು ತಿಳಿಸಿದ್ದು, ಓಡಿ ಹೋಗಲು ಯತ್ನಿಸಿದ ಬಗ್ಗೆ ಕೇಳಲಾಗಿ ಸಮಂಜಸವಾದ ಉತ್ತರ ನೀಡದಿದ್ದಾಗ ಅವರಿಬ್ಬರ ಬಳಿ ಇದ್ದ ಬ್ಯಾಗ್‌‌ಗಳನ್ನು ಪರಿಶೀಲಿಸಲಾಗಿ ವಿವಿಧ ಕಂಪನಿಯ 11 ಮೊಬೈಲ್‌ಗಳು ಇದ್ದು, ಇವುಗಳ ಬಗ್ಗೆ ವಿಚಾರಮಾಡಲಾಗಿ ಅನುಮಾನವಾಗಿ ಉತ್ತರ ನೀಡುತ್ತಿದ್ದು, ಕೂಲಂಕುಶವಾಗಿ ವಿಚಾರಮಾಡಲಾಗಿ ಯಾರೋ ಕೆಲವರು ಎಲ್ಲಿಂದಲೋ ಕಳುವು ಮಾಡಿಕೊಂಡು ತಂದು ಕೊಡುತ್ತಿದ್ದ ಮೊಬೈಲ್‌ ಪೋನ್‌‌‌ಗಳನ್ನು ನಾವು ಇಟ್ಟುಕೊಂಡಿರುವ ಮೊಬೈಲ್‌ ರಿಪೇರಿ ಅಂಗಡಿಗೆ ತಂದು ಕೊಡುತ್ತಾರೆ, ನಾವುಗಳು ಅವುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಐ.ಎಂ.ಇ.ಐ ಛೇಂಜಿಂಗ್‌ ಉಪಕರಣಗಳನ್ನು ಬಳಸಿ ಆ ಮೊಬೈಲ್‌‌ಗಳ ಐ.ಎಂ.ಇ.ಐ ನಂಬರ್‌ನ್ನು ಅಳಿಸಿ ಹಾಕಿ ಬೇರೆ ಐ.ಎಂ.ಇ.ಐ ನಂಬರ್ ಮುದ್ರಿಸಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದು ಈಗ ನಮ್ಮಲ್ಲಿರುವ 11 ಮೊಬೈಲ್‌ಗಳನ್ನು ಸಹ ಅದೇ ರೀತಿ ಮಾಡಿ ಯಾರಿಗಾದರೂ ಮಾರಾಟ ಮಾಡಲು ತಂದಿದ್ದೇವೆ ಎಂದು ತಿಳಿಸಿದ ಮೇರೆಗೆ ಆರೋಪಿ ಮತ್ತು ಮಾಲಿನ ಸಮೇತ ಠಾಣೆಗೆ ಕರೆತಂದು ಮುಂದಿನ ಕ್ರಮಕ್ಕೆ ನೀಡಿದ ದೂರು,

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

01

ಕೆ ಆರ್ ಸಂಚಾರ ಠಾಣೆ.

