ಕಾನೂನು ಮತ್ತು ಸುವ್ಯವಸ್ಥೆ

  • ಪೊಲೀಸ್ ಅಧಿಕಾರಿಗಳು ಕರ್ತವ್ಯದ ಮೇಲಿರುವಾಗ ಸುಲಭವಾಗಿ ಸಾರ್ವಜನಿಕರ ಸಹಾಯಕ್ಕೆ ಲಭ್ಯವಾಗುವಂತಿರಬೇಕು.
  • ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯು ತಾನು ಕೆಲಸ ಮಾಡುತ್ತಿರುವ ಪ್ರದೇಶದಲ್ಲಿ ಶಾಂತಿಯತೆ ಕಾಪಾಡಿ, ಅಲ್ಲಿಯ ಜನರ ಹಾಗೂ ಆಸ್ತಿ ಪಾಸ್ತಿಯನ್ನು ಕಾಪಾಡಲು ಸುರಕ್ಷತೆ ಒದಗಿಸುವುದು ಆದ್ಯ ಕರ್ತವ್ಯವಾಗಿರುತ್ತದೆ.
  • ಪೊಲೀಸ್ ಠಾಣೆಯಲ್ಲಿ ಇರುವಂತಹ ಪೊಲೀಸ್ ಪೇದೆಯನ್ನು/ಮುಖ್ಯ ಪೇದೆಯನ್ನು ಅಲ್ಲಿನ ಪ್ರದೇಶದ ಗಸ್ತು ಕಾರ್ಯ ಸೇವೆ ನಿರ್ವಹಿಸುವುದಕ್ಕಾಗಿ, ಪೊಲೀಸ್ ಠಾಣೆಯ ಅಧಿಕಾರ ವ್ಯಾಪ್ತಿಯು ಸಾಮಾನ್ಯವಾಗಿ ಅನುಕೂಲಕರ ರೀತಿಯಲ್ಲಿ ವಿಭಜನೆಗೊಂಡಿರುತ್ತದೆ.
  • ಯಾವುದೇ ಗಂಭೀರವಾದ ಗೊಂದಲ, ಶಾಂತಿಯತೆ ಹಾಳಾಗುವಂತಹ ಕೆಲಸಗಳನ್ನು ತಡೆಗಟ್ಟಲು ಬೇಕಾಗುವ ಎಲ್ಲಾ ಮುಂಜಾಗರುಕತೆಯನ್ನು ಸರಿಯಾದ ರೀತಿ ಹಾಗೂ ಸಮಯದಲ್ಲಿ ತೆಗೆದುಕೊಳ್ಳವುದು ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯ ಕರ್ತವ್ಯ.  ಒಂದು ವೇಳೆ ಏನಾದರೂ ಸಂಭವಿಸಿದ್ದಲ್ಲಿ, ಪರಿಸ್ಥಿತಿಯನ್ನು ಮಾಮೂಲು ಸ್ಥಿತಿಗೆ ತರಲು ಬೇಕಾಗುವ ಎಲ್ಲಾ ಕ್ರಮಗಳನ್ನು ಪೊಲೀಸ್ ಅಧಿಕಾರಿ ತೀವ್ರಗತಿಯಲ್ಲಿ ತೆಗೆದುಕೊಳ್ಳಬೇಕು.
  • ಶಾಂತಿಯತೆ ಕಾಪಾಡಲು ಆ ಪ್ರದೇಶದ ಮುಖ್ಯ ವ್ಯಕ್ತಿಗಳೊಂದಿಗೆ, ಪ್ರದೇಶದ ನಾಗರಿಕ ಮಂಡಳಿ, ಶಾಂತಿ ಸಭೆಗೆ ಮತ್ತು ಪ್ರದೇಶ ಸಭೆಗಳ ಮೂಲಕ ಪೊಲೀಸ್ ಅಧಿಕಾರಿ ನಿಕಟ ಸಂಪರ್ಕ ಹೊಂದಿರಬೇಕು.
  • ಆ ಪ್ರದೇಶದಲ್ಲಿರುವ ಸಮಾಜ ವಿರೋಧಿ, ಗೂಂಡಾ, ರೌಡಿ ಇರವರುಗಳ ವಿರುದ್ದ ಧೃಡ ನಿರ್ಧಾರ ತೆಗೆದುಕೊಳ್ಳುವುದು ಎಲ್ಲಾ ಪೊಲೀಸ್ ಅಧಿಕಾರಿಗಳ ಕರ್ತವ್ಯ.
  • ಹಬ್ಬ, ಜಾತ್ರೆ, ಸಾರ್ವಜನಿಕ ಸಮಾರಂಭ, ಮೆರವಣಿಗೆ, ಮುಷ್ಕರ, ಪ್ರತಿಭಟನೆ ಮುಂತಾದ ಸಂದರ್ಭಗಳಲ್ಲಿ ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಅಧಿಕಾರಿಗಳ ಕರ್ತವ್ಯ.
  • ಜನಾಂಗ, ಜಾತಿ, ಮತ, ಭಾಷೆ, ಪ್ರದೇಶ, ಲಿಂಗ ಅಥವಾ ರಾಜಕೀಯ ಪಕ್ಷಗಳು ಮುಂತಾದವುಗಳ ಬಗ್ಗೆ, ಪೊಲೀಸ್ ಅಧಿಕಾರಿ ಯಾವುದೇ ತಾರತಮ್ಯ ತೋರಿಸಬಾರದು.
  • ಸಮಯದಿಂದ ಸಮಯಕ್ಕೆ ಸರ್ಕಾರಿ ನಿಗದಿ ಪಡಿಸಿದ ಶುಲ್ಕದ ಪಾವತಿಯ ಮೇರೆಗೆ ಪೊಲೀಸ್ ಅಧಿಕಾರಿಯ ಸೇವೆಯನ್ನು ಮನೋರಂಜನಾ ಕಾರ್ಯಕ್ರಮಗಳ ನಡೆಯುವ ಸ್ಥಳಗಳಲ್ಲಿ ಸ್ವಲ್ಪ ಸಮಯಕ್ಕಾಗಿ ಪಡೆಯಬಹುದು.
  • ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ವಿಷಯದಲ್ಲಿ ಮತ್ತು ಸಮಾಜದ ಒಳಿತಿಗಾಗಿ ಸಾರ್ವಜನಿಕರು ತಮ್ಮ ಸಹಾಯ, ಸಹಕಾರ ಹಾಗೂ ಮಾಹಿತಿಗಳನ್ನು ನೀಡಬಹುದು.

ಮೈಸೂರು ನಗರ ಪೊಲೀಸ್, ಮಿರ್ಜಾ ರಸ್ತೆ, ನಜರ್ಬಾದ್
ಮೈಸೂರು, ಕರ್ನಾಟಕ, ಭಾರತ
ದೂರವಾಣಿ: 0821 2418100, 2418101, 2418102
ಕಂಟ್ರೋಲ್ ರೂಮ್: 100, 0821 - 2418139/ 2418339
ಇಮೇಲ್: mysorecitypolice@gmail.com

© ಕೃತಿಸ್ವಾಮ್ಯ ಮೈಸೂರು ನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅಂತರ್ಜಾಲ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®