ವಿಶೇಷ ವಿಭಾಗಗಳು

ವಿದೇಶಿ ಶಾಖೆ

41555.0184576389foreignsection.jpg

 ಮೈಸೂರು ನಗರ ಪೊಲೀಸ್ ಇಲಾಖೆ ನಿಮ್ಮ ಮೈಸೂರು ನಗರದ ಭೇಟಿಯನ್ನು ಎಷ್ಟು ಸಾಧ್ಯವೋ ಅಷ್ಟು ಆನಂದದಾಯಕಗೊಳಿಸುವುದರ ಜೊತೆಗೆ ಸುರಕ್ಷತೆಯನ್ನು ನೀಡುವುದು.

ಕೆಳಗೆ ಕೊಟ್ಟಿರುವ ಮಾರ್ಗಸೂಚಿಗಳನ್ನು ದಯವಿಟ್ಟು ಅನುಸರಿಸಿ.

  • ನೀವು ನಿಮ್ಮ ಬೆಲೆಬಾಳುವ ಮತ್ತು ಮುಖ್ಯವಾದ ಕಾಗದ ಪತ್ರಗಳನ್ನು, ಪಾಸ್ ಪೋರ್ಟನ್ನು ಹೋಟೆಲಿನಲ್ಲಿ ನಿಮಗಿರುವ ರಕ್ಚ್ಷಣಾ ಪೆಟ್ಟಿಗೆಯಲ್ಲಿ ಇರಿಸಿರಿ.
  • ಹೋಟೆಲಿನ ನಿಮ್ಮ ರೂಮಿಗೆ ಅನಿರೀಕ್ಷಿತವಾಗಿ ಬರುವ ವೈಕ್ತಿಗಳ ಬಗ್ಗೆ ನೀವು ಜಾಗರೂಕರಾಗಿರಿ. ನಂಬಿಕೆಗೆ ಅರ್ಹರಲ್ಲದ ಕೇಳಿಕೊಂಡು ಬರುವ ಕೊಠಡಿ ಸೇವೆಗೆ ಅಥವಾ ಕಾರ್ಯ ನಿರ್ವಹಣ ಜನರಿಗೆ ಬಾಗಿಲು ತೆರೆಯಬೇಡಿ. ನಿಮಗೆ ಸಂಶಯ ಬಂದರೆ ಹೋಟೆಲಿನ ಸಂದರ್ಶಕರನ್ನು ಸಂಪರ್ಕಿಷಿ.
  • ನೀವು ಸಮರ್ಥ ವ್ಯಕ್ತಿಗಳೂಡನೆ ಚರ್ಚೆ ನೆಡೆಸುವುದಾಗಲೀ, ಸಂಶೋಧನಾ ಕಂಪೆನಿ ಮತ್ತು ವ್ಯಕ್ತಿಗಳೂಡನೆ ಸಭೆ ನಡೆಸುವುದಿದ್ದಲ್ಲಿ ಸಾರ್ವಜನಿಕ ಸ್ಥಳಗಳಾದ ರೆಸ್ಟೋರೆಂಟ್ಗಳಲ್ಲಿ ಏರ್ಪಡಿಸಿ. ನಿಮ್ಮ ಸಾಮಾನುಗಳನ್ನು ಹೋಟೆಲಿನ ಸದ್ಯಸರಿಗೆ ನೀಡಿರುವುದನ್ನು ಖಚಿತ ಪಡಿಸಿಕೊಳ್ಳಿ ಹಾಗೂ ಅವರಿಂದ ರಸೀದಿಯನ್ನು ಪಡೆಯಿರಿ.
  • ಬೆಲೆಬಾಳುವ ವಸ್ತುಗಳನ್ನು ಅಥವಾ ನಿಮ್ಮ ಸಾಮಾನುಗಳನ್ನು ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿ ಯಾರೊಬ್ಬರಿಗೂ ಜವಾಬ್ದಾರಿ ವಹಿಸದೆ ಬಿಟ್ಟು ಹೋಗಬೇಡಿ.
