ENGLISH   |   KANNADA

Blogದಿನಾಂಕ;15.07.2017 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:16.07.2017 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 475       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ದೇವರಾಜ ಠಾಣೆ.

ಪಿರ್ಯಾದಿ ನಂಜರಾಜು ರವರು ದ್ವಿತೀಯ ದರ್ಜೆ ಸಹಾಯಕರಾಗಿ ಮೈಸೂರು ಮಹಾನಗರ ಪಾಲಕೆಯಿಂದ ದೇವರಾಜ ಮಾರ್ಕೆಟ್ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಮೇಲಾಧಿಕಾರಿಗಳ ಆಧೇಶದಂತೆ ದಿನಾಂಕ 14.07.2017 ರಂದು ತಮ್ಮ ಸಹೋದ್ಯೋಗಿಗಳಾದ ಜಯರಾಮ್, ಬಲರಾಮ್, ಶೈಲೇಶ್, ಬಸವರಾಜು ರವರೊಂದಿಗೆ ದೇವರಾಜ ಮಾರ್ಕೆಟಿನ ಮಳಿಗೆ ನಂ.140 & 141 ರಲ್ಲಿ ಬಚ್ಚಿಟ್ಟಿದ್ದ ಪ್ಲಾಸ್ಟಿಕ್ ಕವರ್ ಗಳನ್ನು ವಶಕ್ಕೆ ಪಡೆದುಕೊಳ್ಳುವಾಗ ಅಲ್ಲಿಯೇ ಇತರೆ ವಾಣಿಜ್ಯ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ನವೀದ್ ಮತ್ತು ತನ್ವೀರ್ ರವರುಗಳು ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಮೇಲ್ಕಂಡ ಸಿಬ್ಬಂದಿಗಳ ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದು ಸದರಿ ಆರೋಪಿಗಳ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

01

ಉದಯಗಿರಿ ಠಾಣೆ.

ದಿನಾಂಕ: 10-07-2017 ರಂದುಪಿರ್ಯಾದಿ ದಯಾನಂದ ರವರುಸಂಜೆ18-30 ಗಂಟೆಗೆತಮ್ಮಬಾಬ್ತುಕೆಎ-55 ಕೆ-3689 ಹೀರೋಹೋಂಡಾಪ್ಯಾಷನ್ಪ್ರೋದ್ವಿಚಕ್ರವನ್ನು ಉದಯ ಕೃಷ್ಣ ಹೋಟೆಲ್ ಎದುರು ಅಂಗಡಿಯಮುಂಭಾಗನಿಲ್ಲಿಸಿರಾತ್ರಿ21-30 ಗಂಟೆಗೆಬಂದುನೋಡಿದಾಗದ್ವಿಚಕ್ರವಾಹನಇರಲಿಲ್ಲ. ಎಲ್ಲಾಕಡೆಹುಡುಕಲಾಗಿಎಲ್ಲಿಯೂಸಿಗಲಿಲ್ಲ. ಯಾರೋಕಳ್ಳರುಕಳ್ಳತನಮಾಡಿಕೊಂಡುಹೋಗಿದ್ದು ಪತ್ತೆ ಮಾಡಿಕೊಡಲು ನೀಡಿದ ದೂರು.

8

ಮಹಿಳಾದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

9

ರಸ್ತೆ ಅಪಘಾತ

04

ದೇವರಾಜ ಸಂಚಾರ ಠಾಣೆ.

