ಇತರೆ ಮಾಹಿತಿ

  • ಪ್ರವಾಸಿ ವೀಸಾ ಮತ್ತು ವ್ಯಾಪಾರದ ವೀಸಾ 6 ತಿಂಗಳ ಕಾಲಾವಧಿಗಿಂತ ಅಧಿಕ ಕಾಲಾವಧಿಯನ್ನು ಹೊಂದಿದ್ದರೂ ಸಹ ಭಾರತದಲ್ಲಿ 6 ತಿಂಗಳ ಕಾಲಾವಧಿಗೆ ಮಾತ್ರ ಉಳಿದುಕೊಳ್ಳಬಹುದು.
  • ಪಾಸ್ಪೋರ್ಟ್ ಊರ್ಜಿತ ಇರುವ ಕಾಲಾವಧಿವರೆಗೆ ಮಾತ್ರ ವೀಸಾ ನೀಡಲಾಗುವುದು.  ಉದಾಹರಣೆಗೆ ಪಾಸ್ಪೋರ್ಟ್ ಏಪ್ರಿಲ್ 30, 2003ರವರೆಗೆ ಊರ್ಜಿಕತೆ ಹೊಂದಿದ್ದು ಮತ್ತು ಅಭ್ಯರ್ಥಿ ಡಿಸೆಂಬರ್ 31, 1999ರಲ್ಲಿ ಐದು ವರ್ಷಗಳ ವೀಸಾಗೆ ಅರ್ಜಿಸಲ್ಲಿಸಿದರೆ ಅವರಿಗೆ ಐದು ವರ್ಷಗಳ ವೀಸಾ ನೀಡಲಾಗುವುದಿಲ್ಲ.  ಏಕೆಂದರೆ ಪಾಸ್ಪೋರ್ಟ್ನ ಊರ್ಜಿಕತೆ ಐದು ವರ್ಷಗಳ ಕಾಲಾವಧಿಗೂ ಮುನ್ನವೇ ಮುಕ್ತಾಯಗೊಳ್ಳುತ್ತದೆ.
  • ಎಲ್ಲಾ ವೀಸಾಗಳ ಊರ್ಜಿತತೆಯನ್ನು ವೀಸಾ ನೀಡಿದ ದಿನಾಂಕದಿಂದಲೇ ಪರಿಗಣಿಸಲಾಗುವುದು.
  • ವಿದೇಶಿ ಪ್ರವಾಸಿ ವ್ಯಾಪಾರದ ಜೊತೆ ಸಂಬಂಧ ಹೊಂದಿದ್ದರೆ, ಪ್ರವಾಸಿ ವೀಸಾವನ್ನು 5 ವರ್ಷಗಳ ಕಾಲಾವಧಿವರೆಗೆ ಮಂಜೂರು ಮಾಡಬಹುದು.
  • ವೀಸಾವು 180 ದಿನಗಳಿಗಿಂತ ಅಧಿಕ ಕಾಲಾವಧಿಯದಾಗಿದ್ದರೆ ಭಾರತಕ್ಕೆ ಆಗಮಿಸಿದ 14ದಿನಗಳ ಒಳಗಾಗಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.
  • ವೀಸಾ ಮುಂದುವರಿಕೆಗೆ MHA ನಿರ್ದೇಶಕರು ಈ ಲೋಕ ನಾಯಕ ಭವನ, ಮೊದಲನೆ ಮಹಡಿ,ಬಾನ್ಮರ್ಕೆತ್, ನವದೆಹಲಿ. 110003

ವಲಸೆ ವಿಧಾನಗಳು:

ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಲಸೆ ವಿಭಾಗ/ಕೇಂದ್ರ, ವಲಸೆ ವಿಧಾನ ಕಾರ್ಯಗಳನ್ನು ನೋಡಿ ಕೊಳ್ಳುತ್ತದೆ.  ಮತ್ತು ವಿದೇಶಿಯವರ ನೋಂದಣಿ ಕಾರ್ಯ ಭಾರತದ ಐದು ಪ್ರಮುಖ ಕೇಂದ್ರಗಳಲ್ಲಿ ನಡೆಯುತ್ತದೆ.  ವಲಸೆ ಮತ್ತು ನೋಂದಣಿ ಕಾರ್ಯ ಕೈಗೊಳ್ಳುವ ಕ್ಷೇತ್ರಾಧಿಕಾರಿಗಳನ್ನು ವಿದೇಶಿಯರ ಪ್ರಾದೇಶಿಕ ನೋಂದಣಾಧಿಕಾರಿಗಳು ಎಂದು ಕರೆಯುವರು.  ಇವರು ದೆಹಲಿ, ಮುಂಬೈ, ಕಲ್ಕತ್ತಾ ಮತ್ತು ಅಮೃತಸರ ಇವರಿಗೆ ಸಮಾನ ಹುದ್ದೆ ಹೊಂದಿರುವ ಚೆನೈಯಲ್ಲಿ (ಮದ್ರಾಸ್) ಇರುವವರಿಗೆ ಮುಖ್ಯ ವಲಸೆ ಅಧಿಕಾರಿ ಎಂದು ಕರೆಯುವರು.
 

ಮೈಸೂರು ನಗರ ಪೊಲೀಸ್, ಮಿರ್ಜಾ ರಸ್ತೆ, ನಜರ್ಬಾದ್
ಮೈಸೂರು, ಕರ್ನಾಟಕ, ಭಾರತ
ದೂರವಾಣಿ: 0821 2418100, 2418101, 2418102
ಕಂಟ್ರೋಲ್ ರೂಮ್: 100, 0821 - 2418139/ 2418339
ಇಮೇಲ್: mysorecitypolice@gmail.com

© ಕೃತಿಸ್ವಾಮ್ಯ ಮೈಸೂರು ನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅಂತರ್ಜಾಲ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®