  • ಆಗಮನ ಸಭಾಂಗಣ ಮತ್ತು ವಾಹನ ನಿಲುಗಡೆ ಪ್ರದೇಶಗಳಲ್ಲಿ ಸಮವಸ್ತ್ರ ಧರಿಸಿದ ಸಾಕಷ್ಟು ಜನ ಪೋಲೀಸ್ ಅದಿಕಾರಿಗಳನ್ನು ನಿಯೋಜಿಸಲಾಗಿದೆ. ನಿಮಗೆ ಕಂಡು ಬಂದ ಸಂಶಯಾಸ್ಪದ ಹಾಗೂ ಅಹಿತಕರ ಅಂಶಗಳ ಬಗ್ಗೆ ಹತ್ತಿರ ಪೋಲೀಸ್ ಅದಿಕಾರಿಯನ್ನು ಸಂಪರ್ಕಿಸಿ ತಿಳಿಸಬಹುದು. ಈ ಸಂಗತಿಗಳ ಬಗ್ಗೆ ಪೋಲೀಸರು ಹೆಚ್ಚಿನ ಕಾಳಜಿಜಾಗೃತಿ ಮತ್ತು ಕಾವಲು ಇಡುತ್ತಿದ್ದಾರೆ. ಹೇಗಿದ್ದರೂ ಪ್ರಯಾಣಿಕರು ಎಚ್ಚರಿಕೆಯೀಂದ ಇದ್ದರೆ ನಾವು ಈ ಅಂಶಗಳನ್ನು ಕೈ ಬೀಡಬಹುದು ಎಂದು ಆನಿಸುತ್ತದೆ.
  • ಇದರ ಜೊತೆಗೆ ಸಂಶಯಾಸ್ಪದ ಚಲನವಲನಗಳ ಕಡೆ ಗಮನವಿಡಲು ಸಮವಸ್ತ್ರ ಧರಿಸದ ಪೋಲೀಸ್ ಅದಿಕಾರಿಗಳನ್ನು ನಿಯೋಜಿಸಿರುತ್ತಾರೆ. ಆದ್ದರಿಂದ ಅನುಮಾನಾಸ್ಪದ ವ್ಯಕ್ತಿಗಳನ್ನು ಮತ್ತು ದಲ್ಲಾಳಿಗಳ ಕಾಟವನ್ನು ವಿರೋಧಿಸಬೇಕು.
  • ಮೈಸೂರಿಗೆ ಬರುವ ಮುನ್ನ ನಿಮ್ಮ ಪ್ರವಾಸ ಮತ್ತು ತಂಗುವಿಕೆಯ ಬಗ್ಗೆ ಪೂರ್ವ ನಿಯೋಜನೆ ಮಾಡಿಕೊಳ್ಳಿ. ಸ್ಥಳೀಯರ/ಸ್ಥಳೀಯ ಮಾರ್ಗದರ್ಶಕರ ತಂಗುವಿಕೆ ಮತ್ತು ಪ್ರವಾಸದ ಬಗ್ಗೆ ಸಲಹೆ ಪಡೆಯಬೇಡಿ. ದಯಾಮಾಡಿ ಪೋಲೀಸ್ ಅಧಿಕಾರಿಗಳು ನೀಡಿದ ಮಾಹಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ. ನನ್ನ ಸಹಾಯ ಪಡೆಯಿರಿ ಎಂದು ಇರುವ ಮತ್ತು ಇತರ ಸರ್ಕಾರದಿಂದ ಮನ್ನಣೆ ಪಡೆದ ಕರ್ನಾಟಕ ಪ್ರವಾಸಿ ಕೇಂದ್ರಗಳ ಸಹಾಯ ಪಡೆಯಿರಿ.

ಮೈಸೂರು ನಗರ ಪೊಲೀಸ್, ಮಿರ್ಜಾ ರಸ್ತೆ, ನಜರ್ಬಾದ್
ಮೈಸೂರು, ಕರ್ನಾಟಕ, ಭಾರತ
ದೂರವಾಣಿ: 0821 2418100, 2418101, 2418102
ಕಂಟ್ರೋಲ್ ರೂಮ್: 100, 0821 - 2418139/ 2418339
ಇಮೇಲ್: mysorecitypolice@gmail.com

© ಕೃತಿಸ್ವಾಮ್ಯ ಮೈಸೂರು ನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅಂತರ್ಜಾಲ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®