ದಿನಾಂಕ 15-07-2017 ರಂದು ಸಂಜೆ ಸುಮಾರು 6-45 ಗಂಟೆ ಸಮಯದಲ್ಲಿ ಪಿರ್ಯಾದಿ ರಾಜಶೇಖರ್ ರವರು ಕೃಷ್ಣವಿಲಾಸ್ ರಸ್ತೆ ಟ್ಯಾಕ್ಸ್ ಅಫೀಸ್ ಹತ್ತಿರ ಲೋಕಯುಕ್ತ ಕಛೇರಿ ಕಡೆಗೆ ರಸ್ತೆ ಪಕ್ಕದಲ್ಲಿ  ನಡೆದುಕೊಂಡು  ಹೋಗುತ್ತಿದ್ದಾಗ ಎದರು ಕಡೆಯಿಂದ ಅಂದರೆ ಲೋಕಯುಕ್ತ ಅಫೀಸ್ ಕಡೆಯಿಂದ  ಕಾರ್ ನಂಬರ್ ಕೆ.ಎ 51 ಎಂ.ಡಿ. 6557 ರ ಚಾಲಕನಾದ ಜಸವಂತ್ ರವರು ಕಾರ್ ಅನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ  ಪಿರ್ಯಾದಿವರಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿವರು ಕೆಳಗೆ ಬಿದ್ದು ಅವರ ಎಡಭಾಗದ ತಲೆಗೆ ಮತ್ತು ಎಡಭಾಗದ ಭುಜಕ್ಕೆ ಪೆಟ್ಟಾಗಿದ್ದು ಕಾರ್ ಚಾಲಕ ಕಾರ್ ಅನ್ನು ಸ್ಥಳದಲ್ಲಿಯೇ ನಿಲ್ಲಿಸಿ, ಸಾರ್ವಜನಿಕರ ಸಹಾಯದಿಂದ ಪಿರ್ಯಾದಿಯವರನ್ನು ಚಿಕಿತ್ಸೆ ಬಗ್ಗೆ ಕೆ.ಅರ್ ಅಸ್ವತ್ರೆಗೆ ಸೇರಿಸಿ  ಚಿಕಿತ್ಸೆ ಕೊಡಿಸಿದ್ದು, ಈ ಅಪಘಾತಕ್ಕೆ ಕಾರ್ ಚಾಲಕನ ವೇಗ ಮತ್ತು ನಿರ್ಲಕ್ಷತೆಯೇ ಕಾರಣವಾಗಿದ್ದು ಅತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

ಕೆ ಆರ್ ಸಂಚಾರ ಠಾಣೆ.

ದಿನಾಂಕ:13.07.2017 ರಂದು ಸಂಜೆ ಸುಮಾರು 6-10 ಗಂಟೆ ಸಮಯದಲ್ಲಿ ಪಿರ್ಯಾದಿ ದೇವಾನಂದ ರವರು  ಟಿವಿಎಸ್‌ ವೇಗೋ ಸ್ಕೂಟರ್‌ ನಂ. ಕೆಎ-09-ಇಟಿ-8082 ರಲ್ಲಿ ಕುವೆಂಪುನಗರ, ವಿಶ್ವಮಾನವ ಜೋಡಿ ರಸ್ತೆ ಮಾರ್ಗವಾಗಿ ಪೊಲೀಸ್‌ ಸ್ಠೇಷನ್‌ ರಸ್ತೆ-ಉದಯರವಿ ರಸ್ತೆ ಜಂಕ್ಷನ್‌‌ನಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ಉದಯರವಿ ರಸ್ತೆಯಲ್ಲಿ ಕಾಂಪ್ಲೆಕ್ಸ್‌ ಕಡೆಯಿಂದ ಆಂದೋಲನ ಸರ್ಕಲ್‌ ಕಡೆಗೆ ಕೆಂಪು ಬಣ್ಣದ ರೆನಾಲ್ಟ್‌‌ ಕ್ವಿಡ್‌ ಕಾರ್‌ ನಂ. ಕೆಎ-09-ಎಂಸಿ-7811 ರ ಚಾಲಕ ಶಿವಕುಮಾರ್‌ ರವರು ತುಂಬಾ ವೇಗವಾಗಿ  ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಮಾಡಿದಾಗ ಪಿರ್ಯಾದುದಾರರು ಸ್ಕೂಟರ್‌ ಸಮೇತ ಕೆಳಗೆ ಪೆಟ್ಟಾಗಿದ್ದು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸದರಿ ಚಾಲಕನ ವಿರುದ್ದ ದಿನ ತಡವಾಗಿ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು,

