ಪೊಲೀಸರ ಕರ್ತವ್ಯ

ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಹೊಣೆಗಳತ್ತ ಹೆಜ್ಜೆಗಾಗಿ ಪೊಲೀಸರ ಕರ್ತವ್ಯಗಳನ್ನುದ್ದೇಶಿಸಿ ಸಾರ್ವಜನಿಕರ ಹಕ್ಕುಗಳು ಕೆಳಗಿನಂತಿವೆ. 

ಅಪರಾಧ ತಡೆಗಟ್ಟಲು/ ಅಪರಾಧ ತಡೆಗಟ್ಟುವಿಕೆ

 • ಅಪರಾಧಿಗಳ ಮೇಲೆ ಕಣ್ಣಿಡುವುದು.
 • ದಾಖಲೆಗಳ ಪರಿಶೀಲನೆ.
 • ಗಸ್ತು ತಿರುಗುವುದು, ಸಂಚಾರಿ ಮತ್ತು ಸ್ಥಿರ ಗಸ್ತು, ಅನಿರೀಕ್ಷಿತ ತಡೆ (ನಾಕಾಬಂದಿ) ತರಬೇತಿ ನೀಡಲಾಗುತ್ತದೆ.

ಇತರೆ ಕರ್ತವ್ಯಗಳು

 • ತಿಳುವಳಿಕೆ ಇಲ್ಲದವರ ವಿಷಯಗಳು, ಅಪಘಾತದಲ್ಲಿ ಸಾವೀಗೀಡಾಗಿರುವ ಆಕಸ್ಮಿಕ ಬೆಂಕಿ ಇತರೆ ವಿಷಯಗಳ ವಿಚಾರಣೆ.
 • ತಪ್ಪಿಸಿಕೊಂಡ ವ್ಯಕ್ತಿಗಳ ಬಗ್ಗೆಗಿನ ವಿಚಾರಣೆ
 • ಪರದೇಶದವರ ನೊಂದಾವಣೆ ಹಾಗೂ ಅವರಿಗೆ ಸಂಬಂಧಪಟ್ಟ ವಿಚಾರಣೆ.
 • ಖಜಾನೆ, ಬಾಲಾಪರಾಧಿಗಳು, ಓಡಿ ಹೋಗಿದ್ದ ಹೆಣ್ಣು ಮಕ್ಕಳಿಗೆ ರಕ್ಷಣೆ ಒದಗಿಸುವುದು.
 • ವ್ಯಕ್ತಿಯ ಶೀಲದ ಪ್ರಮಾಣತೆ, ಪಾಸ್ಪೋರ್ಟ್ ನೀಡಲು ವ್ಯಕ್ತಿಯ ಪೂರ್ವತ್ವ ವಿಚಾರ, ಶಸ್ತ್ರ ಪರವಾನಿಗಿ (ರಹದಾರಿ) ಹಾಗೂ ಇನ್ನಿತರೆ ರಹದಾರಿಗಳಿಗೆ, ಸರ್ಕಾರಿ (ಕೆಲಸ) ಹುದ್ದೆಗಳಿಗೆ, ಮನೆಕೆಲಸದ ಬಗ್ಗೆ ವಿಚಾರಣೆ ಬೇಕೆನಿಸಿದಾಗ ಮಾಡಬೇಕಾಗುತ್ತದೆ.  ಇತ್ಯಾದಿ.
 • ಸಮಾಜದ ಬಲಹೀನ ವರ್ಗಗಳಿಗಾಗಿ ವಿಧಿಸಲ್ಪಟ್ಟ ಕಾನೂನುಗಳನ್ನು ಕಾರ್ಯಗತಗೊಳಿಸುವುದು ಹಾಗೂ ಅವರ ಸಾಮಾಜಿಕ ಪರಿಸ್ಥಿತಿಯನ್ನು ಗಮನಿಸುವುದು.  (ಬೇರ್ಪಡುತ್ತಿರುವ ಸಂಸಾರಗಳಿಗೆ ಸಹಾಯ ನೀಡುತ್ತಾರೆ)  ಮೈಸೂರು ನಗರ ಪೊಲೀಸರು ಬೇರ್ಪಡೆಯಾಗುತ್ತಿರುವ ಸಂಸಾರಗಳನ್ನು ಸರಿಪಡಿಸಲು ಪ್ರಯತ್ನ ಮಾಡುತ್ತಾರೆ.  