ಜಾಮೀನು ಹಾಗೂ ಜಾಮೀನು ರಹಿತ ಅಪರಾಧಗಳು

 ಅಪರಾಧ ವಿಧಿವಿಧಾನಗಳ ನಿಯಮನುಸಾರಗಳ ಕೆಳಗೆ ಅಪರಾಧಗಳನ್ನು ಜಾಮೀನು ಹಾಗೂ ಜಾಮೀನೇತರ ಎಂದು ವಿಂಗಡಿಸಲಾಗಿದೆ.

 • ಜಾಮೀನು ಸಿಗುವಂತಹ ಅಪರಾಧಗಳಿಗೆ ಜಾಮೀನು ನೀಡಬಹುದೇ ಎಂಬುದು ತನಿಖಾ ಅಧಿಕಾರಿಗಳ ಬದ್ಧತೆಯ ಮೇರೆಗೆ ನೀಡಲಾಗುವುದು.
 • ಜಾಮೀನು ರಹಿತ ಅಪರಾಧಗಳಿಗೆ ಪೋಲೀಸರು ಜಾಮೀನು ನೀಡುವುದಿಲ್ಲ. ಇದರ ನಿರ್ಣಯ ನ್ಯಾಯದೀಶರು/ನ್ಯಾಯಧಿಕಾರಿ ತೆಗೆದುಕೊಳ್ಳುತ್ತಾರೆ.
 • ಜಾಮೀನು ಸಿಗುವಂತಹ ಅಪರಾಧಗಳಿದ್ದಲ್ಲಿ ಆರೋಪಿ ಬಂಧನದ ನಂತರ ಸೂಕ್ತವಾದ (ಸರಿಯಾದ) ಭದ್ರತೆ ನೀಡಿದ್ದಲ್ಲಿ ಹಾಗೂ ಬೇರೆ ಎಲ್ಲಾ ಶರತ್ತುಗಳನ್ನು ಪೂರೈಸಿದ್ದಲ್ಲ.
 • ಆರೋಪಿಯನ್ನು ಬಿಡುಗಡೆ ಮಾಡುವುದು ತನಿಖೆ ಅಧಿಕಾರಿಗಳಿಗೆ ಬಿಟ್ಟಿರತಕ್ಕದು.
 • ಜಾಮಿನು ರಹಿತ ಅಪರಾಧಗಳ ವಿಷಯದಲ್ಲಿ ಪರಿಶೀಲನಾ ಅಧಿಕಾರಿಯು ಆರೋಪಿಯನ್ನು ಬಂಧನದಿಂದ 24 ಗಂಟೆಗಳೂಳಗೆ ನ್ಯಾಯದೀಶರು/ನ್ಯಾಯಧಿಕಾರಿಯ ಮುಂದೆ ಹಾಜರುಪಡಿಸಬೇಕು. ಆ ಸಮಯದಲ್ಲಿ ಆರೋಪಿಯು ತಾನೇ ಆಗಲಿ ಅಥವಾ ತನ್ನ ಪರವಾಗಿ / ವಕೀಲರಿಂದಾಗಲಿ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಹಕ್ಕನ್ನು ಹೊಂದಿರುತ್ತಾರೆ.

ಬಂಧಿತ ವ್ಯಕ್ತಿಗಳ ಹಕ್ಕುಗಳು:

ಸವೋಚ್ಚ ನ್ಯಾಯಲಯ ನೀಡಿರುವ ಆದೇಶ ಹಾಗೂ ಮಾರ್ಗದರ್ಶನಗಳು.