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ:-15-07-2017 ರಂದು ಪಿರ್ಯಾದಿ ಗುರುಸ್ವಾಮಿ ರವರ ತಮ್ಮ ವೆಂಕಟೇಶ್ ರವರು ವಿಜಯನಗರ ಪೊಲೀಸ್ ಠಾಣೆಯ ಹಿಂಭಾಗಕ್ಕೆ ಹೋಗಲು ಲೋಕೇಶ್ ಚಾಲನೆ ಮಾಡುತ್ತಿದ್ದ KA-45, V-2297 ಮೋಟಾರ್ ಸೈಕಲ್ ನ ಹಿಂಬದಿ ಸೀಟ್ ನಲ್ಲಿ ಕುಳಿತುಕೊಂಡು ಅಪಾರ್ಟ್ ಮೆಂಟ್ ಕಡೆಯಿಂದ ಸರ್ವೀಸ್ ರಸ್ತೆಯ ಕಡೆಗೆ ರಿಂಗ್ ರಸ್ತೆಯನ್ನು ದಾಟುತ್ತಿದ್ದಾಗ ಇದೇ ಸಮಯಕ್ಕೆ ರಿಂಗ್ ರಸ್ತೆಯಲ್ಲಿ ರಾಣಿಮದ್ರಾಸ್ ಫ್ರಾಕ್ಟರಿ ಜಂಕ್ಷನ್ ಕಡೆಯಿಂದ KA-20, 8736 ಲಾರಿಯನ್ನು ಅದರ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಲೋಕೇಶ್ ಚಾಲನೆ ಮಾಡುತ್ತಿದ್ದ ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ ಲೋಕೇಶ್ ಮತ್ತು ವೆಂಕಟೇಶ್ ಬೈಕ್ ನಿಂದ ಕೆಳಕ್ಕೆ ಬಿದ್ದು ವೆಂಕಟೇಶ್ ನ ಬಲಗಾಲಿನ ಮೂಳೆ ಮುರಿದು ಲೋಕೇಶನಿಗೂ ಸಹ ಸಣ್ಣ-ಪುಟ್ಟ ಗಾಯವುಂಟಾಗಿರುತ್ತದೆ. ಈ ಅಪಘಾತಕ್ಕೆ ಕಾರಣನಾದ ಲಾರಿ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

ಸಿದ್ದಾರ್ಥನಗರ ಸಂಚಾರ ಠಾಣೆ.

ದಿನಾಂಕ;14-07-2017 ರಂದು ರಾತ್ರಿ 9-30 ಗಂಟೆ ಸಮಯದಲ್ಲಿ ಪಿರ್ಯಾದಿ ಮಂಜು ಪ್ರಸನ್ನ ರವರ ತಂದೆ  ಸ್ವಾಮಿ ರವರು ತಮ್ಮ ಮೋಟಾರ್ ಸೈಕಲ್ ನಂಬರ್ ಕೆಎ 55 ಯು 2394 ಅನ್ನು ಚಾಲನೆ ಮಾಡಿಕೊಂಡು ಲಲಿತ ಮಹಲ್ ರಸ್ತೆ ಬುಲ್ ವರ್ಡ್ ವೃತ್ತದ ಕಡೆಯಿಂದ ಪೊಲೀಸ್ ಭವನದ ಕಡೆಗೆ ಬಲಕ್ಕೆ ತಿರುಗಲು ಇಂಡಿಕೇಟರ್ ಹಾಕಿಕೊಂಡು ರಸ್ತೆ ದಾಟ್ಟುತ್ತಿದ್ದಾಗ ಲಲಿತ ಮಹಲ್ ರಸ್ತೆ ಕುರುಬಾರಹಳ್ಳಿ ವೃತ್ತದ ಕಡೆಯಿಂದ ಒಂದು ಮೋಟಾರ್ ಸೈಕಲ್ ನಂಬರ್ ಕೆಎ55ಜೆ4646 ಅದರ ಚಾಲಕ ಆತಿವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರ ತಂದೆಯವರ ಮೋಟಾರ್ ಸೈಕಲ್ ಗೆ ಡಿಕ್ಕಿಮಾಡಿದ ಪರಿಣಾಮ ರಸ್ತೆ ಮೇಲೆ ವಾಹನ ಸಮೇತ ಬಿದ್ದು ಅವರಿಗೆ ಎಡಕೈ ಹಾಗು ಎರಡು ಕಾಲುಗಳಿಗೆ ಪೆಟ್ಟಾಗಿದ್ದು ಅವರನ್ನು ಕಾವೇರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿದ್ದು ಸದರಿ ಸವಾರನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

