ಪಾಸ್ ಪೋರ್ಟ್

ಭಾರತೀಯ ನಾಗರೀಕರಿಗೆ ಭಾರತೀಯ ಪಾಸ್ ಪೋರ್ಟ್ ನೀಡುವ ಜವಾಬ್ದಾರಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ರಾಯಭಾರ (ಕನ್ಸುಲರ್) ಪಾಸ್ ಪೋರ್ಟ್ ಕಛೇರಿ ಮತ್ತು ಪ್ರಯಾಣಾನುಮತಿ (ವೀಸಾ) ವಿಭಾಗ ಹೊಂದಿದೆ.  ಈ ದಾಖಲೆಯನ್ನು ದೇಶಾದ್ಯಾಂತ 28 ಸ್ಥಳಗಳಲ್ಲಿ ಮತ್ತು 160 ವಿದೇಶಿ ಭಾರತೀಯ ನಿಯೋಗ ಮಂಡಳಿ/ವರ್ಗಗಳಲ್ಲಿ ನೀಡಲಾಗುತ್ತಿದೆ.  
        ನಿಮ್ಮ ಪ್ರಸ್ತುತ ವಿಳಾಸದ ವ್ಯಾಪ್ತಿಯೊಳಗೆ ಬರುವ ಪಾಸ್ ಪೋರ್ಟ್ ಕಚೇರಿಗೆ ಪಾಸ್ ಪೋರ್ಟ್ ಅರ್ಜಿ ಸಲ್ಲಿಸಲು ನೀವು ಪಾಸ್ ಪೋರ್ಟ್ ಕಛೇರಿಯಿಂದ ಅರ್ಜಿಯನ್ನು ಪಡೆಯಬಹುದು.  ಅಥವಾ ನಿಯಮಿತ ಸ್ಪೀಡ್ ಪೋಸ್ಟ್ ಕೇಂದ್ರ ಅಥವಾ ಇದಕ್ಕಾಗಿ ನಿಯಮಿತಗೊಂಡ ಹೊರಗಿನವರಲ್ಲಿ ಅರ್ಜಿಯನ್ನು ಪಡೆಯಬಹುದು.  ಭರ್ತಿ ಮಾಡಿದ ಅರ್ಜಿ ಜೊತೆಗೆ ನೀವು ಮನೆ ವಿಳಾಸದ ಸಾಕ್ಷಾಧಾರ, ಜನನ ದಿನಾಂಕದ ದಾಖಲೆ ಇ.ಸಿ.ಎನ್.ಆರ್.ಗೆ ಹೆಸರು ಬದಲಾವಣೆಗೊಂಡ ದಾಖಲೆ, ಕಾಲಾವಧಿ ಮೀರಿದ ಪಾಸ್ ಪೋರ್ಟ್ (ಯಾವುದಾದರು ಇದ್ದಲ್ಲಿ) ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು ಇತ್ಯಾದಿ. ಪಾಸ್ ಪೋರ್ಟ್ ಕಛೇರಿಯಲ್ಲಿ ಅರ್ಜಿ ಸಲ್ಲಿಸುವಾಗ ಸ್ವಯಂ ದೃಢೀಕೃತ ಪ್ರಮಾಣ ಪತ್ರಗಳನ್ನು, ದಾಖಲೆಗಳನ್ನು ಮೂಲ ದಾಖಲಾತಿಗಳ ಜೊತೆ ಪರಿಶೀಲಿಸುವರು.  ಅಂಚೆ ಮೂಲಕ ಕಳುಹಿಸುವ ಅರ್ಜಿಯ ಜೊತೆಗಿನ ಪ್ರಮಾಣಪತ್ರ ಮತ್ತು ದಾಖಲೆಗಳ ಮೇಲೆ ಗೆಜೆಟೆಡ್ ಅಧಿಕಾರಿಯ ಸಹಿ ಮಾಡಿಸಿರಬೇಕು.  ಸಾಮಾನ್ಯವಾಗಿ 5 ರಿಂದ 6 ವಾರ ಗಳಲ್ಲಿ ಪಾಸ್ ಪೋರ್ಟ್ ನ್ನು ನೀಡಲಾಗುವುದು.  ತುರ್ತು ಪರಿಸ್ಥಿತಿಯಲ್ಲಿ ಹೊಸ ಅಥವಾ ನಕಲು ಪಾಸ್ ಪೋರ್ಟ್ ತತ್ಕಾಲ್ ಯೋಜನ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು.  ಸಾಮಾನ್ಯವಾಗಿರುವ ಶುಲ್ಕಕ್ಕಿಂತ ತತ್ಕಾಲ್ ಯೋಜನೆ ಅಡಿಯಲ್ಲಿ ಹೆಚ್ಚಿನ ಮತ್ತು ಅಧಿಕ ಶುಲ್ಕವನ್ನು ಪಡೆದು ಪಾಸ್ ಪೋರ್ಟ್ ನೀಡಲಾಗುವುದು.  ತತ್ಕಾಲ್ ಯೋಜನೆ ಅಡಿಯಲ್ಲಿ ಪೊಲೀಸ್ ಪರಿಶೀಲನಾ ವರದಿ (ನಕಲು ಪಾಸ್ಪೋರ್ಟ್, ವಿಳಾಸ ಬದಲಾವಣೆಯಿಲ್ಲದೆ ಪಾಸ್ ಪೋರ್ಟ್ ಮರುನೀಡಿಕೆ  ಎನ್.ಒ.ಸಿ ಹೊಂದಿದ ಸರ್ಕಾರಿ ಉದ್ಯೋಗಿ ಅವನ ಮಕ್ಕಳು ಮತ್ತು ಪರಿಶೀಲನಾ ಪ್ರಮಾಣ ಪತ್ರ ಹೊಂದಿದ ಅರ್ಜಿಗಳಿಗೆ) ಇದು ಅನ್ವಯಿಸುತ್ತದೆ.
 

ಮೈಸೂರು ನಗರ ಪೊಲೀಸ್, ಮಿರ್ಜಾ ರಸ್ತೆ, ನಜರ್ಬಾದ್
ಮೈಸೂರು, ಕರ್ನಾಟಕ, ಭಾರತ
ದೂರವಾಣಿ: 0821 2418100, 2418101, 2418102
ಕಂಟ್ರೋಲ್ ರೂಮ್: 100, 0821 - 2418139/ 2418339
ಇಮೇಲ್: mysorecitypolice@gmail.com

© ಕೃತಿಸ್ವಾಮ್ಯ ಮೈಸೂರು ನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅಂತರ್ಜಾಲ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®