ಪೋಸ್ಟ್ ರಂದು : Fri 15 Nov 2019

ಮೈಸೂರು ನಗರ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಮುಖ ಪ್ರಕರಣಗಳು ಮತ್ತು ಸಂಚಾರ ವಿಭಾಗದಲ್ಲಿ ದಾಖಲಾದ ದಂಡಗಳ ವಿವರ.

 ಹೆಚ್ಚು ಓದಿ...

ಪ್ರತಿಕ್ರಿಯಿಸಿ

ಪೋಸ್ಟ್ ರಂದು : Thu 14 Nov 2019

ಮೈಸೂರು ನಗರ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಮುಖ ಪ್ರಕರಣಗಳು ಮತ್ತು ಸಂಚಾರ ವಿಭಾಗದಲ್ಲಿ ದಾಖಲಾದ ದಂಡಗಳ ವಿವರ.

 ಹೆಚ್ಚು ಓದಿ...

ಪ್ರತಿಕ್ರಿಯಿಸಿ

ಪೋಸ್ಟ್ ರಂದು : Tue 12 Nov 2019

ಮೈಸೂರು ನಗರ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಮುಖ ಪ್ರಕರಣಗಳು ಮತ್ತು ಸಂಚಾರ ವಿಭಾಗದಲ್ಲಿ ದಾಖಲಾದ ದಂಡಗಳ ವಿವರ.

 ಹೆಚ್ಚು ಓದಿ...

ಪ್ರತಿಕ್ರಿಯಿಸಿ

ಪೋಸ್ಟ್ ರಂದು : Tue 12 Nov 2019


ಮೈಸೂರು ನಗರ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಮುಖ ಪ್ರಕರಣಗಳು ಮತ್ತು ಸಂಚಾರ ವಿಭಾಗದಲ್ಲಿ ದಾಖಲಾದ ದಂಡಗಳ ವಿವರ.

 ಹೆಚ್ಚು ಓದಿ...

ಪ್ರತಿಕ್ರಿಯಿಸಿ

ಪೋಸ್ಟ್ ರಂದು : Sun 10 Nov 2019

ಮೈಸೂರು ನಗರ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಮುಖ ಪ್ರಕರಣಗಳು ಮತ್ತು ಸಂಚಾರ ವಿಭಾಗದಲ್ಲಿ ದಾಖಲಾದ ದಂಡಗಳ ವಿವರ.