10

ವಂಚನೆ ಪ್ರಕರಣ 

01

ಲಷ್ಕರ್ ಠಾಣೆ.

ಪಿರ್ಯಾದಿ ಯವರ ಪತಿ ನಾಗರಾಜುರವರ ತಾತ ಲಕ್ಷ್ಮಣಪ್ಪ ನವರ ಹೆಸರಿನಲ್ಲಿ ನಗರಪಾಲಿಕೆಯಲ್ಲಿ ಖಾತೆ ಚಾಲ್ತಿಯಲ್ಲಿರುವ ವೀರನಗೆರೆಯ ಸಂ.3483ರಲ್ಲಿ 15 * 25 ಅಡಿ ವಿಸ್ತೀರ್ಣದ ಕಟ್ಟಡ ಇರುತ್ತೆ. ಈ ಆಸ್ತಿಯಲ್ಲಿ ರುಕ್ಷ್ಮೀಣಿ ಕೋಂ ಚಂದ್ರು ರವರು 15 * 7 1/2 ಅಡಿ ಮನೆಯಲ್ಲಿ ಬಾಡಿಗೆದಾರರಾಗಿ ಸುಮಾರು ವರ್ಷದಿಂದ ವಾಸ ಇರುತ್ತಾರೆ. ನಾಗರಾಜುರವರ ತಾತ ಲಕ್ಷ್ಮಣಪ್ಪ ಕಾಲವಾದ ನಂತರ, ಈ ಆಸ್ತಿ ಪಿರ್ಯಾದಿಯವರ ಪತಿ ನಾಗರಾಜುರವರ ಹೆಸರಿನಲ್ಲಿ ಖಾತೆ ಇರುತ್ತದೆ. ಲಕ್ಷ್ಮಣಪ್ಪರವರ ಮಗನಾದ ಬಸವಣ್ಣ @ ಶಾಂಭಣ್ಣ ಹಾಗೂ ಮೊಮ್ಮಗನಾದ ನಾಗರಾಜು ರವರ ಹೆಸರನ್ನು ಬಾಡಿಗೆದಾರರಾದ ರುಕ್ಮೀಣಿ ಹಾಗೂ ಅವರ ಮಗನಾದ ನಾಗರಾಜು ರವರು ದುರ್ಬಳಕೆ ಮಾಡಿಕೊಂಡು ಮೇಲ್ಕಂಡ ಆಸ್ತಿಯ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ತನ್ನ ತಮ್ಮನಾದ ಶಂಕರ್ ಗೆ ದಿ.29/05/17ರಂದು ದಾನಪತ್ರವನ್ನು (15* 7 1/2 ಅಡಿ ವಿಸ್ತೀರ್ಣದ ಆಸ್ತಿ) ಮಾಡಿಕೊಟ್ಟಿದ್ದು,  ಈ ದಾನಪತ್ರಕ್ಕೆ ಸ್ಥಳೀಯ ನಿವಾಸಿ ಕುಮಾರ ಬಿನ್ ಮಂಚಣ್ಣನ ಕುಮ್ಮಕ್ಕು ಇದ್ದು, ತಾನೇ ನಿಂತು ಕೊಂಡು ದಾಖಲಾತಿಗಳನ್ನು ನಗರಪಾಲಿಕೆಯಿಂದ ಮಾಡಿಸಿಕೊಟ್ಟಿರುತ್ತಾನೆ. ಅದರಂತೆ ಇದೇ ಕುಮಾರ ಅಲ್ಲಿನ ವಾಸಿ ಮಾದಯ್ಯ (ನಿವೃತ್ತ ರೈಲ್ವೆ ನೌಕರ ) ರವರಿಗೂಲಕ್ಷ್ಮಣಪ್ಪ ರವರ ಆಸ್ತಿಯಲ್ಲಿ  8 1/2 * 8 1/2 ಅಡಿಗಳ ಅಳತೆಯ ಸ್ವತ್ತನ್ನು ಸುಳ್ಳುದಾಖಲೆ ಮೂಲಕ ನಗರಪಾಲಿಕೆಯಲ್ಲಿ ನೊಂದಾಯಿಸಿ ಕೊಂಡು  ಆಸ್ತಿಯನ್ನು ಕಬಳಿಸಿ ಮೋಸ ಮಾಡಿರುತ್ತಾರೆ. ಆದ್ದರಿಂದ ಮೇಲ್ಕಂಡ ರುಕ್ಷ್ಮೀಣಿ ಅವರ ಮಕ್ಕಳಾದ ನಾಗರಾಜು ಮತ್ತು ಶಂಕರ ಹಾಗೂ ಕುಮಾರ ಮತ್ತು ಮಾದಯ್ಯ ರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

