ನಮ್ಮ ಬಗ್ಗೆ

ದೂರದೃಷ್ಟಿ ಮತ್ತು ಧ್ಯೆಯೋದ್ದೇಶ

ಪಾರಂಪರಿಕ ನಗರವಾದ ಮೈಸೂರಿನಲ್ಲಿ ಕಾನೂನು ಎತ್ತಿ ಹಿಡಿಯಲು, ಸುವ್ಯವಸ್ಥೆ ನಿರ್ವಹಣೆ ಮತ್ತು ಶಾಂತಿ ಕಾಪಾಡುವುದು ಮೈಸೂರು ನಗರ ಪೊಲೀಸರ ಧ್ಯೇಯೋದ್ದೇಶವಾಗಿದೆ.  ನಾವು ದೇಶಕ್ಕೆ ಸೇನೆಯಾಗಿದ್ದು, ನಾವು ಮೈಸೂರು ನಗರದ ರಕ್ಷಣೆ, ಜೀವಂತಿಕೆ ಮತ್ತು ಯಶಸ್ಸು ಕಾಪಾಡುವಲ್ಲಿ ಮತ್ತು ನಮ್ಮ ಈ ಒಳ್ಳೆಯ ಗೃಹ ನಿರ್ಮಾಣದಲ್ಲಿ ಸಂಪೂರ್ಣ ಸಹಕಾರ ನಮ್ಮದಾಗಿರುತ್ತದೆ.

ನಮ್ಮ ಪೊಲೀಸ್ ಸೇನೆ/ಪಡೆಯ ಪ್ರತಿಯೊಬ್ಬರಿಗೂ ಸ್ಫೂರ್ತಿ/ಪ್ರೇರಣೆ ನೀಡುವಂತಹದ್ದಾಗಿದೆ.  ನಮ್ಮದು ಅನ್ಯೋನ್ಯವಾದ ಕುಟುಂಬ, ಪ್ರತಿಯೊಬ್ಬರು ಗುಂಪಿನ ಧ್ಯೇಯೋದ್ದೇಶಗಳ ಯಶಸ್ಸಿನತ್ತ ತಮ್ಮ ಸೇವೆಯನ್ನು ಸಲ್ಲಿಸುವರು.  ನಮ್ಮ ಕಾರ್ಯಸ್ಥಾನ ಉಲ್ಲಾಸಭರಿತವಾಗಿದ್ದು, ನಮ್ಮ ಜನ ಅತ್ಯಂತ ಮೌಲ್ಯಧಾರಿತ ಆಸ್ತಿಯಾಗಿದ್ದಾರೆ.  ನಾವು ದೇಶಕ್ಕಾಗಿ ಪ್ರಾಣ ಕೊಡುವ ಸಂಘಟನೆಯ ಶಕ್ತಿ ಆಗಬೇಕೆಂದಿದ್ದೇವೆ.  ನಾವು ಸಮುದಾಯದ ಜೊತೆ ಒಂದಾಗಿ ಏಕತೆಯಿಂದ ಮೈಸೂರುನಗರಕ್ಕೆ ಉನ್ನತ ಮಟ್ಟದ ರಕ್ಷಣೆ ಮತ್ತು ಭದ್ರತೆಯನ್ನು ನೀಡುವ ಭರವಸೆಯನ್ನು ನೀಡುವವರಾಗಿದ್ದೇವೆ.

ನಾವು ನಮ್ಮ ಕರ್ತವ್ಯವನ್ನು ಸಮುದಾಯದ ಜೊತೆಯಲ್ಲಿ ಕಾಳಜಿಯಿಂದ ನಿರ್ವಹಿಸಲು ಬಯಸುತ್ತೇವೆ.  ನಾವು ಸಮುದಾಯದ ಪಾಲಕರಾಗಿ, ಸ್ನೇಹಿತರಾಗಿ, ರಕ್ಷಕರಾಗಿರುತ್ತೇವೆ.  ನಮ್ಮ ಶಕ್ತ್ಯಾನುಸಾರ ಉನ್ನತ ಮಟ್ಟದಲ್ಲಿ ಸೇವೆಸಲ್ಲಿಸುತ್ತೇವೆ.  ಸಾರ್ವಜನಿಕರು ನಮ್ಮನ್ನು ನಂಬಿದಷ್ಟೇ ಅಪರಾಧ ಮತ್ತು ಆಜ್ಞೆ ಮೀರಿದವರು ನಮ್ಮನ್ನು ಕಂಡು ಭಯಭೀತರಾಗಬೇಕು.

ನಮ್ಮ ಜನ ಸಂಪೂರ್ಣ ಸಾಮರ್ಥ್ಯ ಅಭಿವೃದ್ಧಿ ಹೊಂದಿ ಮತ್ತು ಎಲ್ಲಾ ಹಂತಗಳಲ್ಲಿ ಒಳ್ಳೆಯ ವಿಚಾರಗಳು ಆಲೋಚನೆಗಳನ್ನು ನೀಡುವಂತಹ ಸಂಘಟನೆಯಾಗಬೇಕು.

ಮೈಸೂರು ನಗರ ಪೊಲೀಸ್, ಮಿರ್ಜಾ ರಸ್ತೆ, ನಜರ್ಬಾದ್
ಮೈಸೂರು, ಕರ್ನಾಟಕ, ಭಾರತ
ದೂರವಾಣಿ: 0821 2418100, 2418101, 2418102
ಕಂಟ್ರೋಲ್ ರೂಮ್: 100, 0821 - 2418139/ 2418339
ಇಮೇಲ್: mysorecitypolice@gmail.com

© ಕೃತಿಸ್ವಾಮ್ಯ ಮೈಸೂರು ನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅಂತರ್ಜಾಲ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®