1 ಕೊಲೆ ಪ್ರಕರಣ - ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
2 ದರೋಡೆ ಪ್ರಕರಣ - ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
3 ಸುಲಿಗೆ ಪ್ರಕರಣ - ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
4 ಹಲ್ಲೆ ಪ್ರಕರಣ 02 ವಿಜಯನಗರ ಠಾಣೆ
ದಿನಾಂಕ 10/11/19 ರಂದು 16-00 ಗಂಟೆಯಲ್ಲಿ ಪಿರ್ಯಾದುದಾರರಾದ ಶ್ರೀಮತಿ.ಶ್ವೇತಾ ರವರ ಹಾಗೂ ಆರೋಪಿ ವೆಂಕಟೇಶ್ ರವರು ಮನೆಗೆ ಸಂಬಂದಿಸಿದ ವಿಚಾರದಲ್ಲಿ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದರು. ಆಗ ನಾವುಗಳು ಮನೆಯ ಒಳಗೆ ಹೋಗಲು ಪ್ರಯತ್ನಿಸಿದಾಗ ವೆಂಕಟೇಶ್ ರವರು ನಮ್ಮಗಳನ್ನು ತಡೆದರು. ನಂತರ ವೆಂಕಟೇಶ್ ಹಾಗೂ ವೆಂಕಟೇಶ್ ರವರ ಷಡ್ಕ ರವಿ, ವೆಂಕಟೇಶ್ ರವರ ಅಕ್ಕ ಉಷಾ, ಮತ್ತು ಆವಲಮ್ಮ ರವರುಗಳು ಏಕಾಏಕಿ ಕೈ ಗಳಿಂದ ನನಗೆ ಮತ್ತು ನನ್ನ ಗಂಡ ವಿನಯ್ ರವರಿಗೆ ತಲೆ, ಮುಖ, ಎದೆ, ಹೊಟ್ಟೆಯ ಭಾಗಕ್ಕೆ ಮನಬಂದಂತೆ ಹೊಡೆದರು ಕೊಲೆ ಬೆದರಿಕೆ ಹಾಕಿ ಆಗ ಸ್ಥಳದಲ್ಲಿದ್ದ ಲತೀಷ್ ಮತ್ತು ರವೀಶ್ ಎಂಬುವರು ಗಲಾಟೆಯನ್ನು ಬಿಡಿಸಿದರು. ನಂತರ ನಾನು ಮತ್ತು ನನ್ನ ಗಂಡ ಕೆ.ಆರ. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು, ವೈಧ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆದು ಈ ದಿನ ಠಾಣೆಗೆ ಬಂದು ದೂರು ನೀಡುತ್ತಿದ್ದೇವೆ. ಆದ್ದರಿಂದ ಮೇಲ್ಕಂಡ ವೆಂಕಟೇಶ್, ರವಿ, ಉಷಾ, ಆವಲಮ್ಮ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಮತ್ತು ನನ್ನ ಕಾರನ್ನು ವಾಪಾಸ್ಸು ಕೊಡಿಸ ಬೇಕೆಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.
ಕುವೆಂಪುನಗ ಠಾಣೆ
ಪಿರ್ಯಾದಿ ಗಿರೀಶ್ ರವರು ಗಾರೆ ಕೆಲಸ ಹಾಗೂ ಮಾವಿನ ಸೊಪ್ಪು ವ್ಯಾಪಾರಮಾಡಿಕೊಂಡಿದ್ದು, ಪಿರ್ಯದುದಾರರಿಗೆ ಭಕತ್ ಸುತ್ತಾನ್ ಎಂಬಾತನು ಈಗ್ಗೆ ಎರಡು ತಿಂಗಳಿನಿಂದ ಸ್ನೇಹಿತನಾಗಿದ್ದು, ದಿನಾಂಕ: 08/11/2019 ರಂದು ತುಳಸಿ ಹಬ್ಬದ ಪ್ರಯುಕ್ತ ಮಾವಿನ ಸೊಪ್ಪು ವ್ಯಾಪಾರ ಮಾಡಲು ಬೆಳಿಗ್ಗೆ 9.30 ಗಂಟೆಗೆ ಮೈಸೂರಿನ ಕುವೆಂಪುನಗರ ಕಾಂಪ್ಲೆಕ್ಸ್ ಬಳಿಗೆ ಇಬ್ಬರೂ ಬಂದಿರುತ್ತಾರೆ. ಸಂಜೆ ಸುಮಾರು 4.30 ಗಂಟೆ ವರೆಗೂ ವ್ಯಾಪಾರ ಮಾಡಿದ್ದು, ವ್ಯಾಪಾರ ಮುಗಿದ ನಂತರ ಹಣ ಹಂಚಿಕೆ ವಿಚಾರವಾಗಿ ಇಬ್ಬರಿಗೂ ಗಲಾಟೆಯಾಗಿದ್ದು, ಬಕತ್ ಸುಲ್ತಾನ್‌‌ ಎಂಬಾತನು ಪ ಅವಾಚ್ಯ ಶಬ್ದಗಳಿಂದ ಬೈದು ಜೀವನ ಬೆಧರಿಕೆ ಹಾಕಿ, ಅಲ್ಲೇ ಇದ್ದ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯವಾಗಿದ್ದು, ಅಲ್ಲಿಯೇ ಇದ್ದ ನಾಗೇಶ್ ಎಂಬುವವರು 108 ಆಂಬುಲೆನ್ಸ್‌‌‌ ನಲ್ಲಿ ಕೆ.ಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿರುತ್ತಾರೆ. ನಂತರ ಈ ದಿನ ಪಿರ್ಯದುದಾರರು ಠಾಣೆಗೆ ಹಾಜರಾಗಿ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆಧರಿಕೆ ಹಾಕಿ ಕಲ್ಲಿನಿಂದ ರಕ್ತಗಾಯ ಮಾಡಿರುವ ಬಕತ್ ಸುಲ್ತಾನನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ..
5 ಮನೆಕಳವುಪ್ರಕರಣ - ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
6 ಸಾಮಾನ್ಯಕಳವು - ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
7 ವಾಹನ ಕಳವು - ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
8 ಮಹಿಳಾದೌರ್ಜನ್ಯ
ಪ್ರಕರಣ - ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
9 ರಸ್ತೆ ಅಪಘಾತ 03 ಕೃಷ್ಣರಾಜ ಸಂಚಾರ ಠಾಣೆ
ದಿನಾಂಕ: 09-11-2019 ರಂದು ಬೆಳಿಗ್ಗೆ 08-45 ಗಂಟೆ ಸಮಯದಲ್ಲಿ ಪಿರ್ಯಾದಿ ವೇದಾವತಿ ರವರ ಮಗನಾದ ಹಿತೇಶ.ಆರ್, 12 ವರ್ಷ ಈತ ಶಾಲೆಗೆ ಹೋಗಲು ಜನತಾನಗರ, 15ನೇ ಮೇನ್‌, 1ನೇ ಕ್ರಾಸ್‌ ರಸ್ತೆಯಲ್ಲಿರುವ ಮಮತಾ ಸ್ಟೋರ್‌ ಮುಂಭಾಗ ನಡೆದುಕೊಂಡು ರಸ್ತೆ ಕ್ರಾಸ್‌ ಮಾಡುತ್ತಿದ್ದಾಗ 1ನೇ ಕ್ರಾಸ್‌ ರಸ್ತೆಯಲ್ಲಿ ಬಜಾಜ್‌ ಸಿಟಿ 100 ಮೋಟಾರ್ ಸೈಕಲ್‌ ನಂ. KA-09-HF-2938 ಸವಾರ ಮಂಜುನಾಥ ಎಂಬುವರು ಬೈಕ್‌‌ನ್ನು ವೇಗವಾಗಿ ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಪಾದಚಾರಿ ಹಿತೇಶನಿಗೆ ಡಿಕ್ಕಿ ಮಾಡಿದಾಗ ಆತನ ಎಡಗಾಲಿಗೆ ಪೆಟ್ಟಾಗಿದ್ದು, ಮಾಲತಿ ಎಂಬುವರು ಡಿಕ್ಕಿ ಮಾಡಿದ ಬೈಕ್‌ ಸವಾರನ ಸಹಾಯದಿಂದ ಚಿಕಿತ್ಸೆಗಾಗಿ ಕಾಮಾಕ್ಷಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿ, ಅಪಘಾತದ ವಿಚಾರವನ್ನು ಪಿರ್ಯಾದಿಗೆ ಪೋನ್‌ ಮಾಡಿ ತಿಳಿಸಿದಾಗ, ಪಿರ್ಯಾದಿಯು ಕಾಮಾಕ್ಷಿ ಆಸ್ಪತ್ರೆಗೆ ಹೋಗಿ ವಿಚಾರ ತಿಳಿದುಕೊಂಡು ಕಾಮಾಕ್ಷಿ ಆಸ್ಪತ್ರೆಯಲ್ಲಿ ಮಗನನ್ನು ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾಗ, ಚಿಕಿತ್ಸೆ ಮಾಡುತ್ತಿದ್ದ ಡಾಕ್ಟರ್‌ ಹಿತೇಶನ ಎಡಗಾಲಿನ ಮೂಳೆ ಮುರಿದಿದ್ದು ಆಪರೇಷನ್‌‌ ಮಾಡಬೇಕೆಂದು ತಿಳಿಸಿ ದಿನಾಂಕ: 09-11-2019 ರಂದು ಆಪರೇಷನ್‌ ಮಾಡಿರುತ್ತಾರೆ. ಮಗನ ಚಿಕಿತ್ಸೆ ಕಡೆ ಗಮನವರಿಸುತ್ತಿದ್ದರಿಂದ ಈ ದಿನ ತಡವಾಗಿ ಈ ಅಪಘಾತಕ್ಕೆ ಕಾರಣನಾದ ಬಜಾಜ್‌ ಸಿಟಿ 100 ಮೋಟಾರ್ ಸೈಕಲ್‌ ನಂ. KA-09-HF-2938 ಸವಾರ ಮಂಜುನಾಥ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಿ ನ್ಯಾಯ ದೊರಕಿಸಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತೆ.
ಕೃಷ್ಣರಾಜ ಸಂಚಾರ ಠಾಣೆ
ದಿನಾಂಕ 06/10/2019 ರಂದು ಸಂಜೆ ಸುಮಾರು 07.00 ಗಂಟೆಯಲ್ಲಿ ಪಿರ್ಯಾದುದಾರರಾದ ಡಾ., ವಂದನಾ ರವರು ಸ್ಕೂಟರ್ ನಂ KA-09-EX-7299 ರಲ್ಲಿ ದೇವರಾಜ ಅರಸು ರಸ್ತೆ ಕಡೆಯಿಂದ ಬಂದು ರಮಾವಿಲಾಸ ರಸ್ತೆ ಜಂಕ್ಷನ್‌ ನಲ್ಲಿ ಎಡಕ್ಕೆ ತಿರುಗಿ ನಾರಾಯಣಶಾಸ್ತ್ರಿ ರಸ್ತೆ ಕಡೆಗೆ ಮರಿಮಲ್ಲಪ್ಪ ಕಾಲೇಜು ಗೇಟ್‌ ಹತ್ತಿರ ಹೋಗುತ್ತಿರುವಾಗ ಹಿಂದಿನಿಂದ ಕಾರು ನಂ KA-09-MA-960 ರ ಕಾರನ್ನು ಹುಡುಗಿಯೊಬ್ಬಳು ವೇಗವಾಗಿ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಸ್ಕೂಟರ್ ನ ಹಿಂಭಾಗಕ್ಕೆ ಡಿಕ್ಕಿಮಾಡಿದ್ದು ಡಾ., ವಂದನಾ ರವರು ಸ್ಕೂಟರ್ ಸಮೇತ ಬಿದ್ದಾಗ ಬಲಕಾಲು, ಎಡಕೈಗೆ ಮತ್ತು ಎಡಗಾಲಿನ ಹೆಬ್ಬೆರಳಿಗೆ ಪೆಟ್ಟಾಗಿತ್ತು. ಕಾರಿನವರೇ ಬಂದು ಡಾ., ವಂದನಾ ರವರು ಎತ್ತಿ ಕಾರಿನವರೇ ಜೆ.ಎಸ್.ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದ್ದು. ನಂತರ ಡಾ., ವಂದನಾ ರವರು ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಎರಡು ದಿನ ಒಳರೋಗಿಯಾಗಿ ಚಿಕಿತ್ಸೆ ಪಡೆದುಕೊಂಡು ನಂತರ ಬೆಂಗಳೂರಿಗೆ ಹೋಗಿ ಖಾಸಗಿ ಆಸ್ಪತ್ರೆಯಾದ ಸ್ಪರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು ನಂತರ ರಾಮಾಯ್ಯ ಆಸ್ಪತ್ರೆಯಲ್ಲಿ ವೈದ್ಯರ ಸಲಹೆಯಂತೆ ಹೊರರೋಗಿಯಾಗಿದ್ದು ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸೂಚಿಸಿದ್ದು ಪರೀಕ್ಷೆ ಇರುವ ಕಾರಣ ನಂತರ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದಾಗಿ ಈ ದಿನ ನಾನು ಬೆಂಗಳೂರಿನಿಂದ ಮೈಸೂರಿಗೆ ಬಂದಿದ್ದು ದೂರನ್ನು ನೀಡುತ್ತಿದ್ದು ಅಪಘಾತ ಮಾಡಿದ ಕಾರರ್ ನಂ KA-09-MA-960 ರ ಚಾಲಕಿಯ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿರುವುದು ದೂರಿನ ಸಾರಾಂಶ