13

 ಇತರೆ ಪ್ರಕರಣಗಳು

02

ನಜರ್ ಬಾದ್ ಠಾಣೆ.

ದಿನಾಂಕ-15-07-2017 ರಂದು ಪಿರ್ಯಾದಿ ಮಹೇಶ್, ಆಯುಕ್ತರು,  ವಲಯ ಕಛೇರಿ 7 ರವರು ನೀಡಿದ ದೂರೆಂದರೆ  ನಜರ್ ಬಾದ್ ನ ಸಬ್ ಅರ್ಬನ್ ಬಸ್ ನಿಲ್ದಾಣದ ಕಮಾನು ಗೇಟ್,ಸರ್ಕಾರಿ ಅತಿಥಿ ಗೃಹದ ಗೋಡೆ, ಹಾಗೂ ಪೀಪಲ್ಸ್ ಪಾರ್ಕ್ ಗೋಡೆಗಳ ಮೇಲೆ ಕರ್ನಾಟಕ ಜನಪರ ವೇದಿಕೆಗೆ ಸಂಬಂದಿಸಿದಂತಹ ಜಾಹೀರಾತು/ಫಲಕಗಳನ್ನು ಪ್ರದರ್ಶಿಸಿ ನಗರದ ಸೌಂದರ್ಯವನ್ನು ಹಾಳು ಮಾಡುತ್ತಿದ್ದು ಸದರಿ ವೇದಿಕೆ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

ಉದಯಗಿರಿ ಠಾಣೆ.