ದಿನಾಂಕ.10/07/2017 ರಂದು ಬೆಳಗ್ಗೆ  10.30 ಗಂಟೆಯಲ್ಲಿ ಪಿರ್ಯಾದಿ ನಾಗಪ್ಪ ರವರ ಮಗ  ಶರತ್‌‌ಕುಮಾರ್‌ ಎಂಬುವನು ತಮ್ಮ ಪಲ್ಸರ್‌ ಮೋಟಾರ್ ಸೈಕಲ್‌ ನಂ KA-09-HD-5202  ನ್ನು   ವಿದ್ಯಾರಣ್ಯಪುರಂ ನಲ್ಲಿರುವ ತನ್ನ ಸ್ನೇಹಿತನ  ಮನೆಗೆ ಹೋಗಲು  ದೊಡ್ಡ ಮೋರಿ ಪಾರ್ಕ್  ರಸ್ತೆಯಲ್ಲಿ ಸ್ನೇಕ್‌ಪಾರ್ಕ್‌ ಹತ್ತಿರ ಹೋಗುತ್ತಿರುವಾಗ  4ನೇ ಮೇನ್‌, 3ನೇ ಕ್ರಾಸ್‌ ರಸ್ತೆಯಲ್ಲಿ  ಪಲ್ಸರ್‌ ಮೋಟಾರ್ ಸೈಕಲ್‌ ನಂ KA-09-HL-8950 ರ ಸವಾರ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಮಗ  ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್‌ ಗೆ  ಡಿಕ್ಕಿ ಮಾಡಿದ  ಪರಿಣಾಮ ಶರತ್‌ಕುಮಾರ್‌ ಆಯತಪ್ಪಿ ಮೋಟಾರ್ ಸೈಕಲ್‌ ನಿಂದ ಕೆಳಕ್ಕೆ ಬಿದ್ದಾಗ ಎಡ ಕಾಲಿನಲ್ಲಿ ತೊಡೆ ಮತ್ತು ಕಾಲಿನಲ್ಲಿ ಮೂಳೆಗಳು ಮುರಿದಿದ್ದು, ಡಿಕ್ಕಿಮಾಡಿದ ಮೋಟಾರ್‌ ಸೈಕಲ್ ಸವಾರ ದೇವರಾಜು ಎಂಬುವನಿಗೂ ಸಹ ತಲೆಗೆ ಸ್ವಲ್ಪ ಏಟಾಗಿದ್ದು, ಆತನೇ ಶರತ್‌ಕುಮಾರರನಿಗೆ ಚಿಕಿತ್ಸೆ ಮಾಡಿಸುವುದಾಗಿ ತಿಳಿಸಿ ನಂತರ ನಿರಾಕರಿಸಿದ್ದರಿಂದ ವಿಳಂಬವಾಗಿ ದೂರು ನೀಡುತ್ತಿದ್ದು   ಸದರಿ ಸವಾರನ  ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರು.

10

ವಂಚನೆ ಪ್ರಕರಣ 

02

ಮೇಟಗಳ್ಳಿ ಠಾಣೆ.