ಮಾದಕ ದ್ರವ್ಯ ವ್ಯವಸನಿಗಳಲ್ಲಿ ಸುಧಾರಣೆ ತರಲು, ಸಾಮಾಜಿಕ ಪಿಡುಗು ನಿವಾರಿಸಲು ಹಾಗೂ ಇಂದಿನ ಸುವ್ಯವಸ್ಥಿತ, ಸ್ವಾತಂತ್ರ್ಯ ಸಮಾಜದಲ್ಲಿನ ಜೀವನವನ್ನು ಸುಧಾರಿಸಲು (ಶ್ರಮಿಸುತ್ತಾರೆ).  ಇತರೆ ಸರ್ಕಾರಿರೇತರ ಸಂಸ್ಥೆಗಳೊಂದಿಗೆ ಪರಸ್ವರ ಮಾತನಾಡಿ, ಉದ್ದೇಶ ಕಾರ್ಯಗತಗೊಳಿಸಲು ಶ್ರಮಿಸುತ್ತಾರೆ.
 • ಮೈಸೂರು ನಗರ ಪೊಲೀಸರು, ಓಡಿ ಹೋದ ಮಕ್ಕಳು ಅವರವರ ಮನೆಗೆ ಸೇರಿಸುವಲ್ಲಿ, ನಿರಾಶ್ರಿತ ಮಹಿಳೆಯರಿಗೆ ಗೌರವಾನ್ವಿತ ಜೀವನ ಸಾಗಿಸಲು ಹಾಗೂ ಸಾಮಾಜಿಕ ಹಾಗೂ ವ್ಯೆಯಕ್ತಿಕ ಜೀವನದ ಭೋದನೆ ನೀಡಿ ಸಹಾಯಿಸುತ್ತಾರೆ.
 • ಸಮಾಜಿಕ ಗಲಭೆಗಳನ್ನೊಳಗೊಂಡ ಕೋಮು ಗಲಭೆ, ಪ್ರಕೃತಿ ವಿಕೋಪ ಮೊದಲಾದವುಗಳಿಗೆ ಬಲಿಯಾದಂತಹರವರಿಗೆ ಪರಿಹಾರ ಹಾಗೂ ಪುನರ್ವಸತಿ ನೀಡುವಲ್ಲಿ ಕಾರ್ಯಶೀಲರಾಗಿ, ವ್ಯವಸ್ಥಿತ ರೀತಿಯಲ್ಲಿ ಆಹಾರ, ಬಟ್ಟೆ, ಔಷಧಿ, ರಕ್ತ ಹಾಗೂ ಹಣವನ್ನು ಸಂಗ್ರಹಿಸಿ ನೀಡುತ್ತಾರೆ.
 • (AIDS) ಏಡ್ಸ್ನ ಬಗ್ಗೆಯು ತಿಳುವಳಿಕೆ ನೀಡುವಲ್ಲಿ ಮೈಸೂರು ಸಂಚಾರಿ ಪೊಲೀಸರು ರುವಾರಿಗಳಾಗಿದ್ದಾರೆ. 
 • ಮಂಡಳಿಗಳ ಮೂಲಕ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಹಂತಗಳಲ್ಲಿ ಪೊಲೀಸರ ಭಾಗವಹಿಸುವಿಕೆ. (ನೆರೆಹೊರೆಯವರಿಂದ ವೀಕ್ಷಣೆ ಪದ್ಧತಿ)

 

ಮೈಸೂರು ನಗರ ಪೊಲೀಸ್, ಮಿರ್ಜಾ ರಸ್ತೆ, ನಜರ್ಬಾದ್
ಮೈಸೂರು, ಕರ್ನಾಟಕ, ಭಾರತ
ದೂರವಾಣಿ: 0821 2418100, 2418101, 2418102
ಕಂಟ್ರೋಲ್ ರೂಮ್: 100, 0821 - 2418139/ 2418339
ಇಮೇಲ್: mysorecitypolice@gmail.com

© ಕೃತಿಸ್ವಾಮ್ಯ ಮೈಸೂರು ನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಅಂತರ್ಜಾಲ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®