ನಮ್ಮ ಬಗ್ಗೆ

ಪರಿಚಯ

ಭಾರತದಲ್ಲಿ, ಮೈಸೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಜಾರಿಗೊಳಿಸುವಲ್ಲಿ ಮೈಸೂರು ನಗರ ಪೊಲೀಸರು ಪ್ರಮುಖ ಪಾತ್ರವಹಿಸಿರುತ್ತಾರೆ.  ಮೈಸೂರು ನಗರ ಪೊಲೀಸ್ ಕರ್ನಾಟಕ ರಾಜ್ಯ ಪೊಲೀಸ್ ವ್ಯಾಪ್ತಿ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.  ಮೈಸೂರು ನಗರ ಪೊಲೀಸ್ ಅಡಿಯಲ್ಲಿ ಕಾಲ್ದಳ/ಕಾಲು ಪಡೆ, ಸಂಚಾರಿ ಪಡೆ, ಸಶಸ್ತ್ರ ಸಂಚಾರಿ ಘಟಕಗಳನ್ನು ಹೊಂದಿದೆ.  ಇವುಗಳ ಜೊತೆಗೆ ಇನ್ನೂಳಿದ ಘಟಕಗಳಾದ ನಗರ ಅಪರಾಧ ಶಾಖೆ, ನಗರ ಅಪರಾಧ ದಾಖಲೆ ಘಟಕ, ಅಶ್ವರೋಹಿ ಪೊಲೀಸ್ ಪಡೆ ಮತ್ತು ನಗರ ಸಶಸ್ತ್ರ ಮೀಸಲುಪಡೆಗಳನ್ನು ಮೈಸೂರು ನಗರ ಪೊಲೀಸ್ ಒಳಗೊಂಡಿದೆ.  ಮೈಸೂರು ನಗರ ಸಂಚಾರಿ ಪಡೆಯಲ್ಲಿ ವಾಹನ ಸಂಚಾರಿ ಪಡೆಯಂದು ಕರೆಯಲ್ಪಡುವ 'ಗರುಡ', ಪಿ.ಸಿ.ಆರ್. ಚೀತಾ ಮತ್ತು ಕೋಬ್ರಗಳನ್ನು ಹೊಂದಿದೆ.

ಭಾರತದ ಕೆಲವೇ ಕೆಲವು ಪೊಲೀಸ್ ಪಡೆಗಳಲ್ಲಿ ಮೈಸೂರು ನಗರ ಪೊಲೀಸ್ ಪಡೆಯು ಸಹ ಸೇರಿದೆ.  ಬೆಂಗಳೂರು ನಗರ ಪೊಲೀಸರನ್ನು ಒಳಗೊಂಡಂತೆ, ಇಲ್ಲೂ ಕೂಡ ಬ್ಲಾಕ್ ಬೇರಿ ಮತ್ತು ಅಂತರ್ಜಾಲ ಕೋಡ್ (ಆನ್ ಲೈನ್ ಕೋಡ್) ಜಾರಿ ಮೂಲಕ ದೂರುಗಳನ್ನು ಸ್ವೀಕರಿಸಿ ಆದ್ಯತೆ ಮೇರೆಗೆ ಗಮನ ನೀಡುವರು.

ಮೈಸೂರು ನಗರ ಪೊಲೀಸ್, ಮಿರ್ಜಾ ರಸ್ತೆ, ನಜರ್ಬಾದ್
ಮೈಸೂರು, ಕರ್ನಾಟಕ, ಭಾರತ
ದೂರವಾಣಿ: 0821 2418100, 2418101, 2418102
ಕಂಟ್ರೋಲ್ ರೂಮ್: 100, 0821 - 2418139/ 2418339
ಇಮೇಲ್: mysorecitypolice@gmail.com

© ಕೃತಿಸ್ವಾಮ್ಯ ಮೈಸೂರು ನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅಂತರ್ಜಾಲ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®