ENGLISH   |   KANNADA

Blogದಿನಾಂಕ;13.08.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:14.08.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 191       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ಉದಯಗಿರಿ ಠಾಣೆ

ದಿನಾಂಕ: 12-08-2019 ರಂದು ರಾತ್ರಿ ಸುಮಾರು 20-30 ಗಂಟೆಯಲ್ಲಿ ಪಿರ್ಯಾದಿ ಅಮ್ಜದ್ ಪಾಷಾ ರವರು ಸುಹೇಲ್ ಎಂಬುವವರ ಗೋಡೌನ್ ನಲ್ಲಿ ಕುರಿಗಳನ್ನು ಕಟ್ಟಿ ಹಾಕುತ್ತಿದ್ದಾಗ, ಅದೇ ಸಮಯದಲ್ಲಿ ರಾಜೀವ್ ನಗರ ವಾಸಿ ರೆಹಮತ್ ಎಂಬುವನೂ ಸಹ ತನ್ನ ಕುರಿಗಳನ್ನು ಕಟ್ಟಿತ್ತಿದ್ದು, ಪಿರ್ಯಾದಿಯನ್ನು ಉದ್ದೇಶಿಸಿ ಕುರಿಗಳನ್ನು ಆ ಕಡೆ ಕಟ್ಟು ಎಂದು ಏರಿದ ಧ್ವನಿಯಲ್ಲಿ ಹೇಳಿದ್ದು, ಪಿರ್ಯಾದಿಯವರು ಪ್ರತಿ ದಿನ ಇಲ್ಲಿಯೇ ಕಟ್ಟುವುದು ಎಂದು ಹೇಳಿದ್ದಾಗ, ರೆಹಮತ್ ನು ಪಿರ್ಯಾದಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಏಕಾಏಕಿ ತನ್ನ ಕೈನಿಂದ ಪಿರ್ಯಾದಿಯ ಕೆನ್ನೆಗೆ ಹೊಡೆದು, ನಂತರ ಮರದ ದೊಣ್ಣೆಯನ್ನು ತೆಗೆದುಕೊಂಡು ಹಿಂದಿನಿಂದ ಬಂದು ಪಿರ್ಯಾದಿಯ ತಲೆಗೆ ಬಲವಾಗಿ ಹೊಡೆದು ತೀವ್ರವಾದ ರಕ್ತಗಾಯ ಉಂಟು ಮಾಡಿದ್ದು, ನಂತರ ಪಿರ್ಯಾದಿಯನ್ನು ಉದ್ದೇಶಿಸಿ ಇನ್ನೊಂದು ಸಾರಿ ನನ್ನ ತಂಟೆಗೆ ಬಂದರೆ ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲವೆಂದು ಕೊಲೆ ಬೆದರಿಕೆ ಹಾಕಿರುತ್ತಾನೆ. ಸದರಿಯವನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

8

ಮಹಿಳಾ ದೌರ್ಜನ್ಯ

ಪ್ರಕರಣ

01

ಮಹಿಳಾ ಠಾಣೆ

ಪಿರ್ಯಾದುದಾರರಾದ  ಪ್ರೇಮಕುಮಾರಿಯವರು  ಪಿರ್ಯಾದಿಯು ಈಗ್ಗೆ 20 ವರ್ಷಗಳ ಹಿಂದೆ ಆರೋಪಿ-ಮಂಜುನಾಥ್ ಎಂಬುವವರನ್ನು ಮದುವೆಯಾಗಿದ್ದು, ಆರೋಪಿಗೆ ಕುಡಿಯುವ ಅಭ್ಯಾಸವಿದ್ದು, ಪ್ರತಿದಿನ ಬೈದು, ಹೊಡೆದು ಹಿಂಸೆ ನೀಡುತ್ತಿದ್ದು, ದಿನಾಮಕ;29.07.2019 ರಂದು ಬೆಳಿಗ್ಗೆ 8.30 ಗಂಟೆಯಲ್ಲಿ ಹಣದ ವಿಚಾರವಾಗಿ ಜಗಳ ತೆಗೆದು ಪಿರ್ಯಾದಿಗೆ ಪೈಪ್ನಿಂದ ಪಿರ್ಯಾದಿಗೆ ಮೈಕೈಗೆ ಹೊಡೆದು , ಪಿರ್ಯಾಧಿಗೆ ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿ ಹಾಗೂ ಆಕೆಯ ತಾಯಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ಇತ್ಯಾದಿಯಾಗಿ ಆರೋಪಿಯ ವಿರಿದ್ದ ಕಾನೂನು ಕ್ರಮಕ್ಕೆ ಇದ್ದ  ದೂರನ್ನು ಸ್ವೀಕರಿಸಿ, ಪ್ರಕರಣವನ್ನು ದಾಕಲಿಸಿ, ಪ್ರಕರಣವು ಮಹಿಳಾ ದೌರ್ಜನ್ಯ ಕಾಯ್ದೆಯಡಿ ಬರುವುದಿಂದ ಸದರಿ ಪ್ರಕರಣವನ್ನು ನೋಂದಾಯಿಸಿರುತ್ತೆ.