 • ಬಂಧಿಸುವ ಹಾಗೂ ಬಂಧಿತನನ್ನು ಪ್ರಶ್ನಿಸುವ ಪೋಲೀಸ್ ಅಧಿಕಾರಿಯು ಸರಿಯಾದ, ಕಾಣುವಂತಹ ಹಾಗೂ ಸ್ಪಷ್ಡವಾದ ಹೆಸರು ಹಾಗೂ ಹುದ್ದೆಯ ಹೆಸರನ್ನು ನಮೂದಿಸಿರುವ ನುಡಿಗಟ್ಟನ್ನು ಹೊಂದಿರಬೇಕು.
 • ಬಂಧಿಸಲಿರುವ ಪೋಲೀಸ್ ಅಧಿಕಾರಿ ಬಂಧಿಸುವ ಸೂಚನಾ ಪತ್ರವನ್ನು ಸಜ್ಜುಗೂಳಿಸಿ ಅದಕ್ಕೆ ಕೂನೆ ಪಕ್ಷ ಒಬ್ಬ ಬಂಧಿತನ ಮನೆಯ ಸದಸ್ಯ ಅಥವಾ ಆ ಮೊಹಲ್ಲಾದ ಜವಬ್ದಾರಿಯುತ ವ್ಯಕ್ತಿಯು ಪ್ರಮಾಣ ಮಾಡಿ ಸಾಕ್ಷೀಯಾಗಿರಬೇಕು. ಅದು ಬಂಧಿತನಿಂದಲೂ ಪ್ರತಿ ಒಪ್ಪಿತವಾಗಿ ಅದರಲ್ಲಿ ಅಂದಿನ ತಾರೀಖು ಹಾಗೂ ಸಮಯ ನಮೂದಿಸಿರಬೇಕು.
 •  ಬಂಧಿತ ವ್ಯಕ್ತಿಯು ಪೋಲೀಸ್ ಠಾಣೆಯಲ್ಲಿ ಅಥವಾ ಪ್ರಶ್ನಿಸುವ ಕೇಂದ್ರದಲ್ಲಿ ಅಥವಾ ಬಂಧಿಖಾನೆಯಲ್ಲಿದ್ದು, ಅವರೂಂದಿಗೆ ಅವರ ಸ್ನೇಹಿತ ಅಥವಾ ಸಂಬಂಧಿ ಅಥವಾ ಅವರ ಸೌಖ್ಯ ಗಮನಿಸುವ ವ್ಯಕ್ತಿಯು ಜೊತೆಯಲ್ಲಿರಬಹುದು. ಸಂಬಂಧಿಯಾದಲ್ಲಿ ಸಾದ್ಯವಾಗುವ ಸಮಯದಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿರುವ ನಿರ್ಧಿಷ್ಟ ಸ್ಥಳ ತಿಳಿಸಬೇಕು. ಸೂಚನಾ ಪತ್ರದ ಸಾಕ್ಷೀ ಆರೋಪಿಯೇ ಆಗದೇ, ಬೇರೆ ಸ್ನೇಹಿತ ಅಥವಾ ಸಂಬಂಧಿ ಹೊರಗಿನ ಜಿಲ್ಲೆಯಲ್ಲಿದ್ದಲ್ಲಿ ಪೋಲೀಸರು ಆರೋಪಿಯ ಬಂಧಿತ ವೇಳೆ ,ಸ್ಥಳ ಹಾಗೂ ಬಂಧಿತನನ್ನು ಹಿಡಿದ ಸ್ಥಳ ಎಲ್ಲಾ ವಿವರಗಳನ್ನು  ನಗರ ನ್ಯಾಯ ಸಂಸ್ಥೆಯ ಅಥವಾ ಅದೇ ಮೊಹಲ್ಲಾದ ಪೋಲೀಸ್ ಠಾಣೆಯಿಂದ ದೂರವಾಣಿ ತಂತಿಯ ಮೂಲಕ ಬಂಧಿತವಾದ ಸಮಯದಿಂದ 8-12 ಗಂಟೆಯೊಳಗೆ ತಿಳಿಸಬೇಕು.
 • ಬಂಧಿತ ವ್ಯಕ್ತಿಯ ಹತ್ತಿರದವರಿಗೆ ತಾನು ಬಂಧಿತನಾಗಿದ್ದಾನೆಂದು ತಿಳಿಯ ಪಡಿಸಬಹುದೆಂಬ ಹಕ್ಕು ಬಂಧಿತನಿಗಿದೆಯೆಂದು ತಿಳಿಯಪಡಿಸಬೇಕು.
 • ಬಂಧನಕ್ಕೊಳಗಾದ ತಕ್ಷಣ ಬಂಧಿಸಲ್ಪಟ್ಟ ಸ್ಥಳದಲ್ಲಿ ವ್ಯಕ್ತಿಯು ಬಂಧಿತನಾಗಿದ್ದಾನೆಂದು ದಿನಚರಿಯಲ್ಲಿ ದಾಖಲಿಸಿ ಅದರೂಂದಿಗೆ ಬಂಧಿತ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿಸಿರುವ ಬಂಧಿತನ ಸಂಬಂಧಿ/ಸ್ನೇಹಿತನ ಹೆಸರು ನಮೂದಿಸಬೇಕು.
 • ಬಂಧಿತ ಕೋರಿದ್ದಲ್ಲಿ, ಬಂಧಿತ ಸಮಯದಲ್ಲಿ ತನ್ನ ಶರೀರದ ಮೇಲೆ ದೊಡ್ಡ/ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಹೇಳಿರುವ ಬಗ್ಗೆ ದಾಖಲಿಸಬೇಕು.

 

 

 

ಮೈಸೂರು ನಗರ ಪೊಲೀಸ್, ಮಿರ್ಜಾ ರಸ್ತೆ, ನಜರ್ಬಾದ್
ಮೈಸೂರು, ಕರ್ನಾಟಕ, ಭಾರತ
ದೂರವಾಣಿ: 0821 2418100, 2418101, 2418102
ಕಂಟ್ರೋಲ್ ರೂಮ್: 100, 0821 - 2418139/ 2418339
ಇಮೇಲ್: mysorecitypolice@gmail.com

© ಕೃತಿಸ್ವಾಮ್ಯ ಮೈಸೂರು ನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅಂತರ್ಜಾಲ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®