ವಿ.ವಿ ಪುರಂ ಸಂಚಾರ ಠಾಣೆ
ದಿನಾಂಕ 10-11-2019 ರಂದು ಬೆಳಿಗ್ಗೆ 6;15 ಗಂಟೆಯ ಸಮಯದಲ್ಲಿ ಚದುರಂಗ ಜಂಕ್ಷನ್ ಬಳಿ ಕಾರ್ ಒಂದು ಆಕ್ಸಿಡೆಂಟ್ ಆಗಿರುವುದಾಗಿ ಮಾಹಿತಿ ತಿಳಿದು ಪಿರ್ಯಾದಿ ಶಿವನಾಗ ರವರು ಚದುರಂಗ ಸರ್ಕಲ್ ಗ್ರ್ಯಾಂಡ್ಪಾಸ್ ಹೋಟೆಲ್ ಹತ್ತಿರ ಮೈಸೂರು-ಹುಣಸೂರು ಮುಖ್ಯರಸ್ತೆ ಮೈಸೂರು ನಗರ ಬಳಿ ಹೋಗಲಾಗಿ ಕೆ,ಎ-18-ಪಿ-2318ಕಾರ್ ಪಲ್ಡಿಯಾಗಿ ಬಿದ್ದಿದ್ದು ಕಾರ್ ಚಾಲಕನಾದ ಅಭಯ್ ವಿ ಶೆಟ್ಟಿ ನಿಂತಿದ್ದು ಆತನ್ನು ವಿಚಾರಿಸಲಾಗಿ ವೈಎನ್ಎಸ್ ಕಡೆಯಿಂದ ಸಿಟಿ ಕಡೆಗೆ ವೇಗ ಮತ್ತು ನಿರ್ಲಕ್ಷತೆಯಿಂದ ಚಾಲನೆಮಾಡಿಕೊಂಡು ಬಂದು ರಸ್ತೆ ಬಳಿಯಿದ್ದ ಮೈಲೇಜ್ ಕಲ್ಲಿಗೆ ಡಿಕ್ಕಿಮಾಡಿಕೊಂಡು ಪಲ್ಟಿಯಾಗಿ ಬಿದ್ದಿರುವುದಾಗಿ ತಿಳಿದುಬಂತು ಚಾಲಕನಿಗೆ ಸಣ್ಣಪುಟ್ಟ್ ಗಾಯಗಳಾಗಿದ್ದು ಬೃಂದಾವನ ಆಸ್ಪತ್ರೆಗೆ ಕಳಿಸಿಕೊಡಲಾಯ್ತು ಈ ಅಪಘಾತದ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.
10 ವಂಚನೆ ಪ್ರಕರಣ - ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
11 ಮನುಷ್ಯಕಾಣೆಯಾದ ಪ್ರಕರಣ - ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
12 ಅನೈಸರ್ಗಿಕ ಸಾವು ಪ್ರಕರಣ - ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
13 ಇತರೆ ಪ್ರಕರಣಗಳು - ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ
 ಹೆಚ್ಚು ಓದಿ...

ಪ್ರತಿಕ್ರಿಯಿಸಿ

ಪೋಸ್ಟ್ ರಂದು : Sat 09 Nov 2019

ಮೈಸೂರು ನಗರ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಮುಖ ಪ್ರಕರಣಗಳು ಮತ್ತು ಸಂಚಾರ ವಿಭಾಗದಲ್ಲಿ ದಾಖಲಾದ ದಂಡಗಳ ವಿವರ.

 ಹೆಚ್ಚು ಓದಿ...

ಪ್ರತಿಕ್ರಿಯಿಸಿ

ಮೈಸೂರು ನಗರ ಪೊಲೀಸ್, ಮಿರ್ಜಾ ರಸ್ತೆ, ನಜರ್ಬಾದ್
ಮೈಸೂರು, ಕರ್ನಾಟಕ, ಭಾರತ
ದೂರವಾಣಿ: 0821 2418100, 2418101, 2418102
ಕಂಟ್ರೋಲ್ ರೂಮ್: 100, 0821 - 2418139/ 2418339
ಇಮೇಲ್: mysorecitypolice@gmail.com

© ಕೃತಿಸ್ವಾಮ್ಯ ಮೈಸೂರು ನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅಂತರ್ಜಾಲ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®