ದಿನಾಂಕ:-12-07-2017 ರಂದು  14-30 ಗಂಟೆಗೆ ಪಿರ್ಯಾದಿ ಕೆ.ಎಂ. ಶಫೀಕ್, ಕೇರಳದ ಮೂಲದವರಾಗಿದ್ದು ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿಯ  ಕಂಪನಿಯಾದ ಮೌಂಟ್ ವೇಲಾರ್ ರಬ್ಬರ್ ವರ್ಕ್ಸ್ ಪ್ರೈ. ಲಿಮಿಟೆಡ್ ನಿಂದ ಫಾಲ್ಕಾನ್ ಟೈರ್ ಲಿಮಿಟೆಡ್ ಕಂಪನಿಗೆ ಬೇಕಾದ ಕಚ್ಚಾ ವಸ್ತುವಾದ ಕ್ರಂಪ್ ರಬ್ಬರ್ ಅನ್ನು 2009 ರಿಂದ ಸರಬರಾಜನ್ನು ಮಾಡುತ್ತಿದ್ದು,  ಕಚ್ಚಾ ವಸ್ತು ಸರಬರಾಜು ಮಾಡಿದ ನಂತರ ಫಾಲ್ಕಾನ್ ಕಂಪನಿಯಿಂದ ಸಿಫಾರ್ಮ್‌ (ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಯಿಂದ) ಅನ್ನು ನಮಗೆ ಕಳುಹಿಸಿಕೊಡಬೇಕಾಗಿತ್ತು. ಸದರಿ ಸಿಫಾರ್ಮ್‌ ಅನ್ನು ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಗೆ ಸಲ್ಲಿಸಿ ನಾವು ತೆರಿಗೆ ಪಾವತಿಸಬೇಕಾಗಿತ್ತು. ಪ್ರತಿ ಬಾರಿ ನಾವು ಕಚ್ಚಾ ವಸ್ತುವನ್ನು ಫಾಲ್ಕಾನ್ ಕಂಪನಿಗೆ ಪೂರೈಕೆ ಮಾಡಿದ ನಂತರ ಹಲವು ಬಾರಿ ಸಿಫಾರ್ಮ್‌ ಅನ್ನು ನೀಡುವಂತೆ ವಿನಂತಿಸಿಕೊಂಡರೂ ಸಹ ನಾನಾ ಕಾರಣಗಳಿಂದ ಫಾಲ್ಕಾನ್ ಕಂಪನಿಯವರು ಸಿಫಾರ್ಮ್‌ ಅನ್ನು ನೀಡದೇ, ನೀಡುವುದಾಗಿ ಸಬೂಬು ನೀಡಿ ಮುಂದೂಡಿಕೊಂಡು ಬಂದಿರುತ್ತಾರೆ.  ಹಲವು ಬಾರಿ ಈ ವಿಷಯವನ್ನು ಕಂಪನಿಯ ಅಧಿಕಾರಿಗಳ ಜೊತೆ ಚರ್ಚಿಸಿದ ನಂತರ ಕಡೆಯದಾಗಿ ಜೂನ್ 2014 ರಲ್ಲಿ, 2009 ರಿಂದ 2013 ರ ವರಗೆ ನಾವು ಸರಬರಾಜು ಮಾಡಿದ ಕಚ್ಚಾ ವಸ್ತುಗಳಿಗೆ ಸಿಫಾರ್ಮ್‌ ಅನ್ನು ನೀಡಿರುತ್ತಾರೆ.  ಸದರಿ ಸಿಫಾರ್ಮ್‌ ಅನ್ನು ತೆರಿಗೆ ಪಾವತಿಗೆ ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಗೆ ಕಳುಹಿಸಿಕೊಟ್ಟಿರುತ್ತೇವೆ. 2016 ನೇ ನವಂಬರ್ ನಲ್ಲಿ ಅಸಿಸ್ಟೆಂಟ್ ಕಮಿಷನರ್-1 ಅಸೆಸ್ ಮೆಂಟ್  ಸ್ಪೆಷಲ್ ಸರ್ಕಲ್, ಮಲ್ಲಾಪುರ ಇವರುಫಾಲ್ಕಾನ್ ಕಂಪನಿಯಿಂದ  ಕಳುಹಿಸಿದ 2009-10 (1,49,31,240/-), 2010-11 (35,12,67,184/-), 2012-13 (1,77,11,500/-), 2013-14 (70,26,600/-) “ಸಿಫಾರ್ಮ್‌ ಗಳನ್ನು ಉದ್ದೇಶಪೂರ್ವಕವಾಗಿ ತಿದ್ದಲ್ಪಟ್ಟಿರುತ್ತವೆ ಮತ್ತು ಇವುಗಳು ನಂಬಲು ಅರ್ಹವಲ್ಲ ಎಂಬ ವರದಿಯನ್ನು ನೀಡಿರುತ್ತಾರೆ. ಸದರಿ ವರದಿಯನ್ನು ಡೆಪ್ಯೂಟಿ ಕಮಿಷನರ್ , ಕಮರ್ಷಿಯಲ್ ಟ್ಯಾಕ್ಸ್ ರವರಿಗೆ ಮೇಲ್ಮನವಿ ಸಲ್ಲಿಸಿದ್ದು, ಅದರ ವಿಚಾರಣೆ ಪ್ರಗತಿಯಲ್ಲಿರುವ ಕಾರಣ ಈ ವಿಷಯವನ್ನು ಈ ದಿನ ತಡವಾಗಿ ನಿಮ್ಮ ಗಮನಕ್ಕೆ ತಂದಿರುತ್ತೇವೆ. ಈ ಮೇಲೆ ತಿಳಿಸಿದ ಸಂಗತಿಯಿಂದ ಫಾಲ್ಕಾನ್ ಕಂಪನಿಯಿಂದ ನಮಗೆ ನಂಬಿಕೆ ದ್ರೋಹ, ಕಡತಗಳ ನಕಲು ಹಾಗೂ ವಂಚನೆ ಆಗಿರುತ್ತದೆ. ಆದುದ್ದರಿಂದ ತಾವುಗಳು ದಯಮಾಡಿ 1) ಸೌಮಿತ್ರಘೋಷ್ 2) ಅಶೋಕ್ ಕುಮಾರ್ ಅಗರ್ವಾಲ್ 3) ಬೈಸಾಲಿ ಘೋಷಾಲ್ ಮತ್ತು 4) ಕೆ.ಜಿ.ಎನ್ ಪ್ರಸಾದ್ ರವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರು.

ದೇವರಾಜ ಠಾಣೆ.

