ನಗರ ಸಂಚಾರಿ ಪೊಲೀಸ್

ಸಂಚಾರಿ ಸೂಚಕಗಳು

 

ನಿಲ್ಲಿಸಿ:

ನಿಲುಗಡೆ ರೇಖೆಗಿಂತ ಮೊದಲೇ ನಿಲ್ಲಿಸಿ ಹಾಗೂ ರೇಖಾ ಬೇದನೆಯಲ್ಲಿ ಸಂದಣಿಗೊಳಿಸಬೇಡಿ, ಇದರಿಂದ ರಸ್ತೆ ಬಳಸುವ ಇತರರ ನೋಟಕ್ಕೆ ತೊಂದರೆ ಉಂಟಾಗುವುದಲ್ಲದೇ ಜೀಬ್ರಾ ಪಟ್ಟಿದಾಟುವ ಪಾದಚಾರಿಗಳಿಗೆ ಅಸುರಕ್ಷಿತವಾಗುತ್ತದೆ.   ಕೆಂಪು ಸಂಚಾರಿ ಸೂಚಕ ದೀಪವಿರುವಾಗಲು ಎಡಗಡೆ ತಿರುಗಬಹುದು,  ಆದರೆ ತಿರುಗಕೂಡದು ಎಂದು ನಿರ್ದಿಷ್ಟ ಸೂಚಕವಿರುವಾಗ ಮಾತ್ರ ಹೋಗಕೂಡದು.  ತಿರುಗುವಾಗ ಪಾದಚಾರಿ ಹಾಗೂ ಬೇರೆ ದಿಕ್ಕಿನಿಂದ ಬರುವ ವಾಹನಗಳಿಗೆ ಬಲಗಡೆ ಜಾಗಕೊಡಿ. 

ಜಾಗರೂಕರಾಗಿರಿ:

ಹಸಿರು ಬಣ್ಣದ ಸಂಚಾರಿ ಸೂಚಕ ದೀಪದಿಂದ ಕೆಂಪು ದೀಪ ಬರುವ ಮುನ್ನ ರಸ್ತೆಯಲ್ಲಿರುವ ವಾಹನಗಳು ತೆರವುಗೊಳ್ಳುವ ಸಮಯಕ್ಕಾಗಿ ಹಳದಿ ಬಣ್ಣದ ಸೂಚಕ ದೀಪ ಬರುತ್ತದೆ.  ಅಗಲವಾದ ರಸ್ತೆದಾಟುವಾಗ ಕೆಂಪು ದೀಪ ಬಂದಲ್ಲಿ ಗಲಿಬಿಲಿಗೊಂಡು ವಾಹನದ ವೇಗವನ್ನು ಹೆಚ್ಚಿಸದೇ ಜಾಗರೂಕರಾಗಿ ವಾಹನವನ್ನು ಮುಂದೆ ಚಾಲಯಿಸಿ.

ಹೋಗಿ:

ನೀವು ರೇಖೆಯ ಮುಂಭಾಗದಲ್ಲಿ ಇದ್ದಲ್ಲಿ ಹಸಿರು ದೀಪ ಬಂದ ತಕ್ಷಣ ಹೋರಡ ಬೇಡಿ, ಬೇರೆ ದಿಕ್ಕುಗಳಿಂದ ಬರುವ ವಾಹನಗಳು ತೆರವುಗೊಂಡಿವೆ ಎಂದು ಖಚಿತಪಡಿಸಿಕೊಂಡು ಹೋರಡಿ.

ಕೆಲವೊಮ್ಮೆ ನೀವು ಎಡಕ್ಕೆ ಬಲಕ್ಕೆ ತಿರುಗಬಹುದು.  ಆದರೆ ಬೇರೆ ದಿಕ್ಕುಗಳಡೆ ಬೇರೆ ನಿರ್ದಿಷ್ಟ ಸೂಚಕವಿಲ್ಲದಿದ್ದಲ್ಲಿ ಸ್ಥಿರ ಹಸಿರು ಬಾಣ ಸೂಚಕ ಸೂಚಿಸಿದ ದಿಕ್ಕಿನಡೆ ಜಾಗರೂಕತೆಯಿಂದ ಚಲಿಸಿ,  ರೇಖಾ ಬೇದನೆಯಲ್ಲಿರುವ ಪಾದಚಾರಿಗಳು ಹಾಗು ಇತರ ವಾಹನಗಳ ಚಾಲನೆ ಜ್ಞಾಪನವಿರಲಿ.

 


ಹೊಳೆಯುವ ಕೆಂಪು ದೀಪ:

ನೀವು ಸಂಪೂರ್ಣವಾಗಿ ನಿಲ್ಲಿಸಿ ಬೇರೆ ವಾಹನಗಳಿಗೆ ಹಾಗೂ ಪಾದಚಾರಿಗಳಿಗೆ ಮಾರ್ಗ ಬಿಟ್ಟುಕೊಡಬೇಕು.  ಮಾರ್ಗ ತೆರವುಗೊಂಡ ನಂತರವೇ ಮುಂದೆ ಚಲಿಸಬೇಕು. 

ಹಳದಿ ಸೂಚಕ:

 ವಾಹನ ನಿಧಾನಗೊಳಿಸಿ ಜಾಗರೂಕತೆಯಿಂದ ಮುಂದುವರೆಯಬೇಕು. 

 

 

 

 ಸಂಚಾರಿ ಸೂಚಕಗಳು

ಮೈಸೂರು ನಗರ ಪೊಲೀಸ್, ಮಿರ್ಜಾ ರಸ್ತೆ, ನಜರ್ಬಾದ್
ಮೈಸೂರು, ಕರ್ನಾಟಕ, ಭಾರತ
ದೂರವಾಣಿ: 0821 2418100, 2418101, 2418102
ಕಂಟ್ರೋಲ್ ರೂಮ್: 100, 0821 - 2418139/ 2418339
ಇಮೇಲ್: mysorecitypolice@gmail.com

© ಕೃತಿಸ್ವಾಮ್ಯ ಮೈಸೂರು ನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅಂತರ್ಜಾಲ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®