ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ

 

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಸಾರ್ವಜನಿಕರು ಕಟು ಮಾತುಗಳಿಂದ ಮಾನಸಿಕವಾಗಿ ಆಗಲಿ, ದೈಹಿಕ, ಆರ್ಥಿಕ, ಸಾಮಾಜಿಕ ಅಥವಾ ವ್ಯಯಕ್ತಿಕವಾಗಿ ಜಾತಿಯನ್ನು ಅವಲಂಬಿಸಿ ಅಗೌರವ ಮಾಡುವ ಕ್ರಿಯೆ ಅಥವಾ ಅಪರಾಧಕ್ಕೆ ಶಿಕ್ಷಿಸುವ ಅವಕಾಶ ಇದೆ.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಯ ವಿರುದ್ದ ನಡೆದ ಕ್ರೌರ್ಯ ಕೆಲಸದ ಅಪರಾಧದ ಪರಿಶೋಧನೆಯನ್ನು ಸಾಮಾನ್ಯವಾಗಿ ಸಹಾಯಕ ಪೊಲೀಸ್ ಆಯುಕ್ತರ ಕ್ರಮಾಂಕದವರಿಂದ ನಡೆಸಲಾಗುತ್ತದೆ.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಯ ವಿರುದ್ದ ದೌರ್ಜನ್ಯ ಅಪರಾಧದ ಪ್ರಶ್ನಾವಳಿ ಪೂರ್ಣಗೊಂಡ ನಂತರ, ಚಾರ್ಶೀಟ್ ಪೂರ್ಣಗೊಳಿಸಿದರೆ,  ತಗುಲುವ ವೆಚ್ಚವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ದೊರೆಯುವ ಆರ್ಥಿಕ ಸಹಾಯ ಪಡೆಯಬಹುದು.

ಮಹಿಳೆಯರಿಗಾಗಿ ಸೌಲಭ್ಯ:

  • ತಡೆಯಲಾಗದಂತಹ ಸಂದರ್ಭಗಳಲ್ಲಿ ಮಾತ್ರವಲ್ಲದೆ, ಮಹಿಳಾ ಆರೋಪಿಯನ್ನು ಸೂರ್ಯಾದಯದ ಮುನ್ನ ಅಥವಾ ಸೂರ್ಯಾಸ್ತಮಾನದ ನಂತರ ಇರಿಸಿಕೊಳ್ಳಲಾಗುವುದಿಲ್ಲ.
  • ರಾತ್ರಿಯ ಸಮಯದಲ್ಲಿ ಮಹಿಳಾ ಆರೋಪಿಯನ್ನು ಮಹಿಳಾ ಪೊಲೀಸ್ರಿಂದ ಮಾತ್ರ ಇರಿಸಿಕೊಳ್ಳಬಹುದು.
  • ಮಹಿಳಾ ಆರೋಪಿಯನ್ನು ಮಹಿಳಾ ಪೊಲೀಸ್ ಮಾತ್ರ ದೈಹಿಕವಾಗಿ ಪರೀಕ್ಷಿಸಬಹುದು.
  • 15ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ ಮಹಿಳೆಯನ್ನು ಹೇಳಿಕೆ ನೀಡಲು ಪೊಲೀಸ್ ಠಾಣೆಗೆ ಕರೆಯುವಂತಿಲ್ಲ.
  • ವೈವಾಹಿಕ ಜೀವನ ಹತ್ತು ವರ್ಷಗಳಿಂದ ಕಡಿಮೆ ಇದ್ದು ಮತ್ತು ಅತ್ತೆ ಮಾವಂದಿರ ಜೊತೆಯಿದ್ದು, ಅಂತಹ ಸ್ತ್ರೀ ಅಸಹಜ ರೀತಿಯಲ್ಲಿ ಸಾವನ್ನಪ್ಪಿದರೆ, ಇಂತಹ ಪ್ರಕರಣವನ್ನು ಸಹಾಯಕ ಪೊಲೀಸ್ ಆಯುಕ್ತರ ಶ್ರೇಯಾಂಕವುಳ್ಳ ಅಧಿಕಾರಿಗಳಿಂದ ತನಿಖೆ ನಡೆಸಲಾಗುತ್ತದೆ.  ಮೃತಶರೀರದ ಮರಣಾನಂತರ ಪರೀಕ್ಷೆಯನ್ನು ಇಬ್ಬರು ವ್ಯೆದ್ಯರನ್ನೊಳಗೊಂಡ  ಗುಂಪು (PANEL) ಮಾಡಲಾಗುತ್ತದೆ.  ಪ್ರಕರಣವನ್ನು ಮಹಿಳಾ ಸುರಕ್ಷಾ ಸಮಿತಿಗೆ ತಿಳಿಸಬೇಕು.

 

 

 

 

 

ಮೈಸೂರು ನಗರ ಪೊಲೀಸ್, ಮಿರ್ಜಾ ರಸ್ತೆ, ನಜರ್ಬಾದ್
ಮೈಸೂರು, ಕರ್ನಾಟಕ, ಭಾರತ
ದೂರವಾಣಿ: 0821 2418100, 2418101, 2418102
ಕಂಟ್ರೋಲ್ ರೂಮ್: 100, 0821 - 2418139/ 2418339
ಇಮೇಲ್: mysorecitypolice@gmail.com

© ಕೃತಿಸ್ವಾಮ್ಯ ಮೈಸೂರು ನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅಂತರ್ಜಾಲ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®