 

9

ರಸ್ತೆ ಅಪಘಾತ

03

ಕೆ.ಆರ್ ಸಂಚಾರ ಠಾಣೆ

ದಿನಾಂಕ: 13-08-2019 ರಂದು ಮದ್ಯಾಹ್ನ 14-15 ಗಂಟೆ ಸಮಯದಲ್ಲಿ ಪಿರ್ಯಾದಿ ನಾಗೇಗೌಡ ರವರು ಹೋಂಡಾ ಆಕ್ಟೀವಾ ಸ್ಕೂಟರ್‌ ನಂ. KA-09-ET-4219 ರಲ್ಲಿ ಹಿಂಭಾಗ ಪುಷ್ಪ ರವರನ್ನು ಕೂರಿಸಿಕೊಂಡು ಬೋಗಾದಿ ಕಡೆಯಿಂದ ಮನೆ ಕಡೆಗೆ ಬೋಗಾದಿ ಸಿಗ್ನಲ್‌ ಬಳಿ ಸವಾರಿ ಮಾಡಿಕೊಂಡು ಬರುತ್ತಿದ್ದಾಗ ಅವರ ಎಡಭಾಗದಿಂದ KA-12-Z-0764 ಕಾರಿನ ಚಾಲಕಿ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಸ್ಕೂಟರ್‌ಗೆ ಡಿಕ್ಕಿ ಮಾಡಿ ಕೆಳಗೆ ಬೀಳಿಸಿ ಹೋಗುತ್ತಿದ್ದಾಗ ಅಲ್ಲಿದ್ದ ಸಾರ್ವಜನಿಕರು ತಡೆದು ನಿಲ್ಲಿಸಿದ್ದು, ಪಿರ್ಯಾದಿ ಮತ್ತು ಪುಷ್ಪ ರವರು ಸ್ಕೂಟರ್‌ ಸಮೇತ ಕೆಳಗೆ ಬಿದ್ದಾಗ ಅಲ್ಲಿನ ಸಾರ್ವಜನಿಕರು ಅವರನ್ನು ಉಪಚರಿಸಿದ್ದು, ಇದರಿಂದ ಪಿರ್ಯಾದಿಗೆ ಎಡಗಾಲು ಹಾಗೂ ಎಡರುಂಡಿ ಮತ್ತು ಮೊಣಕಾಲುಗಳಿಗೆ ಪೆಟ್ಟಾಗಿರುತ್ತೆ, ಇದಕ್ಕೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಪಿರ್ಯಾದಿಯು ಅವರ ಮನೆಯಲ್ಲಿ ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತೆ.

ಕೆ.ಆರ್ ಸಂಚಾರ ಠಾಣೆ

ದಿನಾಂಕ 06/08/2019 ರಂದು ಸಂಜೆ ಸುಮಾರು 06.30 ಗಂಟೆಯಲ್ಲಿ ಪಿರ್ಯಾದಿ  ಶಂಕರ್‌.ಎಂ.ಎನ್‌ ರವರು ತನ್ನ ಸ್ನೇಹಿತನ  ಪಲ್ಸರ್‌ ಮೋಟಾರ್‌  ಸೈಕಲ್‌ ನಂ ಕೆ.ಎ-55-ಎಲ್‌-5137 ರಲ್ಲಿ  ಅಶೋಕ ಪುರಂ 4ನೇ ಕ್ರಾಸ್‌ ನಲ್ಲಿರುವ ಸ್ನೇಹಿತನ ಮನಗೆ ಹೋಗಿದ್ದು ವಾಪಸ್ಸು  4 ನೇ ಕ್ರಾಸ್‌ ರಸ್ತೆಯಲ್ಲಿ ಬರುವಾಗ ಎಡಭಾಗದಿಂದ  ಗೂಡ್ಸ್‌ ಅಟೋರಿಕ್ಷಾ ನಂ ಕೆ,.ಎ-09-ಬಿ-8461 ರ ಚಾಲಕ ಅಟೋವನ್ನು ವೇಗವಾಗಿ  ಚಾಲನೆ ಮಾಡಿಕೊಂಡು ಬಂದು ಹಿಂಭಾಗದಿಂದ ಡಿಕ್ಕಿಮಾಡಿದ ಪರಿಣಾಮ  10 ಅಡಿಗಳವರೆಗೆ ಜಾಡಿಸಿಕೊಂಡು ಹೋಗಿದ್ದು  ಎಡಕಾಲಿಗೆ ಏಟಾಗಿದ್ದು ಅಲ್ಲೇ ಇದ್ದ ಮೋಹನ್‌ ಎಂಬುವರು ಜೆ.ಎಸ್.ಎಸ್ ಆಸ್ಪತ್ರೆಗೆ ಕರದುಕೊಂಡು ಹೋಗಿ ಸೇರಿಸಿದ್ದು ಗೂಡ್ಸ್ ಅಟೋ ಚಾಲಕ 6000 ರೂ ನೀಡಿದ್ದು  ಚಿಕಿತ್ಸೆ ವೆಚ್ಚವನ್ನು ಪೂರ್ತ  ನೀಡುವುದಾಗಿ ತಿಳಿಸಿದ್ದು ನಂತರ 80.000 ರೂ ಬಿಲ್‌ ಆಗಿರುವುದಾಗಿ ತಿಳಿಸಿದಾಗ ಅಟೋ ಚಾಲಕ ಪೋನ್‌ ಕರೆ ಸ್ವೀಕರಿಸುತ್ತಿರುವುದಿಲ್ಲವೆಂದು  ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ  ದೂರನ್ನು ತನ್ನ ತಂದೆ ನಾಗರಾಜು ರವರ ಮುಖಾಂತರ ಕಳುಹಿಸುತ್ತಿದ್ದು  ಡಿಕ್ಕಿಮಾಡಿದ ಅಟೋ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದುದೂರಿನ ಸಾರಾಂಶ.

