ವಿಶೇಷ ವಿಭಾಗಗಳು

ಮೈಸೂರು ಪೋಲೀಸ್ ಬ್ಯಾಂಡ್

41555.0222144444band.jpg

4 ನೇ ಕೃಷ್ಣರಾಜ ಓಡೆಯರ್ ಬಹದ್ದೂರ್ ರವರ ಪ್ರೋತ್ಸಾಹದಿಂದ ಅರಮನೆ ಬ್ಯಾಂಡ್ ಆರಂಭಗೂಂಡಿತು. 1951 ರಲ್ಲಿ ಈ ಅರಮನೆ ಬ್ಯಾಂಡ್ ಪೋಲೀಸ್ ಇಲಾಖೆಯೊಂದಿಗೆ ಸೇರಿಸಲ್ಪಟ್ಟಿತು. 56 ಮಂದಿ ಅರಮನೆ ಬ್ಯಾಂಡ್ನಲ್ಲಿ 34 ಮಂದಿ ಪೋಲೀಸ್ ಇಲಾಖೆಯಲ್ಲಿ ಮಂಜೂರು ನೀಡಲಾಗಿತ್ತು. ಮೊದಲು ಈ ಬ್ಯಾಂಡ್ಗಳನ್ನು ಮೈಸೂರು ಪೋಲೀಸ್ ಬ್ಯಾಂಡ್ ಎಂದು ಕರೆಯಲ್ಪಟ್ಟಿದ್ದು, ನಂತರದ ದಿನಗಳಲ್ಲಿ ಇದನ್ನು ಮೈಸೂರು ಸರ್ಕಾರದ ಆರ್ಕೆಸ್ಟ್ರಾ ಎಂದು ಪುನಃ ನಾಮಕರಣ ಮಾಡಲಾಯಿತು.

ಬ್ಯಾಂಡ್ ಸಮಾರಂಭಗಳು:

  • ಸರ್ಕಾರದ ಸಮಾರಂಭಗಳು.
  • ಅರಮನೆ ಸಮಾರಂಭಗಳು (ದಸರ ಹಾಗೂ ಇತರೆ ಸಮಾರಂಭಗಳು).
  • ಪೋಲೀಸ್ ಕ್ರೀಡೆ.
  • ಮುಖ್ಯ ಹಾಗೂ ಅತಿ ಮುಖ್ಯ ಅತಿಥಿಗಳ ಸಮಾರಂಭಗಳು.
  • I.G.P  ಅದೇಶದ ಮೇರಗೆ ವಹಿಸಲ್ಪಟ್ಟ ಇತರೆ ಸಮಾರಂಭಗಳು.
  • ನಿರ್ದೇಶಕರು, ಪ್ರವಾಸೋದ್ಯಮ, ಮೈಸೂರು ಇವರು ನೀಡುತ್ತಿದ್ದ ಹಣಸಂದಾಯದ ಮೇಲೆ ಎಲ್ಲಾ ತಿಂಗಳ 2ನೇ ಭಾನುವಾರ ಕೃಷ್ಣರಾಜ ಸಾಗರದಲ್ಲಿ ಕರ್ನಾಟಕ ಬ್ಯಾಂಡ್ ನೆಡೆಯುತ್ತಿತ್ತು.
  • ಪ್ರತಿ ಶನಿವಾರ, ಭಾನುವಾರ ಬಹಳ ಉದ್ಯಾನವನಗಳಲ್ಲಿ ಇಂಗ್ಷೀಷ್ ಹಾಗೂ ಕರ್ನಾಟಕ ಬ್ಯಾಂಡ್ ಏರ್ಪಡಿಸಲ್ಪಟ್ಟಿದೆ.
  • ಸರ್ಕಾರದ ಅದೇಶ G.O. no HD 6-MGO-57, dt 16/17-4-1957 ಲಗತ್ತಿಸಲಾದ ಷರತ್ತುಗಳ ಮೇರೆಗೆ ಈ ಎರಡು ಬ್ಯಾಂಡ್ಗಳನ್ನು ಹಣ ಸಂದಾಯ ಮೇರಗೆ  ಕೊಡಲಾಗುತ್ತಿದೆ.

 

ಮೈಸೂರು ನಗರ ಪೊಲೀಸ್, ಮಿರ್ಜಾ ರಸ್ತೆ, ನಜರ್ಬಾದ್
ಮೈಸೂರು, ಕರ್ನಾಟಕ, ಭಾರತ
ದೂರವಾಣಿ: 0821 2418100, 2418101, 2418102
ಕಂಟ್ರೋಲ್ ರೂಮ್: 100, 0821 - 2418139/ 2418339
ಇಮೇಲ್: mysorecitypolice@gmail.com

© ಕೃತಿಸ್ವಾಮ್ಯ ಮೈಸೂರು ನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅಂತರ್ಜಾಲ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®