ದಿನಾಂಕ;12/07/17 ರಂದು ಪಿರ್ಯಾದಿ ವಿಜಯ ರವರಿಗೆ ಅಪರಿಚಿತರಾದ ಒಬ್ಬ ಹೆಂಗಸು & ಒಬ್ಬ ಗಂಡಸು ಪಿರ್ಯಾದಿಯನ್ನು ಪುಸಲಾಯಿಸಿ ಟೌನ್ ಹಾಲ್ ನ ಒಳಗಡೆ ಕಜರೆದುಕೊಂಡು ಹೋಗಿ ನಕಲಿ ಸರವನ್ನು ಕೊಟ್ಟು ಅಸಲಿ ಎಂದು ನಂಬಿಸಿ ಎರಡು ಅಸಲಿ ಚಿನ್ನದ ಸರ ಒಟ್ಟು 37 ಗ್ರಾಂ ನ್ನು ಮೋಸದಿಂದ ಪಡೆದು ಹೋಗಿದ್ದು ಸದರಿ ಆರೋಪಿಗಳನ್ನು ಪತ್ತೆ ಮಾಡಿ ಕ್ರಮ ಜರುಗಿಸಲು ನೀಡಿದ ದೂರು,

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

01

ಮೇಟಗಳ್ಳಿ ಠಾಣೆ.

ಪಿರ್ಯಾದಿ ಗೋವಿಂದನಾಯಕ, ಹೆಚ್ ಸಿ-506 ರವರು ದಿನಾಂಕ:12.07.2017 ರಂದು ರಾಯಲ್ ಇನ್ ಜಂಕ್ಷನ್ ಬಳಿ  ಕರ್ತವ್ಯಕ್ಕೆ ನೇಮಕವಾಗಿದ್ದು, ಅದರಂತೆ ಕರ್ತವ್ಯದಲ್ಲಿದ್ದಾಗ, ಸುಮಾರು 01:45 ಗಂಟೆಯ ಸಮಯದಲ್ಲಿ ಭಾರತ್ ಕ್ಯಾನ್ಸರ್ ಆಸ್ಪತ್ರೆ ಕಡೆಯಿಂದ ವೇಗವಾಗಿ ಬಂದ ಎಲ್ ಜಿ ವಿ ವಾಹನ ಸಂಖ್ಯೆ ಕೆಎ-46-4563 ರ ಚಾಲಕನು ಸಿಗ್ನಲ್ ಜಂಪ್ ಮಾಡಿಕೊಂಡು ಅಜಾಗರುಕತೆಯಿಂದ ಬರುತ್ತಿದ್ದಾಗ ಪಿರ್ಯಾದಿಯು  ಆ ವಾಹನವನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದಾಗ, ವಾಹನವನ್ನು ನಿಲ್ಲಿಸುವಂತೆ ನಿಧಾನವಾಗಿ ಸಾಗಿ ನಂತರ ವಾಹನವನ್ನು ನಿಲ್ಲಿಸದೇ ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಹೋಗಿರುತ್ತಾನೆ. ಆಗ ಸಾರ್ವಜನಿಕರ ಸಹಾಯದಿಂದ ಆತನನ್ನು ತಡೆದು ನಿಲ್ಲಿಸಿ ವಿಚಾರ ಮಾಡಿದಾಗ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿ  ಅವಾಚ್ಯ ಶಬ್ದಗಳಿಂದ ಬೈದಿದ್ದು ಸದರಿ  ವಾಹನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರು.

 

                             MYSURU CITY TRAFFIC VIOLATION CASES

 

                                                   DATE  :12-07-2017

SLNO

                HEADS

                    NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

-

647

446

-

1,093

2

TOTAL NUMBER OF CRR'S

60

20

407

16

115

618

3

TOTAL FINE AMOUNT COLLECTED

6,600

2,500

43,300

2,500

12,700

67,600

4

POLICE NOTICE ISSUED

-

-

-

-

-

-

5

PARKING TAGS

-

5

-

-

-

5

6

FATAL

-

-

-

-

-

-

7

NON FATAL

-

1

-

1

1

3

8

INTERCEPTOR CASES

-

-

200

-

-

200

9

SUSPENSION OF D.L.

-

-

-

-

-

-

11

Sec 283 IPC CASES

-

-

-

-

-

-

12

Sec 353 IPC CASES

-

-

-

-

-

-

13

TOWING CASES

-

-

-

-

-

-Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com