ಕೆ.ಆರ್ ಸಂಚಾರ ಠಾಣೆ

ಫಿರ್ಯಾದಿ ವೀಣಾ ರವರು ದಿನಾಂಕ 13/08/2019 ರಂದು ಬೆಳಿಗ್ಗೆ ಸುಮಾರು 09.45 ಗಂಟೆಯಲ್ಲಿ  ಜೆ.ಎಲ್.ಬಿ ರಸ್ತೆಯ ಮುಡಾ ಜಂಕ್ಷನ್ ನಲ್ಲಿ  ಅಶ್ವಿನಿ ಮತ್ತು ಪ್ರೇಮ ಎಂಬ ಇಬ್ಬರೂ ಕಾಲೇಜು ಹುಡುಗಿಯರು ನಡೆದುಕೊಂಡು ರಾಮಸ್ವಾಮಿ ಸರ್ಕಲ್ ಕಡೆಯಿಂದ ಬಂದು ಮುಡಾ ಜಂಕ್ಷನ್ ನ್ನು ಕ್ರಾಸ್ ಮಾಡಿ ಮುಡಾ ಆಫೀಸ್ ಕಡೆಯ ಜೀಬ್ರಾ ಕ್ರಾಸಿಂಗ್ ಹತ್ತಿರ ರಸ್ತೆಯ ಎಡಭಾಗದಲ್ಲಿ ಹೋಗುತ್ತಿದ್ದಾಗ  ಜೆ.ಎಲ್.ಬಿ ರಸ್ತೆಯಲ್ಲಿ ರಾಮಸ್ವಾಮಿ ಸರ್ಕಲ್ ಕಡೆಯಿಂದ ಒಂದು ಕೆಂಪು ಬಣ್ಣದ ಸ್ಕಾರ್ಪಿಯೋ ಕಾರ್  ನಂ   KA-03-AE-4593ನ್ನು ಪೃಥ್ವಿರಾಜ್ ಎಂಬುವನು ತುಂಬಾ ಸ್ಪೀಡಾಗಿ ಓಡಿಸಿಕೊಂಡು ಬಂದಿದ್ದು, ಮೂಡಾ ಜಂಕ್ಷನ್ ಕ್ರಾಸ್ ಮಾಡುವಾಗ ಎಡಕ್ಕಾದಂತೆ ಚಾಲನೆ ಮಾಡಿಕೊಂಡು ಹೋಗಿ ರಸ್ತೆಯ ಎಡಭಾಗದಲ್ಲಿ ಹೋಗುತ್ತಿದ್ದ ಇಬ್ಬರೂ ಹುಡುಗಿಯರಿಗೂ ಡಿಕ್ಕಿ ಮಾಡಿದಾಗ  ಇಬ್ಬರೂ ಹುಡುಗಿಯರು ಹಾರಿ ಮುಂದೆ ರಸ್ತೆಯ ಮೇಲೆ  ಬಿದ್ದಿದ್ದು  ಕಾರಿನ ಚಾಲಕ ಕಾರನ್ನು ಬಲಕ್ಕೆ ತಿರುಗಿಸಿದಾಗ ಕಾರಿನ ಎಡ ಮುಂದಿನ ಚಕ್ರ ರಸ್ತೆಯಲ್ಲಿ ಬಿದಿದ್ದ ಒಬ್ಬ ಹುಡುಗಿಯ ಮೇಲೆ ಹತ್ತಿದ್ದು, ಕಾರಿನ ಚಾಲಕ ಕಾರನ್ನು ನಿಧಾನಿಸದೇ ಅದೇ ವೇಗದಲ್ಲಿ ನೇರವಾಗಿ ಚಾಲನೆ ಮಾಡಿಕೊಂಡು ಹೊರಟು ಹೋಗಿದ್ದು ಹಿಂದೆ ಬಂದ ಸಾರ್ವಜನಿಕರು ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದು, ಜಂಕ್ಷನ್ ನಲ್ಲಿ ಕರ್ತವ್ಯದಲ್ಲಿದ್ದ  ಹೋಂ ಗಾರ್ಡ್  ವೀಣಾ ರವರು  ಕೂಡಲೇ ಕೆಳಕ್ಕೆ ಬಿದಿದ್ದ ಹುಡುಗಿಯ ಹತ್ತಿರ ಹೋಗಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು ಇಬ್ಬರನ್ನು ಆಟೋದಲ್ಲಿ ಕೂರಿಸಿ ಕೆ.ಆರ್.ಆಸ್ಪತ್ರೆಗೆ ಕಳುಹಿಸಿದ್ದು ನಂತರ ಸಾರ್ವಜನಿಕರು ಡಿಕ್ಕಿ ಮಾಡಿದ ಕಾರನ್ನು ಡಿ.ಸಿ ಆಫೀಸ್ ರಸ್ತೆಯಲ್ಲಿ ಹಿಡಿದುಕೊಂಡಿರುವುದಾಗಿ ತಿಳಿಸಿದ್ದರಿಂದ ಹೋಂ ಗಾರ್ಡ್  ವೀಣಾ ರವರು ಡಿ.ಸಿ.ಆಫೀಸ್ ರಸ್ತೆಗೆ ಹೋಗಿ ನೋಡಿದಾಗ ಕಾಲೇಜು ಹುಡುಗಿಯರಿಗೆ ಡಿಕ್ಕಿ ಮಾಡಿದ ಸ್ಕಾರ್ಪಿಯೋ ಕಾರ್ ಚಾಲಕ ವೇಗವಾಗಿ ಹೋಗಿ ರೋಟರಿ ಸ್ಕೂಲ್ ಜಂಕ್ಷನ್ ನಲ್ಲಿ ಎಡಕ್ಕೆ ತಿರುಗಿಸಿ, ಎಡಭಾಗದಲ್ಲಿ ನಿಂತಿದ್ದ ಮೋಟಾರ್ ಸೈಕಲ್ ವೊಂದಕ್ಕೆ ಡಿಕ್ಕಿ ಮಾಡಿ ನಂತರ ಮುಂದೆ ಹೋಗುತ್ತಿದ್ದ ಮುಡಾ ಕಛೇರಿಯ ಬುಲೆರೋ ಜೀಪ್ ನಂ KA-09-MA-1222  ಗೆ ಎಡ ಹಿಂಭಾಗಕ್ಕೆ ಡಿಕ್ಕಿ ಮಾಡಿದ್ದು, ಸಾರ್ವಜನಿಕರು ಸ್ಕಾರ್ಪಿಯೋ ಚಾಲಕನನ್ನು ಹಿಡಿದುಕೊಂಡಿದ್ದು, ಕಾರಿನಲ್ಲಿ ಮೂರು ಜನರಿದ್ದರೆಂದು, ಒಬ್ಬ ಓಡಿ ಹೋಗಿದ್ದು ಅಷ್ಟರಲ್ಲಿ ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸರು ಕೆ.ಆರ್.ಸಂಚಾರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದು ಅಪಘಾತಕ್ಕೆ ಸ್ಕಾರ್ಪಿಯೋ ಕಾರ್ ಚಾಲಕ ಪೃಥ್ವಿರಾಜ್.ಆರ್  ಎಂಬುವನು ಕಾರನ್ನು ವೇಗವಾಗಿ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿರುವುದೇ ಕಾರಣವಾಗಿದ್ದು ಕಾರು ಚಾಲಕನ ಮೆಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದು  ಮೂಡಾ ಜಂಕ್ಷನ್ ನಲ್ಲಿ ಕರ್ತವ್ಯದಲ್ಲಿದ್ದ ಹೋಂ ಗಾರ್ಡ್  ವಿಣಾ ರವರು ನೀಡಿರುವು ದೂರಿನ ಸಾರಾಂಶ