ಪಿರ್ಯಾದಿ ಅಫ್ತಾಬ್ ಷರೀಫ್ ರವರು ಮುಸ್ತರಿ ಬೇಗಂ ಎಂಬುವವರಿಂದ ಎರಡು ಲಕ್ಷ ಅಡ್ವಾನ್ಸ್ ಮತ್ತು ಮಾಸಿಕ 7.500/- ರೂಪಾಯಿಯಂತೆ ಮೈಸೂರುನಗರ ಉದಯಗಿರಿ ಎಂ.ಪಿ. ಮುಖ್ಯ ರಸ್ತೆ ಸೈಟ್ ನಂಬರ್ 77 ರಲ್ಲಿರುವ ಗ್ರೌಂಡ್ ಪ್ಲೋರ್ ಶಾಪ್ ನಂಬರ್ 7 ನ್ನು 2012 ನೇ ಸಾಲಿನಲ್ಲಿ ಬಾಡಿಗೆ ಪಡೆದಿದ್ದು ಸರಿಯಷ್ಟೆ. ಆನಂತರ ದಿನಗಳಲ್ಲಿ ಹಣಕಾಸಿನ ತೊಂದರೆಯಾಗಿದ್ದು, ಸುಮಾರು 16 ತಿಂಗಳುಗಳ ಕಾಲ ಬಾಡಿಗೆಯನ್ನು ಅಂಗಡಿ ಮಾಲೀಕರಿಗೆ ನೀಡಿರುವುದಿಲ್ಲ. ಒಂದು ವರ್ಷದಿಂದ ಅಂಗಡಿಯಲ್ಲಿ ವ್ಯಾಪಾರ ಮಾಡದೆ ಬೀಗ ಹಾಕಿದ್ದು, ದಿನಾಂಕ: 03/07/2017 ರಂದು 11-30 ಗಂಟೆಗೆ ಬಂದು ಅಂಗಡಿ ನೋಡಿದಾಗ ಅಂಗಡಿ ಮಾಲೀಕರಾದ ಮುಸ್ತರಿ ಬೇಗಂರವರ ಗಂಡ ಅನ್ವರ್ ಖಾನ್, ಅವರ ಮಕ್ಕಳಾದ ಸಿದ್ದಿಖ್, ಸಮೀರ್ ಖಾನ್ ಮತ್ತು ವಾಚ್ ಮೆನ್ ಮಕ್ಬೂಲ್ ಪಾಶ ಎಂಬುವರು ಅದೇ ದಿನ ಬೆಳಿಗ್ಗೆ ಸುಮಾರು 11-00 ಗಂಟೆಯಲ್ಲಿ ಪಿರ್ಯಾದಿಯವರಿಗೆ ತಿಳಿಸದೇ ನೋಟಿಸ್ ಅನ್ನು ಸಹ ನೀಡದೆ ಮೇಲ್ಕಂಡ ಬಟ್ಟೆ ಅಂಗಡಿಯ ಬೀಗವನ್ನು ಹೊಡೆದು ಹಾಕಿ ಅಂಗಡಿಯ ಒಳಗೆ ಅತಿಕ್ರಮ ಪ್ರವೇಶ ಮಾಡಿ ಅಂಗಡಿಯ ಒಳಗೆ ಇಟ್ಟಿದ್ದ ಬಟ್ಟೆಗಳು ಮತ್ತು ಬಟ್ಟೆಗಳನ್ನು ಜೋಡಿಸಲು ಇಟ್ಟಿದ್ದ ಸಾಮಾನುಗಳನ್ನೆಲ್ಲಾ ನಾಶ ಮಾಡಿ ಸುಮಾರು ಲಕ್ಷ ರೂಪಾಯಿಗಳಷ್ಟು ನಷ್ಟ ಉಂಟು ಮಾಡಿದ್ದು ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರು.

 

                            MYSURU CITY TRAFFIC VIOLATION CASES

 

                                                     DATE  :15-07-2017

SLNO

         HEADS

                    NO. OF CASES

DR

KR

NR

SN

VV

TOTAL

1

TOTAL NUMBER OF FTVRS

400

175

552

140

178

1,445

2

TOTAL NUMBER OF CRR'S

475

375

790

334

786

2,760

3

TOTAL FINE AMOUNT COLLECTED

53,400

38,500

83,300

35,300

88,300

298,800

4

POLICE NOTICE ISSUED

-

5

-

-

-

5

5

PARKING TAGS

-

-

-

-

-

-

6

FATAL

-

-

-

-

-

-

7

NON FATAL

-

1

1

1

-

3

8

INTERCEPTOR CASES

-

-

180

-

-

180

9

SUSPENSION OF D.L.

-

-

-

-

-

-

11

Sec 283 IPC CASES

-

-

-

-

-

-

12

Sec 353 IPC CASES

-

-

-

-

-

-

13

TOWING CASES

-

20

-

-

-

20Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com