 

10

ವಂಚನೆ ಪ್ರಕರಣ 

01

ಲಕ್ಷ್ಮೀಪುರಂ ಠಾಣೆ

ದಿನಾಂಕ: 13-08-2019 ರಂದು ಪಿರ್ಯಾಧಿ ಶ್ರೀಕಂಠಯ್ಯ ರವರ ಮಗ ನಿತೀಶ್ ಕುಮಾರ್ ಮತ್ತು ನಂಜನಗೂಡು ದೇವರಮನಹಳ್ಳಿಯ ಮಹದೇವಯ್ಯ ರವರ ಮಗ ಮಂಥನ್ ಇಬ್ಬರು ಯುವರಾಜ ಕಾಲೇಜಿಗೆ 2019-20 ನೇ ಸಾಲಿಗೆ ಪ್ರಥಮ ಬಿ,ಸಿ.ಎ ತರಗತಿಗೆ ಪ್ರವೇಶಾತಿಗಾಗಿ ಬಂದಿದ್ದು, ಯುವರಾಜ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮಧು ಎಂ ಎಂಬವರು ಪರಿಚಯ ಮಾಡಿಕೊಂಡು ಮ್ಯಾನೇಜ್ಮೆಂಟ್ ಕೋಟಾದಲ್ಲಿ ಸೀಟ್ ದೊರೆಕಿಸಿಕೊಡುವುದಾಗಿ ನಂಬಿಸಿ ಸದರಿಯವರಿಂದ ಕ್ರಮವಾಗಿ 20,200/- ಮತ್ತು 18,000/- ರೂ ಗಳನ್ನು ಪಡೆದು ದಿನಾಂಕ: 03-06-2019 ರ ಚಲನ್ನ್ನು ತೋರಿಸಿ ನಿಮಗೆ ಆಡ್ಮಿಷನ್ ಆಗಿದೆ, ನಾಳೆಯಿಂದ ತರಗತಿಗೆ ಹಾಜರಾಗುವಂತೆ ನಂಬಿಸಿ ಮೋಸವೆಸಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

 

                         MYSURU CITY TRAFFIC VIOLATION CASES 

                                                DATE  :13-08-2019

SLNO

                      HEADS

                            NO. OF CASES

DR

KR

NR

SN

VV

TOTAL

1

TOTAL NUMBER OF FTVRS

80

45

96

-

40

261

2

TOTAL NUMBER OF CRR'S

516

602

424

234

553

2,329

3

TOTAL FINE AMOUNT COLLECTED

71,700

81,400

53,200

27,800

73,500

3,07,600

4

POLICE NOTICE ISSUED

-

-

-

-

 

-

5

PARKING TAGS

-

-

-

-

 

-

6

FATAL

-

1

-

-

 

1

7

NON FATAL

-

2

-

-

 

2

8

INTERCEPTOR CASES

-

80

40

-

60

180

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

8

15

10

3

10

46Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com